ಸೊಂಟದಲ್ಲಿ ಪತ್ತೆಯಾದ 7.5 ಲಕ್ಷ ರೂಪಾಯಿ ಹಣ ವಶ

ದಾವಣಗೆರೆ.ಏ.7; ದಾಖಲೆ ಇಲ್ಲದೆ ಸೊಂಟಕ್ಕೆ ಹಣ ಕಟ್ಟಿಕೊಂಡು ಹೋಗುತ್ತಿದ್ದ ಇಬ್ಬರು ಚೆಕ್ ಪೋಸ್ಟ್ ಬಳಿ ಲಾಕ್ ಆಗಿದ್ದಾರೆ. 7.5ಲಕ್ಷ ಹಣವನ್ನು ಜಿಲ್ಲೆಯ ಹೊನ್ನಾಳಿ ನ್ಯಾಮತಿ ತಾಲೂಕಿನ ಜೀನಹಳ್ಳಿ ಚೆಕ್ ಪೊಸ್ಟ್​​ನಲ್ಲಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.ಬೈಕ್ಮೇಲೆ ತೆರಳುತ್ತಿದ್ದವರುನ್ನು ಶಂಕೆಯಿಂದ ಚೆಕ್ ಪೊಸ್ಟ್​​ ಸಿಬ್ಬಂದಿ ತಪಾಸಣೆ ನಡೆಸಿದಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಪಾಸಣೆ ವೇಳೆ ಸೊಂಟದಲ್ಲಿ ಪತ್ತೆಯಾದ 7.5 ಲಕ್ಷ ರೂಪಾಯಿ ಹಣವನ್ನು ವಶಕ್ಕೆ ಪಡೆದಿದ್ದಾರೆ.ಸೈಫುಲ್ಲಾ ಮತ್ತು ಕುಮಾರ್ ಬೈಕ್ ಮೇಲೆ ತೆರಳುತ್ತಿದ್ದರು.ಇಬ್ಬರು ಶಿಕಾರಿಪುರ ಮೂಲದರಾಗಿದ್ದು, ವಿಚಾರಣೆ ವೇಳೆ ಸರಿಯಾದ ಮಾಹಿತಿ ನೀಡದೇ ದಾವಣಗೆರೆ, ಹೊನ್ನಾಳಿಯಿಂದ ಬಂದಿದ್ದು ಎಂದು ಗೊಂದಲ ಹೇಳಿಕೆ ನೀಡಿದ್ದಾರೆ.