ಸೊಳ್ಳೆ ನಿಯಂತ್ರಣ ವಿಧಾನಗಳ ಮಾದರಿ ಪ್ರದರ್ಶನ, ಬಹುಮಾನ ವಿತರಣೆ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಸೆ.೧೬;ಚಿತ್ರದುರ್ಗ ಜಿಲ್ಲಾಸ್ಪತ್ರೆ ಆವರಣದ ಜಿಲ್ಲಾ ತರಬೇತಿ ಕೇಂದ್ರದಲ್ಲಿ ಗುರುವಾರ ವಿಶ್ವ ಸೊಳ್ಳೆ ದಿನಾಚರಣೆ ಅಂಗವಾಗಿ ಜಿಲ್ಲಾ ಮಟ್ಟದ ಸೊಳ್ಳೆ ನಿಯಂತ್ರಣ ವಿಧಾನಗಳ ಮಾದರಿ  ಪ್ರದರ್ಶನ ಮತ್ತು ಬಹುಮಾನ  ವಿತರಣೆ ಕಾರ್ಯಕ್ರಮ ನಡೆಯಿತು.ಜಿಲ್ಲೆಯ ಆರು ತಾಲ್ಲೂಕುಗಳಿಂದ 18 ವಿದ್ಯಾರ್ಥಿಗಳು ಸೊಳ್ಳೆ ಮಾದರಿಗಳನ್ನು ತಯಾರಿಸಿಕೊಂಡು ಭಾಗವಹಿಸಿದ್ದು, ಉತ್ತಮ ಮಾದರಿಗಳನ್ನು  ಮೂರು ಜನ ತಿರ್ಪುಗಾರರು  ಆರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿದರು.5ನೇ ತರಗತಿಯಿಂದ 7ನೇ ತರಗತಿಯವರೆಗೆ 3 ವಿದ್ಯಾರ್ಥಿಗಳು ಆಯ್ಕೆಯಾದರು. 8 ತರಗತಿಯಿಂದ 10ನೇ ತರಗತಿಯವರೆಗೆ 3  ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಯಿತು. ಒಟ್ಟು  6 ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಮತ್ತು ಬಹುಮಾನ ವಿತರಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ  ರೋಗವಾಹಕ ಆಶ್ರೀತ  ರೋಗಗಳ ನಿಯಂತ್ರಣಾಧಿಕಾರಿ ಡಾ.ಎನ್. ಕಾಶಿ,  ಶಿಕ್ಷಣ  ಇಲಾಖೆ ವಿಷಯ ಪರೀಕ್ಷಕ ಚಂದ್ರಣ್ಣ, ಕೀಟಶಾಸ್ತ್ರಜ್ಞೆ ನಂದಿನಿ ಕಡಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಶ್ರೀನಿವಾಸ್, ಹೆಚ್.ಎ.ನಾಗರಾಜ, ಲೋಕೇಶ್, ಪಾಂಡು,  ನಾಗರಾಜ, ಟಿ. ಘನಶಾಮನಾಯ್ಕ,  ರಂಗನಾಥ, ಕಾವ್ಯ ಸೇರಿದಂತೆ ಎಲ್ಲಾ ಇಲಾಖೆ ಸಿಬ್ಬಂದಿ ವರ್ಗದವರು ಮತ್ತು ಶಾಲಾ ಶಿಕ್ಷಕರು ಇದ್ದರು.