ಸೊಸೈಟಿ 23ನೇ ವಾರ್ಷಿಕ ಸಭೆ

ನವಲಗುಂದ, ನ 14: ಸಣ್ಣ ಹೂಡಿಕೆಯಿಂದ ಅಪಾರಪ್ರಮಾಣದ ವ್ಯವಹಾರವನ್ನು ಸೊಸಾಯಿಟಿ ನಿಭಾಯಿಸಿಕೊಂಡು ಬರುತ್ತಿರುವುದು ಫಲಾನುಭವಿಗಳ ಸಹಕಾರ ತುಂಬಾ ಇದೆ ಎಂದು ದಿ. ನವಲಗುಂದ ಲಿಬರಲ್ ಅರ್ಬನ್ ಕೋ.ಆ ಸೊಸೈಟಿಯ ಅಧ್ಯಕ್ಷ ಡಾ.ಎಸ್.ಸಿ. ಚವಡಿ ಹೇಳಿದರು.
ಅವರು ಪಟ್ಟಣದ ಗಾಂಧಿ ಮಾರುಕಟ್ಟೆಯಲ್ಲಿರುವ ದಿ. ನವಲಗುಂದ ಲಿಬರಲ್ ಅರ್ಬನ್ ಕೋ.ಆ. ಸೊಸೈಟಿಯ 23 ನೇ ವಾರ್ಷಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ನಿವೃತ್ತ ಕಮರ್ಷಿಯಲ್ ಟಾಕ್ಸ್ಸ್ ಅಧಿಕಾರಿ ಜಿ.ವಿ. ಗೌಡಪ್ಪಗೋಳ ಮಾತನಾಡಿ, ಸಾಧನೆ ಮಾಡಬೇಕೆಂದರೆ ನಮ್ಮಲ್ಲಿ ಇದ್ದ ಹಣವನ್ನು ಸೊಸೈಟಿಯಲ್ಲಿ ತೊಡಗಿಸಿ ಚಿಕ್ಕ ಉದ್ಯೋಗಸ್ಥರಿಗೆ ಸಾಲದ ರೂಪದಲ್ಲಿ ನೀಡಿ, ಅವರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವುದರ ಜೊತೆಗೆ ಸೊಸಾಯಿಟಿಯನ್ನು ಲಾಭದಲ್ಲಿ ಕೊಂಡೊಯುವುದು ಶ್ರಮದ ಕೆಲಸವಾಗಿದೆ. ಈ ಸೊಸೈಟಿಯು ಸಹ ಸುಮಾರು ವರ್ಷಗಳಿಂದ ಅಭಿವೃದ್ದಿಗೊಳ್ಳುತ್ತಾ ಬಡ ಕುಟುಂಬಗಳಿಗೆ ಆಸರೆಯಾಗಿ ಮಾದರಿ ಸೊಸೈಟಿಯಾಗಿ ಬೆಳೆಯುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಪಟ್ಟಣದಲ್ಲಿ ವಿದ್ಯಾಭ್ಯಾಸ ಮಾಡಿ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ 354 ನೇ ರ್ಯಾಂಕ್ ಪಡೆದ ಮೇಘಾ ಮನೋಜ ಜೈನ್ ಅವರನ್ನು ಸಭೆಯಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಇದರ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ಎಮ್.ವಾಯ್.ಕಮತರ, ನಿದೇರ್ಶಕರಾದ ದೀಪಾ ಅಕ್ಕಿ, ಗಿರಿಜಾ ಮತ್ತೂರ, ಎನ್.ಸಿ. ಚವಡಿ, ಆರ್.ಎಸ್. ಸವದತ್ತಿ, ಎಸ್.ಬಿ. ಕೊಪ್ಪದ, ಬಿ.ಎಸ್. ಅಕ್ಕಿ, ಮಡಿವಾಳಪ್ಪ ಜಡಿ, ನಿಜಗುಣ ಶಿವಯೋಗಿ ಹಿರೇಮಠ. ವಿ.ಎಫ್. ಚುಳಕಿ, ತುಕಾರಾಮ ಜಾಧವ, ಗಣ್ಯರಾದ ಬಸವರಾಜ ಅಕ್ಕಿ, ಆರ್.ಬಿ. ಕಮತರ, ಶಂಭುಲಿಂಗಪ್ಪ ಹೊಳೆಯಣ್ಣವರ, ಅಣ್ಣಪ್ಪ ಬಾಗಿ, ಬಸಣ್ಣ ಹಕ್ಕರಕಿ, ಅಶೋಕ ಮಜ್ಜಿಗುಡ್ಡ, ಕೆ.ವಿ. ಹುಲಕೋಟಿ, ಶ್ರೀಕಾಂತ ಪಾಟೀಲ ಇತರರು ಇದ್ದರು. ಬಸವರಾಜ ಬಿಜಾಪೂರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.