ಸೊರಬತಾಲೂಕಿನಲ್ಲಿ ಬಿಜೆಪಿ ಪಕ್ಷ ‌ ಸದೃಢವಾಗಿದೆ      

ಸೊರಬ.ಎ.22; ತಾಲೂಕಿನಲ್ಲಿ ಬಿಜೆಪಿ ಪಕ್ಷವು ಸದೃಢವಾಗಿ ಸಂಘಟನೆಯಾಗಿದ್ದು ಮುಂಬರುವ ದಿನದಲ್ಲಿ ಅಧಿಕಾರವನ್ನು ಸ್ಥಾಪಿಸುವುದು ನಿಶ್ಚಿತವೆಂದು  ತಾಲೂಕು ಬಿಜೆಪಿ ಮಂಡಲದ ಅಧ್ಯಕ್ಷ  ಪ್ರಕಾಶ್ ತಲಕಾಲಕೊಪ್ಪ ಹೇಳಿದರು. ಪಟ್ಟಣದಲ್ಲಿ  ಭಾರತೀಯ ಜನತಾ ಪಕ್ಷದ ಚುನಾವಣಾ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ರಾಜ್ಯದಲ್ಲಿ ಬಸವರಾಜ ಬೊಮ್ಮಾಯಿ ಅವರ  ಅಭಿವೃದ್ಧಿಪರ ಚಿಂತನೆ ಹಾಗೂ ಸರ್ಕಾರದ ಸಾಧನೆಗಳನ್ನು ಕಂಡು ಜನರು ಬಿಜೆಪಿ ಪಕ್ಷವನ್ನು ಸೇರುತ್ತಿರುವುದು ರಾಜ್ಯದಲ್ಲಿ ಹಾಗೂ ತಾಲೂಕಿನಲ್ಲಿ ಬಿಜೆಪಿ ಪರವಾದ ವಾತಾವರಣ ನಿರ್ಮಾಣವಾಗಿದೆ ಎಂದ ಅವರು 24ನೇ ದಿನಾಂಕದಿಂದ  ಸಂಸದ ಬಿ ವೈ ರಾಘವೇಂದ್ರರವರು ತಾಲೂಕಿನ ಎಂಟು ಮಹಾಶಕ್ತಿ ಕೇಂದ್ರಗಳಲ್ಲಿ ಹಾಗೂ ಆರು ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಕೈಗೊಂಡು ಬಹಿರಂಗ ಸಭೆಯಲ್ಲಿ  ಮಾತನಾಡಲಿದ್ದಾರೆ. ಬೂತ್  ಅಧ್ಯಕ್ಷರು ಹಾಗೂ ಪೇಜ್ ಪ್ರಮುಖರು ಹಾಗೂ ಕಾರ್ಯಕರ್ತರು ಪ್ರತಿ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಬಿಜೆಪಿಯ ಅಭಿವೃದ್ಧಿಪರ ಸಾಧನೆಗಳ ಕರ ಪತ್ರವನ್ನು ಹಂಚುವ ಮೂಲಕ  ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದರು