ಸೊಂಕಿತರಿಗೆ ಧೈರ್ಯ ತುಂಬಿದ ಎಂಪಿಆರ್

ಹೊನ್ನಾಳಿ.ಮೇ.೨೬; ಸಾರ್ ನೀವು ಬನ್ನಿ, ನಮ್ಮಮ್ಮನಿಗೆ ಸಮಾಧಾನ ಹೇಳಿ ಸಾರ್ ಗಾಬರಿಯಾಗಿದ್ದಾಳೆ ಎಂದು ಮಹಿಳಾ ಸೋಂಕಿತರೊಬ್ಬರ ಮಗ ಶಾಸಕ ಎಂ.ಪಿ.ರೇಣುಕಾಚಾರ್ಯರನ್ನು ಮನವಿ ಮಾಡಿದ ಘಟನೆ ಹೊನ್ನಾಳಿ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆಯಿತು.ಎಂದಿನಂತೆ ಶಾಸಕ ಎಂ.ಪಿ.ರೇಣುಕಾಚಾರ್ಯ ಸೋಂಕಿತರಿಗೆ,ಕೊರೋನಾ ವಾರರಿಯರ್ಸ್ಗಳಿಗೆ ಉಪಹಾರ ನೀಡಲು ಹೋದಾಗ ಈ ಘಟನೆ ನಡೆಯಿತು.ಸೋಂಕಿತಳ ಮಗನ ಮಾತು ಕೇಳಿದ ತಕ್ಷಣ ಶಾಸಕರು ಕರೋನಾ ಸೋಂಕಿತ ವಾರ್ಡಿಗೆ ಭೇಟಿ ನೀಡಿ ಕೊರೋನಾ ಸೋಂಕಿತೆಗೆ ಸಮದಾನ ಹೇಳಿ ನಿನಗೆ ಏನು ಆಗುವುದಿಲ್ಲ ಧೈರ್ಯವಾಗಿ ಇರಮ್ಮತಾಯಿ, ನಾನಿದ್ದೇನೆ ಎಂದು ಸಮಧಾನ ಹೇಳಿದ ಮೇಲೆ ಸೋಂಕಿತರು  ಮಲಗಿದರು.ನಗರದ ನೂತನ ಅಂಬೇಡ್ಕರ್ ಭವನದ ಲಸಿಕೆ ಕೇಂದ್ರಕ್ಕೆ ತೆರಳಿ, ಸಾಮಾಜಿಕ ಅಂತರ ಕಾಯ್ದುಕೊಂಡು ಲಸಿಕೆ ಹಾಕಿಸಿಕೊಳ್ಳಿ ಎಂದು ಪ್ರಂಟ್‌ಲೈನ್ ವಾರಿಯರ್ಸ್ಗೆ ಹೇಳಿ ಸಾಮಾಜಿಕ ಅಂತರದಲ್ಲಿ ಸ್ವತಃ ಶಾಸಕರೇ ನಿಲ್ಲಿಸಿದರು.18 ರಿಂದ 45 ವರ್ಷದೊಳಗಿನ ಸುಮಾರು ನೂರು ಜನರು ಲಸಿಕೆಗಾಗಿ ಸಾಲಿನಲ್ಲಿ ನಿಂತಿದ್ದರು ಆದರೆ ಅವರಿಗೆ ಲಸಿಕೆ ಬರುವುದು ತಡವಾಗುತ್ತದೆ ಎಂದಾಗ ತಾಲೂಕುಅವರನ್ನು ಸಂಪರ್ಕಿಸಿ 18 ರಿಂದ 45 ವರ್ಷದೊಳಗಿನ ಸುಮಾರು ನೂರು ಜನರು ಸಾಲಿನಲ್ಲಿ ನಿಂತಿದ್ದಾರೆ ಈಗ ಅವರಿಗೆ ಲಸಿಕೆ ಸ್ಟಾಕ್ ಇಲ್ಲ ಎಂದರೆ ಹೇಗೆ ಕೂಡಲೆ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು.ಆಗ ನೂರು ಜನರಿಗೂ ಲಸಿಕೆ ಹಾಕಿ ಕಳುಹಿಸಿದರು.ಪುರಸಭಾಧ್ಯಕ್ಷ ಕೆ.ವಿ.ಶ್ರೀಧರ್, ಸ್ಥಾನಿಕ ವೈದ್ಯಾಧಿಕಾರಿ ಡಾ.ಚಂದ್ರಪ್ಪ,ವೈದ್ಯರುಗಳಾದ ಡಾ.ರಾಜ್‌ಕುಮಾರ್,ಡಾ.ಲೀಲಾವತಿ,ಪುರಸಭಾ ಸದಸ್ಯ ರಂಗಪ್ಪ,ಪಿಎಸೈ ಬಸವನಗೌಡ ಕೋಟುರ ಹಾಗೂ ಇತರರು ಇದ್ದರು.