ಸೊಲಬಕ್ಕ ಅವರಿಗೆ ಶ್ರದ್ಧಾಂಜಲಿ ಸಭೆ

ಗಂಗಾವತಿ ನ.21: ಡಾ.ಟಿ.ಬಿ.ಸೊಲಬಕ್ಕನವರ ನಿಧನದಿಂದ ಕಲಾ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಶ್ರೀ ನೀಲಕಂಠೇಶ್ವರ ಸಾಂಸ್ಕೃತಿಕ ಕಲಾ ವೇದಿಕೆ ಗೌರವಧ್ಯಕ್ಷ ಐಲಿ ಮಾರುತಿ ಹೇಳಿದರು.
ಅವರು ಗಂಗಾವತಿಯ ಪತ್ರಿಕಾಭವನದ ಮುಂಭಾಗದಲ್ಲಿ ಬಯಲಾಟ ಕಲಾವಿದರು ಆಯೋಜಿಸಿದ್ದ ಸೊಲಬಕ್ಕನವರ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಜಾನಪದ ಕ್ಷೇತ್ರದಲ್ಲಿ ಅಷ್ಟೇ ಕಳಕಳಿ ಹೊಂದಿದ್ದ ಸೊಬಕ್ಕನವರ್, ದೊಡ್ಡಾಟದ ಎಲ್ಲಾ ಕಲಾ ಪ್ರಕಾರಗಳಲ್ಲೂ ಸಂಶೋಧನೆ ನಡೆಸಿದ್ದರು. ಮರೆಯಾಗುತ್ತಿರುವ ಕಲೆಯನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ನಡೆಸಿದ್ದರು ಎಂದರು.
ಹೆಜ್ಜೆಗೆಜ್ಜೆ ಕಲಾ ಸಂಘದ ಅಧ್ಯಕ್ಷ ನಾಗರಾಜ್ ಇಂಗಳಗಿ ಮಾತನಾಡಿ, ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ ಬಯಲಾಟವನ್ನು ಜಾಗತಿಕ ಮಟ್ಟದಲ್ಲಿ ಬೆಳಗುವ ಮಹತ್ವಾಕಾಂಕ್ಷೆಯನ್ನು ಹೊಂದಿದ್ದರು. ಸೊಲಬಕ್ಕನವರ ನಿಧನ ದೊಡ್ಡಾಟಕ್ಕೆ ತುಂಬದ ನಷ್ಟ ಎಂದು ಕಳವಳ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನಾಗರಾಜ್ ನಾಗಪ್ಪ ಶಿರವಾರ ಕಲಾ ಸಂಘದ ಸಂಚಾಲಕ ವಿರುಫಾಕ್ಷಪ್ಪ ಶಿರವಾರ, ಶ್ರೀ ನೀಲಕಂಠೇಶ್ವರ ಸಾಂಸ್ಕøತಿಕ ಕಲಾ ವೇದಿಕೆ ಅಧ್ಯಕ್ಷ ಮೈಲಾರಪ್ಪ ಶಾವಿ,ಪದಾಧಿಕಾರಿಗಳಾದ ಜಕ್ಕಂಡಿ ಚಿದಾನಂದಪ್ಪ ಹಾಗು ಮಂಜುನಾಥ್ ಬಗನಾಳ್ ಇದ್ದರು.