ಸೋಂಕಿತರನ್ನು ಮನವೊಲಿಸಿ ದಾಖಲಿಸಿ

ಲಕ್ಷ್ಮೇಶ್ವರ,ಮೇ28: ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ತಹಶಿಲ್ದಾರ ಎಸ್.ಆರ್. ಸಿದ್ಧನಗೌಡರ ಅವರು ಪ್ರತಿ ಗ್ರಾಮ ಪಂಚಾಯಿತಿ ತೆರಳಿ ಸೋಂಕಿನ ಲಕ್ಷಣ ಉಳ್ಳವರನ್ನು ಮನೆ ಆರೈಕೆಯಲ್ಲಿ ಇಡದೆ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್ ಆರೈಕೆ ಕೇಂದ್ರಕ್ಕೆ ಅವರನ್ನು ಮನವೊಲಿಸಿ ದಾಖಲಿಸಿ ಎಂದು ಪಿ.ಡಿ.ಒ ಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಹೇಳಿದರು.
ನಿನ್ನೆ ತಹಶಿಲ್ದಾರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಸಭೆ ಸೇರಿ ಆರೋಗ್ಯ ಇಲಾಖೆ, ಪಂಚಾಯಿತ್ ರಾಜ್ ಇಲಾಖೆ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸೋಂಕಿತರನ್ನು ಸಿಸಿಸಿಗೆ ಕರೆದು ಕೊಂಡು ಬರುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.