ಸೈನಿಕರ ಹತ್ಯೆ ಪ್ರತೀಕಾರಕ್ಕೆ ಅಮೆರಿಕ ಪಣ

ವಾಷಿಂಗ್ಟನ್,ಫೆ.೨- ಸಿರಿಯಾದ ಗಡಿಗೆ ಸಮೀಪವಿರುವ ಜೋರ್ಡಾನ್‌ನಲ್ಲಿ ಡ್ರೋನ್ ದಾಳಿಯಲ್ಲಿ ಮೂರು ಮಂದಿ ಅಮೇರಿಕಾ ಸೈನಿಕರ ಸಾವಿಗೆ ಪ್ರತೀಕಾರವಾಗಿ ದಾಳಿ ನಡೆಸಲು ಅಮೆರಿಕಾ ಮುಂದಾಗಿದೆ
ಸಿರಿಯಾ ಮತ್ತು ಇರಾಕ್‌ನಲ್ಲಿ ಇರಾನ್ ನೆಲೆಗಳ ಮೇಲೆ ಮೇಲೆ ಸರಣಿ ದಾಳಿ ನಡೆಸಲು ಅಮೆರಿಕಾ ಅನುಮೋದನೆ ನೀಡಿದ್ದು ಯಾವಾಗ ದಾಳಿ ನಡೆಸಬೇಕು ಎನ್ನುವುದನ್ನು ಸೇನಾ ಪಡೆಗಳು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಲಾಗಿದೆ.
ಇರಾಕ್‌ನಲ್ಲಿನ ಇಸ್ಲಾಮಿಕ್ ರೆಸಿಸ್ಟೆನ್ಸ್, ಇರಾನ್‌ನ ರೆವಲ್ಯೂಷನರಿ ಗಾಡ್ರ್ಸ್ ಫೊರ್ಸ್‌ನಿಂದ ಶಸ್ತ್ರಸಜ್ಜಿತ, ಧನಸಹಾಯ ಮತ್ತು ತರಬೇತಿ ಪಡೆದ ಮಂದಿ ಅಮೇರಿಕಾದ ಸೈನಿಕದ ಮೇಲೆ ದಾಳಿ ನಡೆಸಿದ್ದರು. ಇದರ ಪರಿಣಾಮ ಮೂರು ಸೈನಿಕರು ಸಾವನ್ನಪ್ಪಿ ಅನೇಕ ಮಂದಿ ಗಾಯಗೊಂಡಿದ್ದರು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಲು ಅಮೇರಿಕಾ ಮುಂದಾಗಿದೆ.
ಏತನ್ಮಧ್ಯೆ, ಟವರ್ ೨೨ ಎಂದು ಕರೆಯಲ್ಪಡುವ ಮಿಲಿಟರಿ ನೆಲೆಯಲ್ಲಿ ಇತರ ೪೧ ಅಮೆರಿಕಾ ಸೈನಿಕರು ಗಾಯಗೊಂಡ ದಾಳಿಯಲ್ಲಿ ನಮ್ಮದು ಯಾವುದೇ ಪಾತ್ರವಿಲ್ಲ ಎಂದು ಇರಾನ್ ನಿರಾಕರಿಸಿದೆ.
ದಾಳಿ ಮಾಡಲು ಬಳಸಿದ ಡ್ರೋನ್ ಇರಾನ್‌ನಿಂದ ತಯಾರಿಸಲ್ಪಟ್ಟಿದೆ ಎಂದು ಅಮೆರಿಕಾ ಗುಪ್ತಚರ ಹೇಳಿದೆ. ಆದರೆ ದಾಳಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ಉಕ್ರೇನ್‌ನ ಆಕ್ರಮಣಕ್ಕಾಗಿ ಇರಾನ್ ರಷ್ಯಾಕ್ಕೆ ಕಳುಹಿಸುತ್ತಿರುವ ಡ್ರೋನ್‌ಗಳಂತೆಯೇ ಇದೆ ಎಂದು ಅಮೆರಿಕಾ ಅಧಿಕಾರಿಗಳು ಹೇಳಿದ್ದಾರೆ.
ಅಮೆರಿಕಾದ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಪ್ರತಿಕ್ರಿಯೆ ನೀಡಿ ಮಿಲಿಟರಿ ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದು “ನಾವು ಎಲ್ಲಿ ಆಯ್ಕೆ ಮಾಡುತ್ತೇವೆ, ಆಯ್ಕೆ ಮಾಡಿದಾಗ ಮತ್ತು ನಾವು ಹೇಗೆ ಆಯ್ಕೆ ಮಾಡುತ್ತೇವೆ ಎನ್ನುವುದನ್ನು ಶೀಘ್ರದಲ್ಲಿಯೇ ಮಾಹಿತಿ ನೀಡುತ್ತೇವೆ. ಅಮೇರಿಕಾ ಸೈನಿಕದ ತ್ಯಾಗ ವ್ಯರ್ಥವಾಗಲು ಬಿಡುವುದಿಲ್ಲ ಎಂದಿದ್ಧಾರೆ.
ಘಟನೆಗೆ ಹೊಣೆಗಾರರನ್ನಾಗಿ ಮಾಡುವುದನ್ನು ಖಚಿತಪಡಿಸಿಕೊಳ್ಳಲು ಸಂಬಂಧಿಸಿದ ಸವಾಲನ್ನು ಪ್ರತಿಯೊಬ್ಬರ ಮೇಲೂ ದಾಳಿ ಮಾಡುತ್ತೇವೆ. ಇದರಿಂದ ವಿರಮಿಸುವುದಿಲ್ಲ ಎಂದು ಗುಡುಗಿದ್ದಾರೆ.