ಸೊಂಕಿತರನ್ನು ಕಂಡು ಕಣ್ಣಿರಿಟ್ಟ ಶಾಸಕ ನಾಡಗೌಡ

ಸಿಂಧನೂರು.ಮೇ.೧೯- ಸರ್ಕಾರದ ಆದೇಶ ಉಲ್ಲಂಘಿಸಿ ಕೊರಾನೊ ನಿಯಮಗಳನ್ನು ಪಾಲಿಸದೆ ಜನ ನಿರ್ಲಕ್ಷ್ಯ ಮಾಡಿದ ಕಾರಣ ತಾಲೂಕಿನ ಸೊಂಕಿತರ ಸಂಖ್ಯೆ ಹೆಚ್ಚಾಗಿ ಸಾವುಗಳು ಸಹ ಸಂಬವಿಸುತ್ತಿದ್ದು ಕೊರೊನಾ ನಿಯಂತ್ರಣ ಮಾಡುವಲ್ಲಿ ಶಾಸಕರು ಹಾಗೂ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಮಾಜಿ ಮಂತ್ರಿ ಶಾಸಕ ವೆಂಕಟರಾವ್ ನಾಡಗೌಡ ಬಿಡುವಿಲ್ಲದೆ ಅಧಿಕಾರಿಗಳ ಸಭೆ ನಿರಂತರ ಮಾಡಿ ಗ್ರಾಮ ಪಂಚಾಯತಿ ಅದ್ಯಕ್ಷರು ಮತ್ತು ಪಿಡಿಒ ಗಳ ನಡುವೆ ವಿಡಿಯೋ ಕಾನ್ಪರೇನ್ಸ ಮಾಡಿ ಸೊಂಕು ಹರಡದಂತೆ ಮುಂಜಾಗ್ರತಾ ಕ್ರಮ ತೆಗೆದುಕೊಂಡು ಕೊರೊನಾ ದಿಂದ ಜನರನ್ನು ಕಾಪಾಡ ಬೇಕೆಂದು ಶಾಸಕರು ಮನವಿ ಮಾಡಿಕೊಂಡಿದ್ದಾರೆ.
ಶಾಸಕ ನಾಡಗೌಡರ ವೇಗಕ್ಕೆ ತಕ್ಕಂತೆ ಅಧಿಕಾರಿಗಳು ಸಾತ್ ನೀಡದೇ ಇರುವದು ಕಂಡು ಶಾಸಕರು ಅಸಮಾಧಾನ ಗೊಂಡಿದ್ದು ಕೊರೊನಾ ಸೊಂಕು ಹರಡದಂತೆ ಕಠಿಣ ಕ್ರಮ ಕೈಗೊಳ್ಳಬೇಕು ಪರಿಸ್ಥಿತಿ ಕೈ ಮೀರಿ ಹೋಗಿ ಸೊಂಕಿತರ ಸಂಖ್ಯೆ ಹೆಚ್ಚಾಗಿ ಹೆಚ್ಚು ಸಾವು ನೋವುಗಳು ಕಂಡುಬಂದರೆ ನಿಮ್ಮನ್ನೆ ಹೊಣೆಗಾರರನ್ನಾಗಿ ಮಾಡಬೇಕಾಗುತ್ತದೆಂದು ಅಧಿಕಾರಿಗಳಿಗೆ ನಾಡಗೌಡ ಖಡಕ್ ಎಚ್ಚರಿಕೆ ನೀಡಿದ್ದರೂ ಸಹ ಅಧಿಕಾರಿಗಳು ಮಾತ್ರ ಆಮೆ ಗತಿಯಲ್ಲಿ ಕೆಲಸ ಮಾಡುತ್ತಿರುವದು ಕಂಡುಬಂದಿದೆ.
ತಾಲುಕಿನ ಜವಳಗೇರಾ ಗ್ರಾಮದ ಗರ್ಭಿಣಿ ಮಹಿಳೆಗೆ ಸೊಂಕು ಕಾಣಿಸಿಕೊಂಡಿದ್ದು ಕೊವಿಡ್ ಸೆಂಟರ್ ಗೆ ಬರಲು ನಿರಾಕರಿಸಿದ್ದು ಆಕೆಯ ತಂದೆ ತಾಯಿ ಗಳು ನಮ್ಮ ಮಗಳು ಮನೆಯಲ್ಲೆ ಇರಲಿ ,ನಾವು ಮನೆ ಬಿಟ್ಟು ಹೋಗುತ್ತೆವೆ ಆದರೆ ಕೊವಿಡ್ ಗೆ ಸೇರಿಸುವ ದಿಲ್ಲ ಎಂದು ಅಧಿಕಾರಿಗಳ ಮುಂದೆ ಪಟ್ಟು ಹಿಡಿದಾಗ ಅಧಿಕಾರಿಗಳು ಶಾಸಕರ ಗಮನಕ್ಕೆ ತಂದಾಗ ಕುಟುಂಬಸ್ಥರಿಗೆ ದೂರವಾಣಿ ಕರೆ ಮಾಡಿ ಕೊರೊನಾ ಸೊಂಕಿಗೆ ಹಲವಾರು ಜನ ಬಲಿಯಾಗುತ್ತಿದ್ದು ಸೊಂಕು ಕಂಡ ಕೂಡಲೇ ಕೊವಿಡ್ ಸೆಂಟರ್ ಗೆ ದಾಖಲಾದರೆ ಉತ್ತಮ ಚಿಕಿತ್ಸೆ ಸಿಗುತ್ತದೆ , ಗರ್ಭಿಣಿ ಮಹಿಳೆ ಕೂಡ ಆರಾಮಾಗಿರುತ್ತಾಳೆ.ಮನೆಯಲ್ಲಿ ದ್ದು ಸೊಂಕು ಹೆಚ್ಚಾದಾಗ ಆಸ್ಪತ್ರೆಗೆ ಬಂದರೆ ಬೆಡ್ ಸಿಗದೆ ಏನಾದರೂ ಹೆಚ್ಚು ಕಡಿಮೆ ಆಗಿ ಗರ್ಭಿಣಿ ಮಹಿಳೆಗೆ ಜೀವಕ್ಕೆ ಅಪಾಯ ಆದರೆ ಯಾರೂ ಹೊಣೆ ಎಂದು ಮನವರಿಕೆ ಮಾಡಿದ ಮೇಲೆ ಗರ್ಭಿಣಿ ಮಹಿಳೆ ಕೊವಿಡ್ ಸೆಂಟರ್ ಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಜವಳಗೇರಾ ಗ್ರಾಮದ ದಲಿತರ ಕಾಲೋನಿಯಲ್ಲಿ ಆಕ್ಸಿಜನ್ ಹಾಕಿಸಿಕೊಳ್ಳಲು ಹಾಗೂ ಕೊವಿಡ್ ಪರೀಕ್ಷೆ ಮಾಡಿಸಿಕೊಳ್ಳಲು ಒಪ್ಪದೇ ಸ್ಥಳಕ್ಕೆ ಹೋದ ಕೊರೊನಾ ವಾರಿಯರ್ಸ ಜೊತೆ ಜನ ವಾದಕ್ಕೆ ಇಳಿದಿದ್ದು ಚರ್ಚ ಪಾದರ್ ಸಮ್ಮುಖದಲ್ಲಿ ಸಭೆ ಮಾಡಿ ಜನರನ್ನು ಮನವೊಲಿಸಿ ಕೊವಿಡ್ ಪರೀಕ್ಷೆ ಮಾಡಿಸಿದರು.ಸೊಂಕು ಕಂಡ ಕೂಡಲೇ ಕೊವಿಡ್ ಸೆಂಟರ್ ಗೆ ದಾಖಲಾಗಿ ನಿಮ್ಮ ಮನೆಯ ಜೊತೆಗೆ ಅಕ್ಕಪಕ್ಕದವರಿಗೆ ಕೊವಿಡ್ ಪರೀಕ್ಷೆ ಮಾಡಿಸಿಕೊಂಡು ಕೊರೊನಾ ದಿಂದ ಎಚ್ಚರಿಕೆಯಿಂದಿರಿ ಹೊರತು ಭಯಬೇಡ ಎಂದರು.
ಸರ್ಕಾರಿ ಆಸ್ಪತ್ರೆಯ ಲ್ಲಿರುವ ಕೊವಿಡ್ ಸೆಂಟರ್ ಗೆ ಬೇಟಿ ನೀಡಿ ಸೊಂಕಿತರನ್ನು ಕಂಡು ಅವರ ಆರೋಗ್ಯ ವಿಚಾರಿಸಿ ಅವರಿಗೆ ಉತ್ತಮ ಚಿಕಿತ್ಸೆ ನೀಡುವಂತೆ ವೈದ್ಯಾಧಿಕಾರಿ ಗಳಿಗೆ ಶಾಸಕ ನಾಡಗೌಡ ಎಚ್ಚರಿಕೆ ನೀಡಿದರು.
ನಾವು ಎಷ್ಟೇ ಪ್ರಯತ್ನ ಪಟ್ಟು , ಜನರಲ್ಲಿ ಜಾಗೃತಿ ಮೂಡಿಸಿ ಹೊರಗೆ ಬಾರದೆ ಮನೆಯಲ್ಲಿ ಇರವಂತೆ ಮನವಿ ಮಾಡಿದರೂ ಸಹ ಜನ ಕೇಳದೆ ನಿರ್ಲಕ್ಷ್ಯ ಮಾಡಿ ಹೊರಗೆ ತಿಡುಗಾಡುತ್ತಿದ್ದು ಜನರ ನಿರ್ಲಕ್ಷ್ಯ ಮತ್ತು ನಿಷ್ಕಾಳಜಿಯಿಂದ ಕೊರೊನಾ ಸೊಂಕಿತರ ಸಂಖ್ಯೆ ಹೆಚ್ಚಾಗಿ ಸಾವು ನೋವುಗಳು ಸಂಬವಿಸುತ್ತಿದ್ದು ಸೊಂಕಿತರನ್ನು ಕಂಡು ಶಾಸಕ ನಾಡಗೌಡರು ಕಣ್ಣಿರಿಟ್ಟಿದ್ದು ಇಂತಹ ಶಾಸಕರನ್ನು ನಾನೆಂದು ನೋಡಿಲ್ಲ ಎಂದು ಅಧಿಕಾರಿಯೊಬ್ಬರು ಪತ್ರಿಕೆಗೆ ತಿಳಿಸಿದರು.