ಸೈಬರ್ ವಂಚನೆಗಳ ಬಗ್ಗೆ ವಿದ್ಯಾರ್ಥಿಳಿಗೆ ಅರಿವು

ಕಲಬುರಗಿ,ಮಾ.13-ನಗರದ ಸಿಇಎನ್ ಪೆÇಲೀಸ್ ಠಾಣೆ ಸಹಯೋಗದಲ್ಲಿ ಸ್ವಾವಲಂಬಿ ದೃಷ್ಟಿ ಟ್ರಸ್ಟ್ ವತಿಯಿಂದ ಸೈಬರ್ ಭದ್ರತಾ ಜಾಗೃತಿ ಕಾರ್ಯಾಗಾರವನ್ನು ಮಂಗಳವಾರ ನಗರದ ಎಸ್.ಎಸ್.ತೆಗನೂರ ಪದವಿ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು.
ಸಿಇಎನ್ ಇನ್ಸಪೆಕ್ಟರ್ ನಸೀರ್ ಡಿ.ಸನದಿ, ಸಿಬ್ಬಂದಿಗಳಾದ ಅಂಬರೀಶ್ ಮತ್ತು ಪ್ರಶಾಂತ್ ಅವರು ಮಾತನಾಡಿ, ಸಾಮಾಜಿಕ ಮಾಧ್ಯಮ ಖಾತೆಯನ್ನು ಹೇಗೆ ಸುರಕ್ಷಿತವಾಗಿ ಬಳಸಬೇಕು ಎಂಬುವುದರ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಸೈಬರ್ ವಂಚನೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸಂಪೂರ್ಣ ಮಾಹಿತಿ ಒದಗಿಸಿದರು.
ಸಾಮಾಜಿಕ ಮಾಧ್ಯಮ ಖಾತೆ ಬಳಕೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಲು ಅವಕಾಶ ಕಲ್ಪಿಸಿದ ಸಿಇಎನ್ ಪೊಲೀಸ್ ಠಾಣೆ ಇನ್ಸಪೆಕ್ಟರ್ ಮತ್ತು ಸಿಬ್ಬಂದಿಗಳನ್ನು ಮತ್ತು ಕಾಲೇಜಿನ ಪ್ರಾಂಶುಪಾಲರಾದ ಜ್ಯೋತಿ ಅವರಿಗೆ ಮತ್ತು ಸಿಬ್ಬಂದಿಗಳಿಗೆ ಎಸ್‍ಆರ್‍ವಿ ಟ್ರಸ್ಟ್‍ನ ಅಧ್ಯಕ್ಷ ಅಸೀಮ್ ಅವರು ಧನ್ಯವಾದಗಳನ್ನು ಅರ್ಪಿಸಿದರು.
ಇದೇ ರೀತಿ ನಗರದ ವಿವಿಧ ಕಾಲೇಜುಗಳಲ್ಲಿ ಎಸ್‍ಆರ್‍ವಿ ಟ್ರಸ್ಟ್ ವತಿಯಿಂದ ಸೈಬರ್ ವಂಚನೆ ಬಗ್ಗೆ ವಿದ್ಯಾರ್ಥಿಳಿಗೆ ಅರಿವು ಮೂಡಿಸಲಾಗುವುದು ಎಂದು ಟ್ರಸ್ಟ್ ಅಧ್ಯಕ್ಷ ಅಸೀಮ್ ಅವರು ಇದೇ ವೇಳೆ ತಿಳಿಸಿದರು.