ಸೊಂಕಿತರ ನೆರವಿಗೆ ನಿಂತ ಶಾಸಕ ಎಂ.ಪಿ ರೇಣುಕಾಚಾರ್ಯ

ಹೊನ್ನಾಳಿ.ಮೇ.೧೫; : ಅವರೆಲ್ಲಾ ಕುಟುಂಬ ವರ್ಗದೊಂದಿಗೆ ಸಂತೋಷದಿಂದ ಇಂದು ಹಬ್ಬ ಆಚರಿಸ ಬೇಕಾಗಿತ್ತು. ಆದರೇ ಕರೋನಾ ಮಹಾಮಾರಿ ಅವರ ಸಂತಸಕ್ಕೆ ತಣ್ಣಿರು ಎರಚ್ಚಿತ್ತು. ಇದನ್ನು ಮನಗಂಡ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಸೋಂಕಿತರಿಗೆ ಹೋಳಿಗೆ ಉಣ ಬಡಿಸುವ ಮೂಲಕ ಸೋಂಕಿತರ ಮೊಗದಲ್ಲಿ ಮಂದಹಾಸ ಮೂಡಿಸಿದರು.ಬಸವ ಜಯಂತಿ ಪ್ರಯುಕ್ತ ಮಾದನಬಾವಿಯ ಕೋವಿಡ್ ಕೇರ್ ಸೆಂಟರ್ ಹಾಗೂ ಹೊನ್ನಾಳಿ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕರೋನಾ ಸೋಂಕಿತರಿಗೆ, ಕರೋನಾ ವಾರಿಯರ್ಸ್ಗಳಾದ ಪೊಲೀಸ್,ಆರೋಗ್ಯ ಇಲಾಖೆ, ಅವಳಿ ತಾಲೂಕಿನ ತಾಲೂಕು ಆಡಳಿತ ಸಿಬ್ಬಂದಿ ಸೇರಿದಂತೆ ಪೌರ ಕಾರ್ಮಿಕರೂ ಮತ್ತು ಆರು ಚೆಕ್‌ಪೋಸ್ಟ್ನಲ್ಲಿರುವ ಸಿಬ್ಬಂಧಿಗಳಿಗೂ ಹೋಳಿಗೆ ಊಟ ಉಣಬಡಿಸಿದ ರೇಣುಕಾಚಾರ್ಯ ಸುದ್ಧಿಗಾರರೊಂದಿಗೆ ಮಾತನಾಡಿದರು.ಬಸವಜಂಯತಿಯನ್ನು ಕರೋನಾ ಸೋಂಕಿತರು ಮನೆಯಲ್ಲೇ ಇದ್ದಿದ್ದರೆ ಎತ್ತಿಗೆ ಪೂಜೆ ಮಾಡಿ ಸಡಗರ ಸಂಭ್ರಮದಿಂದ ಹಬ್ಬ ಆಸಚರಿಸುತ್ತಿದ್ದರು. ಆದರೆ ಕರೋನಾ ಸೋಂಕು ಅವರ ಸಡಗರವನ್ನು ಕಿತ್ತುಕೊಂಡು ಆಸ್ಪತ್ರೆಯಲ್ಲಿ ಕಿಚಿತ್ಸೆ ಪಡೆಯುಂತೆ ಮಾಡಿದೇ. ಆದ್ದರಿಂದ ಅವರಿಗೆ ಸಿಹಿ ನೀಡಿ ಶುಭಾಶಯ ಕೋರಿ, ಬೇಗ ಗುಣಮುಖರಾಗಲಿ ಎಂದು ಭಗವಂತನಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದರು.ಕೃಷಿ ಚಟುವಟಿಕೆಯಲ್ಲಿ ಬಿರುಸಿನಿಂದ ತೊಡಗಿಸಿಕೊಳ್ಳಬೇಕಾದ ರೈತರು, ಶ್ರಮಿಕವರ್ಗ ಈ ದಿನಗಳಲ್ಲಿ ಕರೋನಾ ಎಂಬ ಹೆಮ್ಮಾರಿಯಿಂದಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ನಿಜಕ್ಕೂ ಬೇಸರ ತರಿಸಿದೆ ಎಂದರು. ಅಂಬೇಡ್ಕರ್ ಭವನದಲ್ಲಿರುವ ಲಸಿಕಾ ಕೇಂದ್ರಕ್ಕೆ ಭೇಟಿ ನೀಡಿದ ಶಾಸಕರು 45 ವರ್ಷ ಮೇಲ್ಪಟ್ಟವರಿಗೆ ಎರಡನೇ ಹಂತದ ಕೋಶೀಲ್ಡ್ ಹಾಗೂ ಕೋವ್ಯಾಕ್ಸಿನ್‌ಅನ್ನು ನೂರಾರು ಜನರಿಗೆ ಲಸಿಕೆಯನ್ನು ಕೊಡಿಸಿದರು. ಈ ಸಂದರ್ಭದಲ್ಲಿ ಪುರಭಾಧ್ಯಕ್ಷ ಕೆ.ವಿ.ಶ್ರೀಧರ್,ಪುರಸಭಾ ಸದಸ್ಯರುಗಳು ಹಾಗೂ ಜಿ.ಪಂ.ಸದಸ್ಯ ಸುರೇಂದ್ರನಾಯ್ಕ, ವೈದ್ಯಾಧೀಕಾರಿಗಳು ಸೇರಿದಂತೆ ದಾದಿಯರಿದ್ದರು.