
ರಾಯಚೂರು,ಏ.೧೩, ರಾಯಚೂರು ವಿಧಾನಸಭಾ ಕ್ಷೇತ್ರದಿಂದ ಇಂದು ಎಸ್ ಡಿಪಿಐ ಅಭ್ಯರ್ಥಿ ಸೈಯದ್ ಇಶಾಕ್ ಹುಸೇನ್ ಅವರು ಭಾರಿ ಬೆಂಬಲಗರ ಜೊತೆಯಲ್ಲಿ ಅಧಿಕೃತವಾಗಿ ನಾಮಪತ್ರ ಸಲ್ಲಿಸಿದರು.
ಅವರಿಂದು ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದರು.ನಗರದ ಶೆಟ್ಟಿ ಬಾಯಿ ಚೌಕ್ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿ ಅಲ್ಲಿಂದ ಪಾದಯಾತ್ರೆ ಮೂಲಕ ಅಭ್ಯರ್ಥಿ ಆಗಮಿಸಿದರು.
ನಗರದಾದ್ಯಂತ ಸಂಚಾರ ಮಾಡಿ ಘೋಷಣೆಯ ಮೂಲಕ ಭಾರಿ ಬೆಂಬಲಗರೊಂದಿಗೆ ಜಿಲ್ಲಾಧಿಕಾರಿ ಕಛೇರಿಗೆ ಆಗಮಿಸಿ ನಾಮಪತ್ರ ಸಲ್ಲಿಸಿದರು.
ಈ ವೇಳೆ ಎಸ್ ಡಿಪಿಐ ಕಾರ್ಯಕರ್ತರು ಮುಖಂಡರು, ಬೆಂಬಲಿಗರು ಸಾಥ್ ನೀಡಿದರು.
ಈ ಸಂದರ್ಭದಲ್ಲಿ ನಗರದ ಎಸ್ ಡಿಪಿ ಐ ಅಭ್ಯರ್ಥಿ ಸೈಯದ್ ಇಶಾಕ್ ಹುಸೇನ್, ಮಾತನಾಡುತ್ತಾ, ದೇಶದಲ್ಲಿ ಕೋಮುವಾದ , ಭ್ರಷ್ಟಾಚಾರವನ್ನು ತಡೆಯುವಂತಹ ನಿಟ್ಟಿನಲ್ಲಿ ಸೋಷಿಯಲ್ ಡೆಮಾಕ್ರಟಿಕ್ ಪಾರ್ಟಿಯನ್ನು ಬೆಂಬಲಿಸಬೇಕಾಗಿದೆ ಎಂದರು. ಪ್ರಜಾಪ್ರಭುತ್ವ ಮತ್ತು ಸಂವಿಧಾನ ಉಳಿವಿಗಾಗಿ ಎಸ್ ಡಿ ಪಿಐ ಪಕ್ಷವನ್ನು ಬೆಂಬಲಿಸಬೇಕು. ಕೇಂದ್ರ ಮತ್ತು ರಾಜ್ಯದಲ್ಲಿ ೪೦% ಕಮಿಷನ್ ಪಡೆಯುವುದರ ಮೂಲಕ ಭ್ರಷ್ಟಾಚಾರ ತಾಂಡವಾಡುತ್ತಿದೆ. ಎಸ್ ಡಿಪಿಐ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಭ್ರಷ್ಟಾಚಾರ ಮುಕ್ತಗೊಳಿಸಲಾಗುವುದು ಎಂದು ಭರವಸೆ ನೀಡಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ದ್ವನಿ ಎತ್ತಿದವರನ್ನು ಜೈಲಿಗೆ ಹತ್ತಿ ಹಾಕಲಾಗುವುದು ಎಂದರು.
ಈ ಸಂದರ್ಭದಲ್ಲಿ ಎಸ್ ಡಿಪಿ ಐ ಬೆಂಬಲಿಗರು, ಕಾರ್ಯಕರ್ತರು ಸೇರಿದಂತೆ ಉಪಸ್ಥಿತರಿದ್ದರು.