ಸೊಹೈಲ್ ಖಾನ್ ಗೆ 50: ಫಿಲ್ಮೀ ಕತೆಯಂತೆಯೇ ಸೊಹೈಲ್ ಪ್ರೇಮ ಕತೆಯೂ!

ನಟ ಸಲ್ಮಾನ್ ಖಾನ್ ಅವರ ಕಿರಿಯ ಸಹೋದರ, ಖ್ಯಾತ ಲೇಖಕ ಸಲೀಂ ಖಾನ್ ರ ಮಗ ಸೊಹೈಲ್ ಖಾನ್ ರಿಗೆ ನಿನ್ನೆ ೫೦ವರ್ಷ ತುಂಬಿತು. ೨೦ ಡಿಸೆಂಬರ್ ೧೯೭೦ ರಂದು ಮುಂಬೈಯಲ್ಲಿ ಜನಿಸಿದ ಸೊಹೈಲ್ ಖಾನ್ ಸಲ್ಮಾನ್ ರ ಜೊತೆ ಫಿಲ್ಮ್ ಟ್ಯೂಬ್ ಲೈಟ್ ನಲ್ಲಿ ಮೊದಲಿಗೆ ಕಾಣಿಸಿದ್ದರು. ಇದಲ್ಲದೆ ಫಿಲ್ಮ್ ’ಲವ್ ಯಾತ್ರಿ’ ಮತ್ತು ’ದಬಂಗ್ ೩’ ಫಿಲ್ಮ್ ನಲ್ಲಿಯೂ ಸೊಹೈಲ್ ಖಾನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡವರು. ಸೊಹೈಲ್ ಖಾನ್ ರ ಫಿಲ್ಮ್ ಕ್ಯಾರಿಯರ್ ವಿಶೇಷ ಅನಿಸದಿದ್ದರೂ ಅವರ ಲವ್ ಲೈಫ್ ತುಂಬಾ ಚರ್ಚೆಯಾಗಿತ್ತು .


ಸೊಹೈಲ್ ಖಾನ್ ಸೀಮಾ ಸಚ್ದೇವ್ ಅವರನ್ನು ವಿವಾಹವಾಗಿದ್ದರು. ಇವರ ಪ್ರೇಮಕಥೆ ಯಾವುದೇ ಸಿನಿಮಾ ಕಥೆಗಿಂತ ಕಡಿಮೆ ಇಲ್ಲ.
ಇತ್ತೀಚೆಗೆ ನೆಟ್ ಫ್ಲಿಕ್ಸ್ ನ ಇವರ ಸೀರೀಸ್ FABULOUS LIVES OF BOLIYWOOD WIVES ಬಹಳ ಪ್ರಸಿದ್ಧಿ ಪಡೆದಿದೆ.
ಸೊಹೈಲ್ ಖಾನ್ ಓಡಿ ಹೋಗಿ ಮದುವೆಯಾದ ನಟ ಅಂದರೆ ಆಶ್ಚರ್ಯ ಪಡುವಿರಿ.
ಸೀಮಾ ಸಚ್ದೇವ್ ದೆಹಲಿಯ ನಿವಾಸಿ . ಫ್ಯಾಶನ್ ಡಿಸೈನಿಂಗ್ ಕ್ಷೇತ್ರದಲ್ಲಿ ಕೆರಿಯರ್ ಸ್ಥಾಪಿಸುವುದಕ್ಕಾಗಿ ಮುಂಬೈಗೆ ಬಂದವರು. ಈ ನಡುವೆ ಸೀಮಾ ಮತ್ತು ಸೊಹೈಲ್ ರ ಮೊದಲ ಭೇಟಿ ನಡೆಯಿತು .
ಮೊದಲ ಭೇಟಿಯಲ್ಲೇ ಇವರಿಬ್ಬರಲ್ಲಿ ಪ್ರೇಮ ಅಂಕುರಿಸಿತ್ತು. ನಂತರ ಇಬ್ಬರೂ ಜೊತೆಯಾಗಿ ತಿರುಗಾಡಲು ಆರಂಭಿಸಿದರು. ಆದರೆ ಮದುವೆಯಾಗಲು ನಿಶ್ಚಯಿಸಿದರೆ ಸೀಮಾ ಸಚ್ದೇವ್ ಮನೆಯವರು ಈ ವಿವಾಹಕ್ಕೆ ತಯಾರಿರಲಿಲ್ಲ .


ನಂತರ ಇವರಿಬ್ಬರೂ ಒಂದು ಕಠಿಣ ನಿರ್ಧಾರಕ್ಕೆ ಬಂದರು.
ಯಾವ ದಿನ ಸೊಹೈಲ್ ಖಾನ್ ರ ಫಿಲ್ಮ್ ಪ್ಯಾರ್ ಕಿಯಾ ತೊ ಡರ್ನಾ ಕ್ಯಾ (೧೯೯೮) ರಿಲೀಸ್ ಆಯ್ತೋ ಇವರಿಬ್ಬರೂ ಮನೆಯಿಂದ ಓಡಿದರು. ಮತ್ತು ಆರ್ಯ ಸಮಾಜ ಮಂದಿರದಲ್ಲಿ ವಿವಾಹವಾದರು. ನಂತರ ಎರಡೂ ಮನೆಯವರು ಇವರ ವಿವಾಹವನ್ನು ಸ್ವೀಕರಿಸಿದರು .
ಈ ದಂಪತಿ ಅನಂತರ ನಿಕಾಹ್ ಕೂಡ ಮಾಡಿಕೊಂಡರು.
ಈ ದಂಪತಿಗೆ ಇಬ್ಬರು ಮಕ್ಕಳು. ನಿರ್ವಾಣ್ ಖಾನ್ ಮತ್ತು ಯೋಹಾನ್ ಖಾನ್.
ಸೀಮಾ ಫ್ಯಾಶನ್ ಡಿಸೈನರ್.ತನ್ನ ವಿವಾಹದ ನಂತರ ಸೊಹೈಲ್ ಮತ್ತು ಸೀಮಾ ಜೊತೆಗೂಡಿ ಎಂಟರ್ಟೈನ್ಮೆಂಟ್ ಬಿಸ್ನೆಸ್ ಆರಂಭಿಸಿದ್ದರು .
ನೋಡು ನೋಡುತ್ತಿದ್ದಂತೆ ಸೀಮಾ ಟಿವಿ ಶೋ ಮತ್ತು ಮೂವಿಯ ಲೀಡಿಂಗ್ ಫ್ಯಾಶನ್ ಡಿಸೈನರ್ ಆದರು. ಟಿವಿ ಸೀರಿಯಲ್ ಜಸ್ಸೀ ಜೈಸಿ ಕೋಯಿ ನಹೀ (೨೦೦೩ — ೨೦೦೭) ಯಲ್ಲಿ ಕಾಸ್ಟ್ಯೂಮ್ ಡಿಸೈನ್ ಸೀಮಾ ಸಚ್ದೇವ್ ಮಾಡಿದ್ದರು. ಈ ಸೀರಿಯಲ್ ನಿಂದ ಸೀಮಾ ಪ್ರಸಿದ್ಧಿ ಪಡೆದಿದ್ದರು .
ಸೀಮಾ ಅವರ ’ಬಾಂದ್ರಾ೧೯೦’ ಹೆಸರಿನ ಒಂದು ಬೂಟಿಕ್ ಇದೆ.
ಇದನ್ನು ಸುಜೈನ್ ಖಾನ್ ಮತ್ತು ಮಹೀಪ್ ಕಪೂರ್ ಜೊತೆಗೂಡಿ ನಡೆಸುತ್ತಾರೆ. ಇದಲ್ಲದೆ ಮುಂಬೈಯಲ್ಲಿ ಬ್ಯೂಟಿಸ್ಪಾ ಮತ್ತು ಕಲಿಸ್ತಾ ಹೆಸರಿನ ಸೆಲೂನ್ ಕೂಡಾ ಇದೆ.
ಸೊಹೈಲ್ ಖಾನ್ ತನ್ನ ಫಿಲ್ಮಿ ಕೆರಿಯರ್ ನ್ನು ೧೯೯೭ ರಲ್ಲಿ ನಿರ್ದೇಶಕರಾಗಿ ಆರಂಭಿಸಿದ್ದರು. ಮೊದಲ ಫಿಲ್ಮ್ ಸಂಜಯ್ ಕಪೂರ್, ಸಲ್ಮಾನ್ ಖಾನ್ ಮತ್ತು ಶಿಲ್ಪಾ ಶೆಟ್ಟಿ ಅಭಿನಯದ ’ಔಜಾರ್’ ನಿರ್ದೇಶನ ಮಾಡಿದ್ದರು. ಅನಂತರ ಸಲ್ಮಾನ್ ಖಾನ್ ರ ಫಿಲ್ಮ್ ’ಪ್ಯಾರ್ ಕಿಯಾ ತೊ ಡರ್ನಾ ಕ್ಯಾ’ (೧೯೯೮ )ನಿರ್ದೇಶನ ಮಾಡಿದ್ದರು. ಈ
ಫಿಲ್ಮ್ ಇವರಿಗೆ ಇಂಡಸ್ಟ್ರಿಯಲ್ಲಿ ಒಂದಿಷ್ಟು ಹೆಸರು ತಂದುಕೊಟ್ಟಿತು.


೨೦೦೨ರಲ್ಲಿ ಸೊಹೈಲ್ ರು ಮೈನೆ ದಿಲ್ ತುಝ್ಕೊ ದಿಯಾ ಮೂಲಕ ತನ್ನ ಅಭಿನಯದ ಕೆರಿಯರ್ ಆರಂಭಿಸಿದ್ದರು. ಅನಂತರ ಡರ್ನಾ ಮನಾ ಹೈ, ಲಕೀರ್, ಮೈನೆ ಪ್ಯಾರ್ ಕ್ಯೋಂ ಕಿಯಾ, ಫೈಟ್ ಕ್ಲಬ್, ಸಲಾಮ್ ಇಶ್ಕ್, ಹೀರೋಸ್, ಹೆಲೋ, ಆರ್ಯನ್, ಕೃಷ್ಣ ಕಾಟೇಜ್ ಇಂತಹ ಫಿಲ್ಮ್ ಗಳಲ್ಲಿ ಅಭಿನಯಿಸಿದ್ದಾರೆ.