ಸೊಂಕಿತರಿಗೆ ಹಣ್ಣುಗಳ ವಿತರಣೆ

ಚಳ್ಳಕೆರೆ.ಜೂ.೧೧;  ಅಭಿವೃದ್ಧಿಯ ಹರಿಕಾರರು ಮತ್ತು  ಶಾಸಕರಾದ  ಟಿ ರಘುಮೂರ್ತಿ ಅವರ ಹುಟ್ಟು ಹಬ್ಬದ ಪ್ರಯುಕ್ತವಾಗಿ ತಾಲೂಕು ಆಸ್ಪತ್ರೆಯ ಒಳರೋಗಿಗಳಿಗೆ ಮತ್ತು ಕೋವಿಡ್ ಕೇರ್  ಸೆಂಟರ್ನಲ್ಲಿ ಇರುವ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ ಕಾರ್ಯಕ್ರಮವನ್ನು ಟಿ ರಘುಮೂರ್ತಿ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಳ್ಳಲಾಗಿತ್ತು. ಈ ಸಮಯದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ ತಿಪ್ಪೆಸ್ವಾಮಿರವರು ನಗರಸಭಾ ಸದಸ್ಯರಾದ ಮಲ್ಲಿಕಾರ್ಜುನ್ ,ವಿರುಪಾಕ್ಷಪ್ಪ ,ರಮೇಶ್ ಗೌಡ, ಚಳ್ಳಕೆರೆಪ್ಪ  ಹಾಜರಿದ್ದರು