ಸೈನಿಕಶಾಲೆ ಮಂಜೂರಿ: ಮಾಜಿ ಸೈನಿಕರಿಂದ ಸನ್ಮಾನ

ಬೀದರ,ಸೆ 27: ಜಿಲ್ಲೆಗೆ ನೂತನವಾಗಿ ಮಂಜೂರಿಯಾಗಿರುವ ಸೈನಿಕ
ಶಾಲೆಯ ಹಿನ್ನಲೆಯಲ್ಲಿ ಜಿಲ್ಲೆಯ ಎಲ್ಲಾ ಮಾಜಿ ಸೈನಿಕರು
ಕೇಂದ್ರ ಸಚಿವ ಹಾಗೂ ಸಂಸದ ಭಗವಂತ ಖೂಬಾ ಅವರಿಗೆ ಸನ್ಮಾನಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕೇಂದ್ರ ಸಚಿವ ಭಗವಂತ
ಖೂಬಾ ಅವರು ಪ್ರಧಾನಿ ಮೋದಿಯವರ ಸರ್ಕಾರ ದೇಶದ ಸೈನ್ಯಕ್ಕೆ ಹೊಸ ಬಲ ನೀಡಿದೆ.ಎಲ್ಲಾ ಕ್ಷೇತ್ರದಲ್ಲೂಆಧುನಿಕರಣ ಮಾಡಲಾಗಿದೆ.ಕಾಂಗ್ರೆಸ್ ಸರ್ಕಾರ ಅವರ ಅಧಿಕಾರದಲ್ಲಿ ಭ್ರಷ್ಟಾಚಾರ ಬಿಟ್ಟುಏನೂ ಯೋಚನೆ ಮಾಡಿಲ್ಲ, ಆದರೆ ನಮ್ಮ ಸರ್ಕಾರ ಬಂದ ಮೇಲೆಸೈನಿಕರಿಗಾಗಿ ಒನ್ ರ್ಯಾಂಕ್ ಒನ್ ಪೇನಷನ್ ಯೋಜನೆ ಜಾರಿಗೆ ತಂದು,ಎಲ್ಲಾ ಮಾಜಿ ಸೈನಿಕರ ಬಹುದಿನಗಳ ಕನಸು ನನಸು ಮಾಡಿ, ನಮ್ಮ
ಪ್ರಧಾನಿ ದೀಪಾವಳಿ ಹಬ್ಬವನ್ನು ದೇಶದ ಯೋಧರ ಜೊತೆಆಚರಿಸುತ್ತಾರೆ ಎಂದು ತಿಳಿಸಿದರು.ದೇಶದಲ್ಲಿ 23 ಹಾಗೂ ರಾಜ್ಯದಲ್ಲಿ ನಮ್ಮ ಜಿಲ್ಲೆಗೆ ಏಕೈಕ ಸೈನಿಕ
ಶಾಲೆ ಮಂಜೂರಿ ಮಾಡಿದ್ದಾರೆ.ದೇಶದಲ್ಲಿ ದುರಹಂಕಾರಿಗಳ,ಭ್ರಷ್ಟಾಚಾರಿಗಳ ಒಂದು ಸಂಘ ರಚನೆಯಾಗಿದೆ, ಹಾಗಾಗಿನಾವೆಲ್ಲರೂ ಮತ್ತೊಂದು ಯುದ್ಧಕ್ಕೆ ತಯಾರಾಗಬೇಕಿದೆ. 9 ಸಾವಿರ ಸೈನಿಕರು, ಒಂದೊಂದು ಊರು ದತ್ತುತೆಗೆದುಕೊಳ್ಳಿ, ಇದು ದೇಶದ ಚುನಾವಣೆ, ದೇಶದಲ್ಲಾದಬದಲಾವಣೆ, ಅಭಿವೃದ್ದಿಗಳನ್ನು ಮುನ್ನಲೆಗೆ ತಂದು, ಸುಳ್ಳುಆರೋಪಗಳಿಗೆ ದೂರವಿಡುವ ಕೆಲಸ ಮಾಡಬೇಕು ಎಲ್ಲಾಸೈನಿಕರಲ್ಲಿ ವಿನಂತಿಸಿಕೊಂಡರು.ಈ ಸಂದರ್ಭದಲ್ಲಿ ಜಿಲ್ಲಾ ಮಾಜಿ ಸೈನಿಕರ ಸಂಘದಅಧ್ಯಕ್ಷ ಪಂಡಪ್ಪ ಮೇತ್ರೆ,ಶಿವಾಜಿ ಮಾನಕರಿ,ವಾಮನರಾವ ಹನಿಗಾರೆ, ವಿಲಾಸರಾವ ಗಾಯಕವಾಡ ಹಾಗೂಮಹ್ಮದ ಅಕ್ಬರ ಅಲಿಮಾತನಾಡಿದರು.ಮಾಜಿ ಸೈನಿಕರುಗಳಾದ ಸಂಜಿವಕುಮಾರ ಪಟ್ನೆ, ಶಿವಾಜಿ ಮೆತ್ರೆ, ವಿನೊದ ಜಾಧವ,ಮಾರುತಿ ಬಿರಾದರ, ಎಚ್. ವಸಂತ, ಬಾಬುರಾವ ಶೆಳಗೆ, ಮಾಧವಹುಮನಾಬಾದೆ, ಯಾದವರಾವ, ಹಣಮಂತಪ್ಪ ಹಾಗೂ ನೂರಾರುಸೈನಿಕರು ಮತ್ತು ಬಿಜೆಪಿ ಜಿಲ್ಲಾ ಪ್ರಧಾನಕಾರ್ಯದರ್ಶಿಮಲ್ಲಿಕಾರ್ಜುನ ಕುಂಬಾರ, ಮುಖಂಡರಾದ ಅಭಿಮನ್ಯೂ ನಿರುಗುಡೆ,ಹಣಮಂತ ಧನಶೆಟ್ಟಿ ಇತರರು ಉಪಸ್ಥಿತರಿದ್ದರು.