ಸೊಳ್ಳೆ ಎಂಬ ನಿರ್ಲಕ್ಷ್ಯ ಬೇಡ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಮೇ.17:   ಡೆಂಗೀ ಜ್ವರ ಮತ್ತು ಚಿಕನ್ ಗುನ್ಯಾ ಜ್ವರವು  ಹಗಲು ಕಚ್ಚುವ ಈಡಿಸ್ ಎಂಬ ಸೊಳ್ಳೆಯಿಂದ ಹರಡುವ ವೈರಸ್ ಇದಾ ಗಿದ್ದು, ಇದು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಎಂದು(ಪ್ರಬಾರಿ)ಟಿಎಚ್ಓ ಬಿ. ಮಧು ಕುಮಾರ್ ತಿಳಿಸಿದರು.    
ಅವರು     ಇಂದು ಪಟ್ಟಣದ ಅರೋಗ್ಯಾಧಿಕಾರಿಗಳ  ಕಛೇರಿಯಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಡೆಂಗೀ ದಿನಾಚರಣೆ  ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಾ, ಡೆಂಗೀ ಈಡಿಸ್ ಎಂಬ ಸೊಳ್ಳೆ ಕಚ್ಚುವುದರಿಂದ ಮನುಷ್ಯನಿಗೆ ಮಾರಣಾಂತಿಕವಾಗಿರುತ್ತದೆ ಡೆಂಗೀ ಲಕ್ಷಣ ವಿಪರೀತ ತಲೆ  ನೋವು, ಹಾಗೂ ತಲೆ ಹಿಂಭಾಗದಲ್ಲಿ ನೋವು , ಕೀಳು ಮತ್ತು ಮಾಂಸ ಖಂಡಗಳ ನೋವು ವಾಕರಿಕೆ ವಾಂತಿ ಕಾಣಿಸಿಕೊಳ್ಳುತ್ತದೆ. ಈ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಸಮೀಪದ ಅರೋಗ್ಯ ಸಮುದಾಯ ಕೇಂದ್ರಗಳಲ್ಲಿನ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆಯನ್ನು ಪಡೆಯಿರಿ.
  ಸೊಳ್ಳೆ ಎಂಬ ನಿರ್ಲಕ್ಷ್ಯ ಮಾಡಬೇಡಿ,  ಸರ್ಕಾರಿ ಮತ್ತು ಸಂಘ ಸಂಸ್ಥೆಗಳ ಕಛೇರಿಯಲ್ಲಿ ಘನ ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಿ ಸ್ವಚ್ಛವಾಗಿಡಿ, ಹಾಗೂ ಮನೆ ಮುಂದಿನ ನೀರಿನ ತೊಟ್ಟಿ, ಡ್ರಂ, ಟ್ಯಾಂಕರ್ ಗಳಲ್ಲಿ ಸ್ವಚ್ಛ ನೀರಿನಲ್ಲಿ ಈ ಈಡಿಸ್ ಸೊಳ್ಳೆ ಉತ್ಪತ್ತಿಯಾಗುತ್ತವೆ, ಅದರಿಂದ ತೊಟ್ಟಿ, ಟ್ಯಾಂಕರ್, ಡೈರಿಗಳ ನೀರನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸ್ವಚ್ಛ ಗೊಳಿಸಿ. ವೃದ್ಧರು, ಬಾಣಂತಿಯರು ಮತ್ತು ಮಕ್ಕಳು ಮೈ ತುಂಬ ಬಟ್ಟೆ ಧರಿಸಿ, ರಾತ್ರಿ ಹೊತ್ತು ತಪ್ಪದೆ ಸೊಳ್ಳೆ ಪರದೆ , ಮುಲಾಮು ಔಷಧಗಳನ್ನು ಬಳಸಿ. ಎಲ್ಲಾರು ಒಟ್ಟಾಗಿ ಡೆಂಗೀ ತಡೆಯೋಣ ಜ್ವರ ನಿಯಂತ್ರಣದಲ್ಲಿ ಇರಿಸೋಣ ಎಂದು ತಿಳಿಸಿದರು.
   ಈ ಸಂದರ್ಭದಲ್ಲಿ ಡಾಕ್ಟರ್ ಸುಧಾ, ಡಾಕ್ಟರ್ ಶಿವಕುಮಾರ್, ಎಎನ್ ಓ ಕೊಂಡ್ಲಹಳ್ಳಿ, ಡಾ, ರಮೇಶ್ ಎಎನ್ ಓ ನಾಗ ಸಮುದ್ರ, ಶ್ರೀಮತಿ ಮಾರುತಮ್ಮ ಎಲ್ ಟಿ ಐ ಸಿ,ಯು ರಾಧಮ್ಮ  ಕಾ ಅ ಹಾಗೂ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.