ಸೈಯದಾ ಸೀಮಾಗೆ ಶಿಕ್ಷಣದಲ್ಲಿ ಶ್ರೇಷ್ಠತೆಗಾಗಿ ರಾಷ್ಟ್ರೀಯ ಪ್ರಶಸ್ತಿ

ಕಲಬುರಗಿ,ಸೆ.06:ಅಸೋಸಿಯೇಷನ್ ಆಫ್ ಮುಸ್ಲಿಮ್ ಪ್ರೊಫೆಷ್ನಲ್ಸ್‍ವು ಡಾ. ಸೈಯದಾ ಸೀಮಾ ಅವರಿಗೆ ಕಾಲೇಜು/ವಿಶ್ವವಿದ್ಯಾಲಯ ಬೋಧನಾ ವಿಭಾಗದ ಅಡಿಯಲ್ಲ್ಲಿ ಶಿಕ್ಷಣದಲ್ಲಿ ಶ್ರೇಷ್ಠತೆಗಾಗಿ 7 ನೇ ರಾಷ್ಟ್ರೀಯ ಪ್ರಶಸ್ತಿ 2023ಯನ್ನು ನೀಡಿ ಗೌರವಿಸಿದೆ.
ಶಿಕ್ಷಣ ಕ್ಷೇತ್ರದಲ್ಲಿ ಅವರ ಅತ್ಯುತ್ತಮ ಸೇವೆ ಮತ್ತು ಸಮಾಜಕ್ಕೆ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಈ ಪ್ರಶಸ್ತಿಯನ್ನು ನೀಡಲಾಯಿತು. ಸೆ. 5 ರಂದು ಬೆಂಗಳೂರಿನ ಅಲ್ ಅಮೀನ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರದ ಮಾಜಿ ಸಚಿವ ಕೆ.ರಹಮಾನ್ ಖಾನ್ ಮತ್ತು ಎಎಂಪಿ ಅಧ್ಯಕ್ಷ ಅಮೀರ್ ಎಡ್ರೆಸಿ ಪ್ರಶಸ್ತಿ ಪ್ರದಾನ ಮಾಡಿದರು.
ಡಾ ಸೀಮಾ ಅವರು ಪ್ರಸ್ತುತ ಕಲಬುರಗಿಯ ಸರ್ಕಾರಿ ಮಹಾವಿದ್ಯಾಲಯ (ಸ್ವಾಯತ್ತ) ಭೌತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಅವರಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಲಭಿಸಿರುವುದಕ್ಕೆ ಸಂಬಂಧಿಕರು, ಸ್ನೇಹಿತರು, ವಿದ್ಯಾರ್ಥಿಗಳು ಶುಭ ಹಾರೈಸಿದ್ದಾರೆ.