ಸೈಬರ್ ಸುರಕ್ಷತೆ ಜಾಗೃತಿ ಕಾರ್ಯಕ್ರಮ ಏಪ್ರಿಲ್ 29ಕ್ಕೆ

ಶಿವಮೊಗ್ಗ.ಏ.೨೮: ಸೈಬರ್ ಸುರಕ್ಷತೆ ಹಾಗೂ ಹಣಕಾಸಿನ ವ್ಯವಹಾರದಲ್ಲಿ ಆಗುವ ಹ್ಯಾಕಿಂಗ್ ತೊಂದರೆ ಕುರಿತು ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಏಪ್ರಿಲ್ 29ರ ಬೆಳಗ್ಗೆ 10ಕ್ಕೆ ಹಮ್ಮಿಕೊಳ್ಳಲಾಗಿದೆ.ಸೈಬರ್ ಜಾಗೃತಿ ಕಾರ್ಯಕ್ರಮವನ್ನು ನಿವೃತ್ತ ಪ್ರೊಫೆಸರ್ ಡಾ. ವೀರಮಂಜು ಉದ್ಘಾಟಿಸುವರು. ನಂತರ ವಿಶೇಷ ಉಪನ್ಯಾಸ ಕಾರ್ಯಕ್ರಮಗಳಿದ್ದು, ಡಾ. ವೀರಮಂಜು ಅವರು ಇಂಟರ್‌ನೆಟ್ ವಿಷಯಗಳ ಕುರಿತು ತಿಳವಳಿಕೆ ನೀಡಲಿದ್ದಾರೆ. ಮಹೇಶ್ ವಸ್ತ್ರದ್ ಅವರು ಹ್ಯಾಕಿಂಗ್ ವಿಷಯಗಳ ಕುರಿತು ಕಾರ್ಯಾಗಾರ ನಡೆಸಿಕೊಡುವರು.
ಸೈಬರ್ ಅಪರಾಧ ಹಾಗೂ ಹ್ಯಾಕಿಂಗ್ ಸಮಸ್ಯೆ ಹೆಚ್ಚುತ್ತಿರುವ ಕಾಲ ಇದಾಗಿದ್ದು, ಜಾಗೃತಿ ಮತ್ತು ತಿಳವಳಿಕೆ ಮುಖ್ಯ. ಶಿವಮೊಗ್ಗ ಜಿಲ್ಲೆಯ ಆಸಕ್ತರು ಸೈಬರ್ ಜಾಗೃತಿ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು. ಭಾಗವಹಿಸುವರರು ಲ್ಯಾಪ್‌ಟಾಪ್ ಕಡ್ಡಾಯವಾಗಿ ತರಬೇಕು.ಕಾರ್ಯಕ್ರಮದಲ್ಲಿ ಭಾಗವಹಿಸಲಿಚ್ಚಿಸುವ ಆಸಕ್ತರು ಮಾಹಿತಿ ಹಾಗೋ ನೋಂದಣಿ ಮಾಡಲು ಮೊಬೈಲ್ ಸಂಖ್ಯೆ 9448122646 ಸಂಪರ್ಕಿಸಬಹುದಾಗಿದೆ ಎಂದು ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಎನ್.ಗೋಪಿನಾಥ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.