ಸೋಂಕಿಗೆ ಬಲಿಯಾದವರ ಶವ ಸಂಸ್ಕಾರಕ್ಕಿಲ್ಲ ಸ್ಥಳ

ಕೋಲಾರ,ಏ.೨೨: ಪಟ್ಟಣದಲ್ಲಿ ಕೊರೋನಾ ಎರಡನೇ ಅಲೆ ಶರವೇಗದಲ್ಲಿ ಹರಡುತ್ತಿದ್ದು. ಕೊರೋನಾ ಸೋಂಕಿಗೆ ಬಲಿಯಾದ ಜೀವಗಳನ್ನು ಶವಾಗಾರಗಳಲ್ಲಿ ಇಡಲು ಸ್ಥಳಾವಕಾಶ ಇಲ್ಲದಾಗಿದೆ. ಮತ್ತು ಶವ ಸಂಸ್ಕಾರ ಮಾಡಲು ಸಹ ಗಂಟೆಗಳು ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ) ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ರವರು ಅಭಿಪ್ರಾಯ ವ್ಯಕ್ತಪಡಿಸಿದರು. ಬಂಗಾರಪೇಟೆ ತಾಲ್ಲೂಕು ಕಛೇರಿ ಆವರಣದಲ್ಲಿ ಏರ್ಪಡಿಸಿದ್ದ ಕೊರೊನಾ ಜಾಗೃತಿ ಜಾಥಾ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ರೈತ ಸಂಘ (ಪುಟ್ಟಣ್ಣಯ್ಯ ಬಣ) ನೇತೃತ್ವವಹಿಸಿದ್ದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ರವರು ಮಾತನಾಡುತ್ತಾ. ಸಾರ್ವಜನಿಕರು ನಮ್ಮ ಕೋಲಾರ ಗಡಿಭಾಗದ ಜಿಲ್ಲೆಯಾದ ಕಾರಣ ನಮ್ಮ ಜಿಲ್ಲೆಯಾದ್ಯಂತ ರೈತ ಬಾಂಧವರು
ನಾ ಎರಡನೇ ಅಲೆಯು ವ್ಯಾಪಕವಾಗಿ ಹರಡುತ್ತಿದ್ದು, ಜನರು ಮತ್ತಷ್ಟು ತತ್ತರಿಸಿ ಹೋಗಿದ್ದಾರೆ. ಆದರೂ ಸರ್ಕಾರವು ತನ್ನ ನಿರ್ಲಕ್ಷ್ಯತೆಯನ್ನು ಮುಂದುವರೆಸಿರುವುದು ಖಂಡನೀಯ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ತಹಸೀಲ್ದಾರ್ ದಯಾನಂದ್ ಮಾತನಾಡಿ, ಸರ್ಕಾರವು ಇದೇ ಏ.೨೧ರಿಂದ ಮೇ.೪ರವರೆಗೆ ಸೆಮಿ ಲಾಕ್‌ಡೌನ್‌ಗೆ ಆದೇಶ ಮಾಡಿದ್ದು, ಸಾರ್ವಜನಿಕರು ಹಾಗೂ ವರ್ತರಕರು, ಹೋಟೆಲ್ ಮಾಲೀಕರು, ಪಾನಿಪುರಿ ಅಂಗಡಿ, ಪಾಸ್ಟ್‌ಪುಡ್ ಅಂಗಡಿಗಳಿಗೆ ಷರತ್ತುಬದ್ದ ಕೊರೊನಾ ತಡೆಗಟ್ಟುವ ಸರ್ಕಾರಿ ನಿಯಮಗಳನ್ನು ತಪ್ಪದೇ ಪಾಲಿಸಬೇಕು, ಕೋಲಾರ ಜಿಲ್ಲೆಯಲ್ಲಿಯೂ ಪ್ರಕರಣಗಳ ಸಂಖ್ಯೆ ದಿನೆದಿನೇ ಹೆಚ್ಚಾಗುತ್ತಿದ್ದರೂ ಸಾರ್ವಜನಿಕರು ನಿಯಮ ಪಾಲಿಸದಿರುವುದು ಸರಿಯಲ್ಲ ಎಂದು ಹೇಳಿದರು. ಸಾರ್ವಜನಿಕರು ಸರ್ಕಾರದ ನಿಮಯಗಳನ್ನು ಪಾಲನೆ ಮಾಡಿ, ಖಡ್ಡಾಯವಾಗಿ ಮಾಸ್ಕ್ ಧರಿಸುವುದು, ಹಾಗೂ ಸಾಮಾಜಿಕ ಅಂತರ ಪಾಲನೆ ಮಾಡುವುದು, ಸ್ಯಾನಿಟೇಸರ್, ಶುಚ್ಚಿತ ಪಾಲಿಸುವುದು. ಮತ್ತು ಪಟ್ಟಣದ ಎಲ್ಲಾ ಪಾನಿಪುರಿ ಅಂಗಡಿ, ಹೋಟೆಲ್ ಮಾಲೀಕರಿಗೆ ಬರೀ ಪಾರ್ಸಲ್ ಸರ್ವೀಸ್ ನೀಡಲು ಸೂಚಿಸಲಾಗಿದೆ. ಸರ್ಕಾರಿ ಆದೇಶ ಪಾಲಿಸದಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಿಎಸ್‌ಐ
ಜಗದೀಶ್‌ರೆಡ್ಡಿ ತಿಳಿಸಿದರು. ಈ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಶ್ರೀಧರ್, ಆರೋಗ್ಯ ನಿರೀಕ್ಷಕ ಗೋವಿಂದರಾಜು, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಾರುತಿನಗರಪ್ರಕಾಶ್, ಜಿಲ್ಲಾ ಉಪಾಧ್ಯಕ್ಷರುಗಳಾದ ಸ್ವಸ್ತಕ್‌ಶಿವು, ಕೂಟೇರಿ ನಾಗರಾಜ್, ವಡ್ಡಹಳ್ಳಿ ಮಂಜುನಾಥ್, ಬಂಗಾರಪೇಟೆ ತಾಲ್ಲೂಕು ಅಧ್ಯಕ್ಷ ಐತಾಂಡಹಳ್ಳಿ ಅಮರೇಶ್, ತಾಲ್ಲೂಕು ಮಹಿಳಾ ಅಧ್ಯಕ್ಷೆ ಮಾಗೊಂದಿ ರತ್ನಮ್ಮ, ಸುಕನ್ಯ, ಕಾಂತಮ್ಮ, ವರಲಕ್ಷ್ಮಮ್ಮ, ಅಲ್ಪಸಂಖ್ಯಾಂತರ ಅಧ್ಯಕ್ಷ ಮುಜ್ಹಾಮಿಲ್, ಬ್ರುಹಾನ್‌ವುದ್ದಿನ್, ಮಾಲೂರು ತಾಲ್ಲೂಕು ಅಧ್ಯಕ್ಷ ದೇವರಾಜ್, ನವೀನ್,
ಮುಳಬಾಗಿಲು ತಾಲ್ಲೂಕು ಅಧ್ಯಕ್ಷ ಬಂಗಾರಿ ಮಂಜುನಾಥ್, ನಲ್ಲಂಡಹಳ್ಳಿ ಯಲ್ಲೇಶ್, ಸತೀಶ್, ಮುಳಬಾಗಿಲು ನಗರ ಅಧ್ಯಕ್ಷ ಗಣೇಶ್, ಕ್ಯಾಸಂಬಳ್ಳಿ ಪ್ರತಾಪ್, ಕೃಷ್ಣಪ್ಪ, ನಾಯಕರಹಳ್ಳಿ ಮಂಜುನಾಥ್, ಸೊಂಟಿಗಾನಹಳ್ಳಿ ಅನಿಲ್, ಹಾಗೂ ಇನ್ನಿತರರು ಉಪಸ್ಥಿತರಿದ್ದರು.