ಸೊಂಕಿತರಿಗೆ ಚಿಕಿತ್ಸೆಯಲ್ಲಿ ಕೊರತೆ ಬೇಡ : ಹೂಲಗೇರಿ

ಲಿಂಗಸುಗೂರು.ಮೇ.೧೯- ಕೊರೊನಾ ಸೊಂಕಿತರಿಗೆ ಸಮರ್ಪಕ ಚಿಕಿತ್ಸೆಯಲ್ಲಿ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳಬೇಕು ಎಂದು ಶಾಸಕ ಡಿ.ಎಸ್.ಹೂಲಗೇರಿ ಅವರು ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಪಟ್ಟಣದ ತಮ್ಮ ಕಚೇರಿಯಲ್ಲಿ ರವಿವಾರ ತಾಲೂಕು ಆರೋಗ್ಯಾಧಿಕಾರಿ ಹಾಗೂ ವೈದ್ಯಾಧಿಕಾರಿಗಳ ಸಭೆ ನಡೆಸಿದ ಅವರು, ತಹಶೀಲ್ದಾರ, ತಾಲೂಕಿನ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಕೇಂದ್ರಗಳಲ್ಲಿ ಕೊರೊನಾ ಸೊಂಕಿತರಿಗೆ ಅಗತ್ಯ ಇರುವ ಪ್ರಾಥಮಿಕ ಚಿಕಿತ್ಸೆ ನೀಡಬೇಕು. ಇತ್ತೀಚಿಗೆ ಸೊಂಕು ಹೆಚ್ಚಳವಾಗುತ್ತಿದ್ದರಿಂದ ಇದಕ್ಕೆ ಸಮರ್ಪಕ ಚಿಕಿತ್ಸೆ ನೀಡಿ ಉತ್ತಮ ಆಹಾರ ಒದಗಿಸಬೇಕು. ರೋಗಿಗಳಿಗೆ ಸೊಂಕಿನ ಬಗ್ಗೆ ಭಯ ಹುಟ್ಟಿಸುವುದಕ್ಕಿಂತ ಧೈರ್ಯ ನೀಡಬೇಕು. ಅವರಿಗೆ ಸ್ಪಂದಿಸುವ ಕೆಲಸ ಮಾಡುವಂತೆ ಸೂಚಿಸಿದರು.
ತಹಶೀಲ್ದಾರ ಚಾಮರಾಜ್ ಪಾಟೀಲ್, ತಾಲೂಕು ಆರೋಗ್ಯಾಧಿಕಾರಿ ಅಮರೇಶ ಪಾಟೀಲ್, ಸಾರ್ವಜನಿಕ ಆಸ್ಪತ್ರೆಯ ಮುಖ್ಯಾಧಿಕಾರಿ ಡಾ.ರುದ್ರಗೌಡ ಪಾಟೀಲ್, ಡಾ.ದಿಗಂಬರ್, ಸಿಬ್ಬಂದಿಗಳಾದ ಪ್ರಾಣೇಶ ಕುಲಕರ್ಣಿ, ಬಸವರಾಜ, ನಾಗರಾಜ ಹಾಗೂ ಇನ್ನಿತರಿದ್ದರು.