
* ಚಿ.ಗೋ ರಮೇಶ್
ಕನ್ನಡದ ಚಿತ್ರಗಳು ಪರಭಾಷೆಯಲ್ಲಿ ಸದ್ದು ಮಾಡುತ್ತಿವೆ.ಇದೀಗ ಆ ಸಾಲಿಗೆ ಮತ್ತೊಂದು ಸೇರ್ಪಡೆ ” ಮಂಡಲ”. ಹಾಲಿವುಡ್ ಮಾದರಿಯ ಚಿತ್ರವನ್ನು ಕನ್ನಡದಲ್ಲಿ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕ, ನಿರ್ಮಾಪಕ ಅಜಯ್ ಸರ್ಪೇಶ್ ಕರ್.
ಸೈನ್ಸ್ ಫಿಕ್ಷನ್ ಘಟನೆಯನ್ನಾಧರಿಸಿ ಏಲಿಯನ್ ಗಳನ್ನು ಕನ್ನಡ ಚಿತ್ರರಂಗಕ್ಕೂ ಕರೆ ತಂದಿದ್ದಾರೆ. ಅವರಿಗೆ ಬೆನ್ನೆಲುಬಾಗಿ ಹಿರಿಯ ನಟ ಪ್ರಕಾಶ್ ಬೆಳವಾಡಿ ಕಥೆಯನ್ನು ಸಂಪೂರ್ಣ ತಿದ್ದಿ ತೀಡುವ ಜೊತೆಗೆ ಅದಕ್ಕೊಂದು ಸಿನಿಮಾ ರೂಪ ಕೊಟ್ಟಿದ್ದಾರೆ. ಇದರ ಜೊತೆಗೆ ಪ್ರಮುಖ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದಾರೆ.
ಚಿತ್ರದ ಕುರಿತು ಮಾಹಿತಿ ಹಂಚಿಕೊಂಡ ನಿರ್ಮಾಪಕರೂ ಆಗಿರುವ ನಿರ್ದೇಶಕ ಅಜಯ್, ನಿರ್ದೇಶಕ,ನಿರ್ಮಾಪಕ- ಅಜಯ್ ಸರ್ಪೇಶ್ ಕರ್; ಅಮೇರಿಕಾದಲ್ಲಿ ಕೈತುಂಬ ಸಂಬಳ ಬರುತ್ತಿದ್ದ ಉದ್ಯೋಗ ಬಿಟ್ಟು ಸಿನಕಮಾ ನಿರ್ದೇಶನ ಮಾಡುತ್ತೇನೆ ಎಂದಾಗ ಅಪ್ಪ, ಅಮ್ಮ ಮರು ಮಾತನಾಡದೆ ಬೆಂಬಲ ನೀಡದರು ಅದರ ಫಲವೇ ಮಂಡಲ.
ಸೈನ್ಸ್ ಪಿಕ್ಷನ್ ಸಿನಿಮಾ ಆದ್ದರಿಂದ ವಿಷುವಲ್ ಎಫೆಕ್ಟ್ ಹಾಲಿವುಡ್ ಸಿನಿಮಾ ಮಾದರಿಯಲ್ಲಿ ಮಾಡಿದ್ದೇವೆ.ಅದು ಜೊತೆಗೆ ಕೊರೊನಾ ಸೋಂಕು ಬಂದಿದ್ದರಿಂದ ಚಿತ್ರ ಪೂರ್ಣಗೊಳ್ಳುವುದು ತಡ ಆಯಿತು.ಮುಂದಿನವಾರ ಚಿತ್ರ ತೆರೆಗೆ ಬರುತ್ತಿದೆ.ಮನೆ ಮಂದಿಯಲ್ಲಾ ಯಾವುದೇ ಮುಜುಗರ ಇಲ್ಲದೆ ನೋಡಬಹುದಾದ ಚಿತ್ರ ಇದು ಎಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.
ನಟ ಕಿರಣ್ ಶ್ರೀನಿವಾಸ್ , ಕನ್ನಡದಲ್ಲಿ ಹೊಸ ಬಗೆಯ ಅದರಲ್ಲಿಯೂ ಎಲಿಯನ್ ಬರುತ್ತವೆ ಎಂದಾಗ ಅವಕಾಶ ಬಿಡಬಾರದು ಎಂದು ಒಪ್ಪಿಕೊಂಡೆ ಎಂದರೆ ನಟಿ ಶರ್ಮಿಳಾ ಮಾಂಡ್ರೆ, ಎರೋಸ್ಪೇಸ್ ಇಂಜಿನಿಯರ್ ಪಾತ್ರ ಚಿತ್ರ ಚೆನ್ನಾಗಿ ಬಂದಿದೆ ಎಲ್ಲರ ಸಹಕಾರವಿರಲಿ ಎಂದರು.
ಹಿರಿಯ ಕಲಾವಿದೆ ಸುಧಾ ಬೆಳವಾಡಿ ಈ ಮಾದರಿಯ ಸಿನಿಮಾ ಕನ್ನಡದಲ್ಲಿ ಬಂದಿರುವುದು ಹೆಮ್ಮೆಯ ಸಂಗತಿ. ಹಾಲಿವುಡ್ ರೀತಿ ಕನ್ನಡ ಸಿನಿಮಾ ಮಾಡಿದ್ದಾರೆ ಎಂದರೆ ನಟಿ ಸಂಯುಕ್ತ ಹೊರನಾಡು, ಡಿಸಿಪಿ ಪಾತ್ರ. ಏಲಿಯನ್, ಮೈಸೂರಿಗೆ ಬರುತ್ತವೆ ಅನ್ನುವುದು ಖುಷಿಯ ಸಂಗತಿ ಎಂದರು. ಸಂಗೀತ ನಿರ್ದೇಶಕ ,ಛಾಯಾಗ್ರಾಹಕ ಮನೋಹರ್ ಜೋಷಿ ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡರು.
ತರಬೇತಿ ಮುಖ್ಯ
ಚಿತ್ರದ ಸ್ಕ್ರಿಪ್ಟ್ ಮಾಡುವ ವೇಳೆ ಪಕ್ಕಾ ಪ್ಲಾನ್ ಮಾಡಿದರೆ 3 ಕೋಟಿ ಖರ್ಚಾಗುವ ಕಡೆ ಒಂದುಕೋಟಿ ಒಳಿಸಬಹುದು. ಇಂತಹದೊಂದು ತರಬೇತಿ ಸಂಸ್ಥೆ ಆರಂಭಿಸುವ ಗುರಿ ಇದೆ ಎಂದರು ಹಿರಿಯ ಕಲಾವಿದ ಪ್ರಕಾಶ್ ಬೆಳವಾಡಿ ಹೀಗಾಗಿ ನಿರ್ದೇಶಕರಿಗೆ, ಕಲಾವಿದರಿಗೆ ಪಾತ್ರದ ತಯಾರಿ, ನಿರ್ಮಾಪಕನಿಗೆ ಚಿತ್ರೀಕರಣ ಸಂಬಂದ ತರಬೇತಿ ನೀಡುವ ಸಲುವಾಗಿ ಬೆಂಗಳೂರಿನಲ್ಲಿ ಹೊಸ ಪ್ರಯತ್ನ ಮಾಡುತ್ತಿದ್ದೇನೆ . ಅನಗತ್ಯವಾಗಿ ಸ್ವಿಟ್ಜರ್ ಲ್ಯಾಂಡ್ ನಲ್ಲಿ ಹಾಡಿನ ಚಿತ್ರೀಕರಣ ಮಾಡುವುದು ಸೇರಿದಂತೆ ಮತ್ತಿತರ ವಿಷಯ ಹಂಚಿಕೊಳ್ಳುವುದಾಗಿ ತಿಳಿಸಿದರು.