ಸೊನ್ನ ಚೆಕ್‍ಪೋಸ್ಟ್ ಬಳಿ ದ್ವಿಚಕ್ರವಾಹನದಲ್ಲಿ ಅಕ್ರಮ ಸಾಗಣೆಯ 3.02 ಲಕ್ಷ ರೂ. ಪತ್ತೆ

ಕಲಬುರಗಿ,ಏ.7: ದ್ವಿಚಕ್ರವಾಹನದಲ್ಲಿ ಯಾವುದೇ ದಾಖಲೆ ಇಲ್ಲದೇ ಸುಮಾರು ಮೂರು ಲಕ್ಷ ಎರಡು ಸಾವಿರ ರೂ.ಗಳನ್ನು ತೆಗೆದುಕೊಂಡು ಹೋಗುತ್ತಿದ್ದ ಸಂದರ್ಭದಲ್ಲಿ ಕಲಬುರ್ಗಿ- ವಿಜಯಪುರ ಜಿಲ್ಲೆಯ ಗಡಿಯಲ್ಲಿರುವ ಸೊನ್ನ ಚೆಕ್‍ಪೋಸ್ಟ್ ಪತ್ತೆ ಹಚ್ಚಿದ ಘಟನೆ ವರದಿಯಾಗಿದೆ.
ಅಫಜಲಪುರ ಪಟ್ಟಣದ ಶ್ರೀಕಾಂತ್ ಮ್ಯಾಳೇಸಿ ಅವರಿಗೆ ಈ ಹಣ ಸೇರಿದೆ ಎನ್ನಲಾಗಿದೆ. ದ್ವಿಚಕ್ರವಾಹನದಲ್ಲಿ ಮಹಾರಾಷ್ಟ್ರದ ನಾಗಣಸೂರಿಗೆ ಹಣ ತೆಗೆದುಕೊಂಡು ಹೋಗುತ್ತಿದ್ದೆ. ಆ ಹಣ ಅಕ್ರಮ ಅಲ್ಲ. ಬದಲಾಗಿ ತೊಗರಿ ಮಾರಾಟದ ಹಣ ಇದೆ ಎಂದು ಶ್ರೀಕಾಂತ್ ಮ್ಯಾಳೇಸಿ ಅವರು ಹೇಳಿದರು. ಆ ಕುರಿತು ದಾಖಲೆಗಳನ್ನು ಪೋಲಿಸರು ಕೇಳಿದರು. ಆದಾಗ್ಯೂ, ಹಣಕ್ಕೆ ಯಾವುದೇ ದಾಖಲೆಗಳನ್ನು ಅವರು ತೋರಿಸದೇ ಇದ್ದುದರಿಂದ ಆ ಹಣವನ್ನು ಪೋಲಿಸರು ತಮ್ಮ ವಶಕ್ಕೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಸಿಪಿಐ ರಾಜಶೇಖರ್ ಬಡದೇಸರ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.