ಸೊಂಕಿತರಿಗೆ ಆತ್ಮ ಸ್ಥೈರ್ಯ ತುಂಬಿದ ಶ್ರೀಗಳು

ಮಾಗಡಿ.ಜೂ, ೨- ಹುಲಿಕಟ್ಟೆ ಕೋವಿಡ್ ಕೇಂದ್ರದಲ್ಲಿರುವ ಕೊರಾನ ಸೊಂಕಿತರಿಗೆ ಬಿಬಿಎಂಪಿ ವಿರೋಧ ಪಕ್ಷದ ಮಾಜಿ ನಾಯಕ ಎ.ಎಚ್.ಬಸವರಾಜು ಮಾರ್ಗದರ್ಶನದಲ್ಲಿ ಮಾಸ್ಕ್, ಹಣ್ಣು, ಬಿಸ್ಕೆಟ್ ವಿತರಿಸಿ. ಸೋಂಕಿತರಿಗೆ ಯೋಗ ಮತ್ತು ಬೋಜನದಲ್ಲಿ ಬದಲಾವಣೆ ಮಾಡಿಕೊಳ್ಳುಂವಂತೆ ಗುಮ್ಮಸಂದ್ರ ಮಠದ ಚಂದ್ರಶೇಖರ ಶ್ರೀಗಳು ಸಾಂತ್ವಾನ ಹೇಳಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊರೊನಾ ಸೊಂಕು ತಗುಲಿದೆ ಎಂದು ಮಾನಸಿಕವಾಗಿ ಕುಗ್ಗುವುದು ಬೇಡ, ಸೊಂಕನ್ನು ಧೈರ್ಯದಿಂದ ಎದುರಿಸಬೇಕು, ಆತ್ಮಸ್ಥೈರ್ಯವನ್ನು ಹೆಚ್ಚಿಸಿಕೊಳ್ಳಬೇಕು. ಕೋವಿಡ್ ಕೇಂದ್ರದಲ್ಲಿ ಸೊಂಕಿತರು ಲಘು ವ್ಯಾಯಾಮವನ್ನು ಮಾಡುವುದರ ಮೂಲಕ ದೈಹಿಕ ಚಟುವಟಿಕೆಗಳಿಗೆ ಹೆಚ್ಚಿನ ಒತ್ತು ನೀಡಬೇಕು. ಬಿಸಿ ನೀರಿಗೆ ಲವಂಗವನ್ನು ಹಾಕಿ ಸೇವನೆ ಮಾಡಬೇಕು, ಎಲ್ಲಕ್ಕಿಂತ ಮುಖ್ಯವಾಗಿ ಆತ್ಮಸ್ಥೈರ್ಯ ಹೆಚ್ಚಿಸಿಕೊಂಡರೆ ಕೊರೊನಾವನ್ನು ಸುಲಭವಾಗಿ ಗೆಲ್ಲಬಹುದು ಎಂದು ತಿಳಿಸಿದರು.
ಕಚೇರಿ ಕಾರ್ಯದರ್ಶಿ ಎಂ.ಆರ್. ರಾಘವೇಂದ್ರ ಮಾತನಾಡಿ, ಕೊರೊನಾ ಮನುಷ್ಯನ ದೇಹವನ್ನು ಪ್ರವೇಶಿಸಿದ ತಕ್ಷಣ ದೇಹದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಇಂತಹ ಸಮಯದಲ್ಲಿ ಸೊಂಕಿತರಿಗೆ ಹಣ್ಣು ಹಂಪಲು ಸೇರದಂತೆ ಪೌಷ್ಠಿಕ ಆಹಾರದ ಅಗತ್ಯತೆ ಹೆಚ್ಚಾಗಿರುತ್ತದೆ, ಈ ಹಿನ್ನಲೆಯಲ್ಲಿ ಮುಖಂಡ ಎ.ಎಚ್.ಬಸವರಾಜು ಅವರ ಮಾರ್ಗದರ್ಶನದಲ್ಲಿ ಹುಲಿಕಟ್ಟೆ ಕ್ವಾರಂಟೈನ್ ಕೇಂದ್ರದಲ್ಲಿರುವ ಸೊಂಕಿತರಿಗೆ ಹಣ್ಣು, ಬಿಸ್ಕೆಟ್ ಹಾಗೂ ಮಾಸ್ಕ್‌ಗಳನ್ನು ವಿತರಿಸಲಾಗಿದೆ ಎಂದು ಅವರು, ಕ್ವಾರಂಟೈನ್ ಕೇಂದ್ರದಲ್ಲಿರುವವರಿಗೆ ಯಾವುದೇ ಮನರಂಜನೆ ಇಲ್ಲ, ಅವರು ಕುಳಿತಿರುವ ಕಡೆಯೇ ಸುಮ್ಮನ್ನೆ ಕುಳಿತಿರುಬೇಕು, ಇದರಿಂದ ಮಾನಸಿಕವಾಗಿ, ದೈಹಿಕವಾಗಿ ಕುಗ್ಗಿ ಹೋಗುತ್ತಾರೆ. ಈ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಹುಲಿಕಟ್ಟೆ ಕ್ವಾರಂಟೈನ್ ಕೇಂದ್ರಕ್ಕೆ ಕೇರಂ ಬೋರ್ಡ್ ಸೇರಿದಂತೆ ಹಲವು ಆಟದ ಪರಿಕರಗಳನ್ನು ಸಹ ಒದಗಿಸಲಾಗಿದೆ ಎಂದು ರಾಘವೇಂದ್ರ ಹೇಳಿದರು.
ಪುರಸಭಾಧ್ಯಕ್ಷೆ ಭಾಗ್ಯಮ್ಮನಾರಾಯಣಪ್ಪ, ಬಿಜೆಪಿ ತಾ. ಅಧ್ಯಕ್ಷ ಬಿ.ಎಂ.ಧನಂಜಯ್ಯ, ಯುವ ಮೋರ್ಚಾ ಜಿಲ್ಲಾಧ್ಯಕ್ಷ ಶಂಕರ್, ಹೊಸಪಾಳ್ಯ ವಿನಯ್, ಎಸ್.ಟಿ.ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಶಶಿಧರ್, ಪ್ರಧಾನ ಕಾರ್‍ಯದರ್ಶಿ ರಾಜೇಶ್, ಆನಂದ್, ಸಂತೋಷ್, ಪರಂಗಿಚಿಕ್ಕನಪಾಳ್ಯ ದಯಾನಂದ್, ನಿಜಗುಣ, ಮಾರಪ್ಪ, ಧನಂಜಯ್ಯ, ಪಾಂಡುರಂಗಯ್ಯ, ನರಸಿಂಹಣ್ಣ, ಗುಂಡ ಮತ್ತಿತರರು ಹಾಜರಿದ್ದರು.