ಸೈಬರ್ ಅಪರಾಧ ಜಾಗೃತಿಗೆ ವೇದಿಕೆಯಾದ ಹಾಸ್ಯ ಸಂಜೆ

ಬೀದರ್:ಅ.18: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ಸೈಬರ್ ಸೆಕ್ಯುರಿಟಿ ಕರ್ನಾಟಕ ವತಿಯಿಂದ ಇಲ್ಲಿಯ ಪ್ರತಾಪನಗರದ ಸರ್ಕಾರಿ ನೌಕರರ ಭವನದಲ್ಲಿ ಆಯೋಜಿಸಿದ್ದ ಹಾಸ್ಯ ಸಂಜೆ ಹಾಗೂ ನೌಕರರ ಮಕ್ಕಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಸೈಬರ್ ಅಪರಾಧ ಜಾಗೃತಿಗೆ ವೇದಿಕೆಯಾಯಿತು.
ಸೈಬರ್ ಕಳ್ಳರು ಮುಗ್ಧ ಜನರ ಬ್ಯಾಂಕ್ ಖಾತೆಗೆ ಹೇಗೆ ಕನ್ನ ಹಾಕುತ್ತಾರೆ ಎನ್ನುವುದನ್ನು ಖ್ಯಾತ ಹಾಸ್ಯ ಕಲಾವಿದರಾದ ಗಂಗಾವತಿ ಪ್ರಾಣೇಶ, ಬಸವರಾಜ ಮಹಾಮನಿ, ಎಂ.ಎಸ್. ನರಸಿಂಹ ಜೋಶಿ, ವೈ.ಜಿ. ಗುಂಡೇರಾವ್ ಹಾಗೂ ಎಚ್. ದುಂಡಿರಾಜ್ ಅವರು ಹಾಸ್ಯದ ಮೂಲಕವೇ ಸಭಿಕರೆದುರು ತೆರೆದಿಟ್ಟರು. ನಗೆ ಚಟಾಕಿಗಳನ್ನು ಹಾರಿಸಿ ನಕ್ಕು ನಲಿಸಿದರು.
ಆ???ಲೈನ್ ವ್ಯವಹಾರಕ್ಕೆ ಸಂಬಂಧಿಸಿದಂತೆ ಯಾವ ರೀತಿಯ ಎಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು, ವಂಚನೆಗೆ ಒಳಗಾದ ತಕ್ಷಣ ಯಾವ ಸಂಖ್ಯೆಗೆ ದೂರು ಕೊಡಬೇಕು, ಎಟಿಎಂ ಕಾರ್ಡ್ ಪಿನ್ ಏಕೆ ಬಲಿಷ್ಠವಾಗಿರಬೇಕು ಎನ್ನುವುದನ್ನು ಮನದಟ್ಟು ಮಾಡಿದರು.
ಇಂಡಿಯನ್ ಐಡಿಯಲ್ ಖ್ಯಾತಿಯ ಶಿವಾನಿ ಸ್ವಾಮಿ ಅವರು, ‘ಗೊಂಬೆ ಹೇಳುತೈತೆ’ ಹಾಗೂ ಲತಾ ಮಂಗೇಶ್ಕರ್ ಅವರ ಹಿಂದಿ ಗೀತೆ ಹಾಡಿ ಸಭಿಕರನ್ನು ರಂಜಿಸಿದರು.
ರಾಜೇಂದ್ರಕುಮಾರ ಗಂದಗೆ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘ ಜಿಲ್ಲೆಯಲ್ಲಿ ಉತ್ತಮ ಕಾರ್ಯ ಮಾಡುತ್ತಿದೆ. ಸಂಘದ ಚಟುವಟಿಕೆಗಳಿಗೆ ಜಿಲ್ಲಾ ಆಡಳಿತದ ಸಹಕಾರ ಸದಾ ಇರಲಿದೆ ಎಂದು ಉದ್ಘಾಟನೆ ನೆರವೇರಿಸಿದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ತಿಳಿಸಿದರು.
ಸೈಬರ್ ವಂಚನೆ ಪ್ರಕರಣಗಳು ಹೆಚ್ಚುತ್ತಲೇ ಇವೆ. ಹೀಗಾಗಿ ಜನ ಜಾಗೃತಿ ವಹಿಸಬೇಕು. ವಂಚನೆಗೊಳಗಾದವರು ಒಂದು ಗಂಟೆಯೊಳಗೆ 1930ಗೆ ಕರೆ ಮಾಡಿ ದೂರು ದಾಖಲಿಸಬೇಕು ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್. ಹೇಳಿದರು.
ಸರ್ಕಾರಿ ನೌಕರರ ಸಾಧಕ ಮಕ್ಕಳನ್ನು ಪೆÇ್ರೀತ್ಸಾಹಿಸಲು ಹಾಗೂ ಹಾಸ್ಯದ ಮೂಲಕ ನೌಕರರು ಮತ್ತು ಜನಸಾಮಾನ್ಯರಲ್ಲಿ ಸೈಬರ್ ಅಪರಾಧಗಳ ಅರಿವು ಮೂಡಿಸಲು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮಕ್ಕೆ ನಿರೀಕ್ಷೆಗೂ ಹೆಚ್ಚು ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಹೇಳಿದರು.
ರಾಜ್ಯದ ವಿವಿಧೆಡೆ ಸೈಬರ್ ಅಪರಾಧ ಜಾಗೃತಿ ಕಾರ್ಯಕ್ರಮ ನಡೆಸಿದ್ದು, ನೌಕರರ ಸಂಘದವರು ಬೀದರ್ ಕಾರ್ಯಕ್ರಮ ಬಹಳ ಅಚ್ಚುಕಟ್ಟಾಗಿ ಸಂಘಟಿಸಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ಕರ್ನಾಟಕದ ವನಜಾಕ್ಷಿ ಶ್ಲಾಘಿಸಿದರು.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 90ಕ್ಕೂ ಅಧಿಕ ಅಂಕ 81 ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ 90ಕ್ಕೂ ಹೆಚ್ಚು ಅಂಕ ಗಳಿಸಿದ 53 ಸರ್ಕಾರಿ ನೌಕರರ ಮಕ್ಕಳಿಗೆ ತಲಾ ರೂ. 1 ಸಾವಿರ ನಗದು, ಫಲಕ ಹಾಗೂ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಶಿವಾನಿ ಸ್ವಾಮಿ ಅವರನ್ನು ಸಂಘದಿಂದ ಸನ್ಮಾನಿಸಿ, ರೂ. 11 ಸಾವಿರ ನೆನಪಿನ ಕಾಣಿಕೆ ನೀಡಲಾಯಿತು.
ಉತ್ತಮ ಶೈಕ್ಷಣಿಕ ಸಾಧನೆಗೈದ ಬೀದರ್ ತಾಲ್ಲೂಕಿನ ಬಿಆ???ಪಿ ಹಾಗೂ ಸಿಆ???ಪಿಗಳನ್ನು ಸತ್ಕರಿಸಲಾಯಿತು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿಲ್ಪಾ ಎಂ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಸುರೇಶ ಚನಶೆಟ್ಟಿ, ಎಇಇ ಶಿವಶಂಕರ ಕಾಮಶೆಟ್ಟಿ, ವಾಣಿಜ್ಯ ತೆರಿಗೆ ಇಲಾಖೆಯ ಆಯುಕ್ತ ಮಹೇಶ ಪಾಟೀಲ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಾದ ಕಿರಣ ಪಾಟೀಲ, ಮಾಣಿಕರಾವ್ ಪಾಟೀಲ, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸಲೀಂ ಪಾಶಾ, ಕಲಾವಿದರಾದ ವೈಜಿನಾಥ ಸಜ್ಜನಶೆಟ್ಟಿ, ನವಲಿಂಗ ಪಾಟೀಲ, ಮನೋಹರ ಕಾಶಿ ಮತ್ತಿತರರು ಇದ್ದರು.
ಸಂಘದ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಾಜಶೇಖರ ಮಂಗಲಗಿ ಸ್ವಾಗತಿಸಿದರು. ಕಾರ್ಯಾಧ್ಯಕ್ಷ ಡಾ. ರಾಜಕುಮಾರ ಹೊಸದೊಡ್ಡೆ ನಿರೂಪಿಸಿದರು. ಗೌರವಾಧ್ಯಕ್ಷ ಬಸವರಾಜ ಜಕ್ಕಾ ವಂದಿಸಿದರು.