ಸೊಲ್ಲಾಪುರ ಸಿದ್ದರಾಮೇಶ್ವರ ಜಯಂತಿ ಆಚರಿಸಲು ಆಗ್ರಹ

ಕಾಳಗಿ:ಜ.9: ಜನೆವರಿ 14 ರಂದು ನಡೆಯುವ ಶರಣ ಶಿವಯೋಗಿ ದಾರ್ಶನಿಕ ಪುರುಷ ಸೊಲ್ಲಾಪುರದ ಸಿದ್ದರಾಮೇಶ್ವರ ಜಯಂತಿಯನ್ನು ತಾಲ್ಲೂಕಿನಾದ್ಯಂತ ಪ್ರತಿಯೊಂದು ಸರಕಾರಿ ಇಲಾಖೆಯಲ್ಲಿ ಆಚರಿಸಬೇಕೆಂದು ಕಾಳಗಿ ಭೋವಿ ವಡ್ಡರ ಸಮಾಜದ ಬಾಂದವರು ಗ್ರೇಡ್-1 ತಹಶಿಲ್ದಾರ ನೀಲಪ್ರಭ ಬಬಲಾದ ಅವರಿಗೆ ಆಗ್ರಹಿಸಿ ಮನವಿ ಸಲ್ಲಿಸಿದರು.

ದಾರ್ಶನಿಕರು, ಸಮಾಜದ ಸುಧಾರಕ ಶಿವಯೋಗಿ ಸಿದ್ದರಾಮರು ಒಂದೆ ಸಮಾಜಕ್ಕೆ ಸಿಮಿತವಲ್ಲ, ಎಲ್ಲಾ ‌ಸಮಾಜಕ್ಕೆ‌ ಸಿಮಿತ‌, ಎಲ್ಲಾ ಸಮುದಾಯದ ಎಳಿಗೆಯಲ್ಲಿ ಶೋಷಿತ ಭೋವಿ ಸಮಾಜದ ಏಳಿಗೆಗಾಗಿ ಶ್ರಮಿಸುತ್ತಿದ್ದಾರೆ.
2008ರಲ್ಲಿ ಸರಕಾರದ ಆದೇಶದಂತೆ ಸಿದ್ದರಾಮೇಶ್ವರ ಜಯಂತಿಯನ್ನು ಸರಕಾರದ ಪ್ರತಿ ಇಲಾಖೆಯಲ್ಲಿ ಆಚರಿಸಬೇಕೆಂದು ಆದೇಶಿಸಿದರು. ಕೆಲ ಕಛೇರಿಯಲ್ಲಿ ಆಚರಿಸುತ್ತಿಲ್ಲ. ಅದಕ್ಕಾಗಿ ಕಾಳಗಿ ತಾಲ್ಲೂಕಿನ ಪ್ರತಿ ಸರಕಾರಿ ಇಲಾಖೆಯಲ್ಲಿ ಸಂತ ಶಿವಯೋಗಿ ಸೊಲ್ಲಾಪುರದ ಸಿದ್ದರಾಮೇಶ್ವರ ಜಯಂತಿಯನ್ನು ಆಚರಿಸಬೇಕೆಂದು ಕಾಳಗಿ ಭೋವಿ ಸಮಾಜದ ಪದಾಧಿಕಾರಿಗಳು ಒತ್ತಾಯಿಸಿದರು.
ಬೋವಿ‌ ಸಮಾಜದ ಅಧ್ಯಕ್ಷ ಶರಣಪ್ಪ ಬೇಲೂರ, ಉಪಾಧ್ಯಕ್ಷ ದಶರಥ ಜಾದವ, ಹಣಮಂತ ವಡೆಯರಾಜ, ಸಮಾಜದ ಮುಖಂಡ‌ ಬಲರಾಮ ವಲ್ಯಾಪುರೆ ತಿಮ್ಮಯ್ಯ ಜಾದವ,ಭೀಮ, ಶ್ರೀಮಂತ ಮೇಳಕುಂದಿ, ತಾಯಪ್ಪ ದಂಡಗುಲಕರ್, ಮಂಜುನಾಥ ರಾಜಾಪುರ, ಹಣಮಂತ ದಂಡಗುಳಕರ್, ನಾಗೇಶ್ ವಲ್ಯಾಪುರೆ ಇದ್ದರು