ಸೋಂಕಿತರಿಗೆ ಆಕ್ಸಿಜನ್ ವೆಂಟಿಲೇಟರ್ ವ್ಯವಸ್ಥೆಗೆ ಬಿಎಸ್‌ಪಿ ಒತ್ತಾಯ

ರಾಯಚೂರು.ಮೇ.೦೩- ರಾಜ್ಯದಲ್ಲಿ ಯಾವುದೇ ಪೂರ್ವ ತಯಾರಿ ಇಲ್ಲದೆ ಲಾಕ್‌ಡೌನ್ ಮಾಡಿರುವುದರಿಂದ ಬಡವರು, ಕೃಷಿ ಮತ್ತು ಕೂಲಿಕಾಮೀಕರು ರಸ್ತೆ ಬದಿ ವ್ಯಾಪಾರಿಗಳು ಆಟೋ, ಟ್ಯಾಕ್ಸಿ, ಲಾರಿ, ಬಸ್ ಹಾಗೂ ಇತರೆ ವೃತ್ತಿಪರ ಸಮಾಜಗಳಿಗೆ ಪ್ರತಿ ಕುಟುಂಬಕ್ಕೆ ೨೫ ಸಾವಿರ ನೀಡಬೆಕು ಹಾಗೂ ಬಿಪಿಎಲ್ ಕಾರ್ಡುದಾರರಿಗೆ ತಲಾ ೧೦ ಕೇಜಿ ಅಕ್ಕಿಯನ್ನು ನೀಡಬೇಕೆಂದು ಒತ್ತಾಯಿಸಿ ಬಹುಜನ ಸಮಾಜ ಪಕ್ಷ ಮುಖಂಡರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.
ಎಲ್ಲಾ ಕೊರೋನಾ ಸೋಂಕಿತರಿಗೆ ಆಸ್ಪತ್ರೆಗಳಲ್ಲಿ ಸೂಕ್ತ ಚಿಕಿತ್ಸೆ, ಹಾಸಿಗೆ, ಆಕ್ಸಿಜನ ಮತ್ತು ವೆಂಟಿಲೇಟರ್ ವ್ಯವಸ್ಥೆ ಮಾಡಬೇಕು ಹಾಗೂ ಖಾಸಗಿ ಆಸ್ಪತ್ರೆಗಳನ್ನು ಸುಪರ್ದಿಗೆ ಪಡೆದು ಜನರಿಗೆ ಬೇಕಾದ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡಬೇಕೆಂದು ಒತ್ತಾಯಿಸಿದರು.
ಸವಿತಾ ಸಮಾಜ, ಮಡಿವಾಳ ಸಮಾಜ, ವಿಶ್ವಕರ್ಮ ಸಮಾಜದ ಕಸಬುದಾರರು ಸೇರಿದಂತೆ ಇತರೆ ವೃತ್ತಿಪರ ಸಮಾಜಗಳು ವೃತ್ತಿಯನ್ನು ಏಕಾಏಕಿ ನಿಲ್ಲಿಸಿದರಿಂದ ಸಂಕಷ್ಟಕ್ಕೆ ಸಿಲುಕಿದೆ. ಆದ್ದರಿಂದ ಸರ್ಕಾರ ಎಲ್ಲಾ ಬಡವರಿಗೆ ಪ್ರತಿ ಖಾತೆಗೆ ೨೫ ಜಮ ಮಾಡಬೇಕೆಂದು ಆಗ್ರಹಿಸಿದರು.
ವಾಹನ ಸವಾರರು ಮತ್ತು ಆಸ್ಪತ್ರೆ ಸರ್ಕಾರಿ ಇಲಾಖೆ ಕೆಲಸ ಮಾಡುವವರಿಗೆ ಹೋಗುವ ಜನರಿಗೆ ಪೋಲಿಸರು ನೀಡುತ್ತಿರುವ ಕಿರುಕುಳ ನಿಲ್ಲಿಸಬೇಕು.
ಕೆಲಸವಿಲ್ಲದೆ, ಕೂಲಿಯಿಲ್ಲದೆ ಇರುವ ಸಂದರ್ಭದಲ್ಲಿ ಪೋಲಿಸರು ಜನರಿಗೆ ದಂಡ ಹಾಕುವದನ್ನು ಮತ್ತು ಥಳಿಸುವುದನ್ನು ಕೂಡಲೇ ನಿಲ್ಲಿಸಲು ಆದೇಶಿಸಬೇಕು.
ಪ್ರತಿ ತಾಲೂಕು ಮಟ್ಟದಲ್ಲಿ ಸೂಕ್ತ ಚಿಕಿತ್ಸೆ ಕೋವಿಡ್ -೧೯ ಕುರಿತು ಭಯ ಹೋಗಲಾಡಿದಿ ಅವರಲ್ಲಿ ವಿಶ್ವಾಸ ನಂಬಿಕೆ ಮತ್ತು ಧೈರ್ಯ ತುಂಬಲು ಕೊರೋನಾ ಆಪ್ತ ಸಮಾಲೋಚನಾ ಮತ್ತು ಮಾರ್ಗದರ್ಶನ ಮಾಹಿದಾರರ ತಂಡಗಳನ್ನು ರಕ್ಷಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸವರಾಜ ಬಂಢಾರಿ, ಎಂ.ಆರ್ ಭೇರಿ, ಹನುಮಂತಪ್ಪ ವಕೀಲ, ಜೈಭೀಮ ವಲ್ಲಭ, ವಿರೇಶ ಕುಮಾರ, ಬುಡ್ಡಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.