ಸಂಜೆವಾಣಿ ವಾರ್ತೆ
ಸಂಡೂರು :ನ: 26: ಸೊಳ್ಳೆಗಳ ನಿಯಂತ್ರಣ ದಿಂದ ಮಾತ್ರ ಡೆಂಗೀ ತಡೆಯಲು ಸಾಧ್ಯ ಇಲ್ಲವಾದಲ್ಲಿ ವಿವಿಧ ರೀತಿಯ ರೋಗಗಳು ಹರಡುತ್ತವೆ ತಡೆಯುವುದು ಕಷ್ಟವಾಗುತ್ತದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ತಿಳಿಸಿದರು.
ಅವರು ವಡ್ಡು ಗ್ರಾಮದಲ್ಲಿ ಗುಂಪು ಸಭೆಗಳ ಮೂಲಕ ಡೆಂಗ್ಯೂ, ಚಿಕೂನ್ ಗುನ್ಯಾ ರೋಗಗಳು ಬರದಂತೆ ಮುಂಜಾಗ್ರತಾ ಕ್ರಮಗಳ ಕುರಿತು ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿ ಸೊಳ್ಳೆಗಳಿಂದ ಹರಡುವ ಕಾಯಿಲೆಗಳಾದ ಡೆಂಗ್ಯೂ, ಚಿಕೂನ್ ಗುನ್ಯಾ, ಮಲೇರಿಯಾ ರೋಗಗಳನ್ನು ತಡೆಯುವುದು ಸಾರ್ವಜನಿಕರ ಕೈಯಲ್ಲಿದೆ, ನೀರಿನ ಶೇಖರಿಸಿ ಇಡುವ ಮೂಲಗಳಲ್ಲಿ ಸೊಳ್ಳೆಗಳ ಉತ್ಪತ್ತಿಯಾಗುತ್ತಿವೆ, ಸೊಳ್ಳೆಗಳ ನಿಯಂತ್ರಣ ಮಾಡಲು ಮೊದಲು ಮನೆಯ ಮುಂಭಾಗದಲ್ಲಿ ಇಟ್ಟಿರುವ ಕೈಕಾಲು ತೊಳೆಯಲು ಬಳಕೆ ಮಾಡುವ ನೀರನ ತೊಟ್ಟಿ,ಬ್ಯಾರೆಲ್, ಚಿಪ್ಪು,ಬಾಟಲ್‍ಗಳನ್ನು ಸ್ವಚ್ಛ ಗೊಳಿಸಬೇಕು, ಮನೆಯ ಪರಿಸರದಲ್ಲಿ ಈಡಿಸ್ ಜಾತಿಯ ಸೊಳ್ಳೆಗಳು ಉತ್ಪತ್ತಿಯಾಗುತ್ತವೆ, ಸೊಳ್ಳೆಗಳು ಮನುಷ್ಯರಿಗೆ ಕಚ್ಚುವುದರಿಂದ ರೋಗಗಳು ಒಬ್ಬರಿಂದ ಮತ್ತೊಬ್ಬರಿಗೆ ಹರಡುತ್ತವೆ, ಸೊಳ್ಳೆಗಳ ನಿಯಂತ್ರಿಸಲು ವಾರದಲ್ಲಿ ಎರಡು ಬಾರಿ ನೀರು ಶೇಕರಿಸುವ ಡ್ರಮ್,ಬ್ಯಾರಲ್,ಗಡಿಗೆ, ಸಿಮೆಂಟ್ ತೊಟ್ಟಿಗಳನ್ನು ಸ್ವಚ್ಚವಾಗಿ ತೊಳೆದು ಒಣಗಿದ ನಂತರ ನೀರು ಶೇಕರಿಸಿ ಮುಚ್ಚಳ ಅಥವಾ ಬಟ್ಟೆಗಳಿಂದ ಕಟ್ಟಿ ಸೊಳ್ಳೆ ಮೊಟ್ಟೆಗಳು ಇಡದಂತೆ ಎಚ್ಚರಿಕೆ ವಹಿಸಬೇಕು, ಚರಂಡಿಯಲ್ಲಿ ಕಸಕಡ್ಡಿ ಹಾಕಬಾರದು, ವ್ಯರ್ಥ ನೀರು ಸರಾಗವಾಗಿ ಹರಿದು ಹೋಗುವಂತೆ ನೋಡಿಕೊಳ್ಳುವುದು, ಮಲಗುವಾಗ ಸೊಳ್ಳೆ ಪರದೆಗಳನ್ನು ಕಟ್ಟಿಕೊಂಡು ಮಲಗುವುದು,ಮೈತುಂಬ ಬಟ್ಟೆ ಧರಿಸುವುದು, ಮಸ್ಕಿಟೋ ಕಾಯಿಲ್, ಕ್ರೀಮ್ ಗಳನ್ನು ಬಳಸಿ ಸ್ವಯಂ ರಕ್ಷಣೆ ಮಾಡಿಕೊಳ್ಳುವುದು,ಸಂಜೆ ವೇಳೆ ಬಾಗಿಲು ಕಿಟಿಕಿಗಳಿಗೆ ಕರ್ಟನ್ ಹಾಕುವುದು, ಕೀಲು, ಮತ್ತು ಮೀನಗಂಡ ನೋವು, ಜ್ವರ, ವಾಂತಿ, ಬಾಯಿ ವಿಷ,ತಲೆ ನೋವು, ಇತ್ಯಾದಿ ಕಂಡು ಬಂದರೆ ಸ್ವಯಂ ಚಿಕಿತ್ಸೆ ಮಾಡಿ ಕೊಳ್ಳದೇ ಆಸ್ಪತ್ರೆಗೆ ಬಂದು ತಪಾಸಣೆ, ರಕ್ತ ಪರೀಕ್ಷೆ ಮಾಡಿಸುವುದು, ಮತ್ತು ಚಿಕಿತ್ಸೆ ಪಡೆಯುವುದರ ಬಗ್ಗೆ ಮಾಹಿತಿ ನೀಡಿ ಎಲ್ಲರಿಗೂ ಜಾಗೃತಿ ಮೂಡಿಸಲಾಯಿತು,
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವಿನೋದ್ ಕುಮಾರ್, ಎರ್ರಿಸ್ವಾಮಿ, ಮಣಿದೀರ, ಹನುಮೇಶ್, ಮಹಿಳೆಯರಾದ ವಿಜಯಕಲಾ, ಸಾಹಸ ಸಂಸ್ಥೆ ಮೇಲ್ವಿಚಾರಕಿ ಪಾರ್ವತಿ, ದೇವಮ್ಮ, ಭಾಗ್ಯಮ್ಮ, ಯಶೋಧ, ರೇಣುಕಾ, ಪದ್ಮಾವತಿ, ರೇಷ್ಮ, ಹಸೀನ್‍ಪರ್ವೀನಾ, ಕವಿತಾ, ಆಪ್ತ ಸಮಾಲೋಕ ಪ್ರಶಾಂತ್ ಕುಮಾರ್,ಹೆಚ್.ಐ.ಓ ಬಸವರಾಜ್,ಸಿ.ಹೆಚ್.ಓ ವಿಜಯಲಕ್ಷ್ಮಿ, ಆಶಾ ಕಾರ್ಯಕರ್ತೆ ಭಾರತಿ,ಪಾರ್ವತಿ ಇತರರು ಇದ್ದರು.