ಸೊಯಾಬಿನ್ ಕಾಳಿನ ಆಂಬೊಡೆ

ಬೇಕಾಗುವ ಪದಾರ್ಥಗಳು:

  • ರಾತ್ರಿ ನೀರಿನಲ್ಲಿ ನೆನೆಸಿದ ಸೊಯಾಬಿನ್ ಕಾಳು – ೨ ಲೋಟ
  • ಪುದೀನಾ ಎಲೆ, ಸಬ್ಬಸ್ಸಿಗೆ ಸೊಪ್ಪು – ಅರ್ಧ ಲೋಟ
  • ಶುಂಠಿ ಪೇಸ್ಟ್ – ೨ ಚಮಚ
  • ಹಸಿಮೆಣಸಿನಕಾಯಿ ಪೇಸ್ಟ್ – ೪ ಚಮಚ
  • ಹೆಚ್ಚಿದ ಈರುಳ್ಳಿ – ೨ ಚಮಚ
  • ಇಂಗು – ರುಚಿಗೆ ತಕ್ಕಷ್ಟು
  • ಉಪ್ಪು – ರುಚಿಗೆ ತಕ್ಕಷ್ಟು
  • ಕೊತ್ತಂಬರಿ ಸೊಪ್ಪು – ರುಚಿಗೆ ತಕ್ಕಷ್ಟು
  • ಕರಿಬೇವು – ರುಚಿಗೆ ತಕ್ಕಷ್ಟು
  • ಕಡ್ಲೆಹಿಟ್ಟು – ಹಿಡಿಸುವಷ್ಟು
  • ಅಕ್ಕಿಹಿಟ್ಟು – ೨ ಚಮಚ

ವಿಧಾನ:
ನೆಂದಕಾಳನ್ನು ರುಬ್ಬಿ ನಂತರ, ಉಳಿದ ಎಲ್ಲಾ ಪದಾರ್ಥಗಳನ್ನು ಹಾಕಿ ಕಲೆಸಿ, ಬೇಕಾದರೆ ಹಿಡಿಸುವಷ್ಟು ನೀರು ಹಾಕಿ ಕಲೆಸಿ, ಉಂಡೆಮಾಡಿ ತಟ್ಟಿ, ಎಣ್ಣೆಯಲ್ಲಿ ಕೆಂಪಗೆ ಕರಿಯಬೇಕು.