ಸೈನಿಕರ ತ್ಯಾಗ, ಬಲಿದಾನ ಗೌರವದಿಂದ ಸ್ಮರಿಸಿ

ಇಂಡಿ:ಜು.28:ದೇಶ ರಕ್ಷಣೆಯ ಕಾರ್ಯದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಭಾರತೀಯ ಯೋಧ ವೀರರನ್ನು ಸ್ಮರಿಸುವ ಈ ಕಾರ್ಗಿಲ್ ವಿಜಯ ದಿವಸವನ್ನು ಯಾವೋಬ್ಬ ಭಾರತೀಯನು ಎಂದಿಗೂ ಮರೆಯುವದಿಲ್ಲ ಎಂದು ಮಾಜಿ ಸೈನಿಕ ಸಿ.ಎಸ್.ಬಾಗವಾನ ಹೇಳಿದರು.

ಪಟ್ಟಣದ ಸರಕಾರಿ ಪದವಿ ಮಹಾವಿದ್ಯಾಲಯದಲ್ಲಿಕಾರ್ಗಿಲ್ ವಿಜಯೋತ್ಸವ ದಿನಾಚರಣೆಯಲ್ಲಿ ಮಾತನಾಡುತ್ತಿದ್ದರು.

ಎಬಿವಿಪಿ ವಕ್ತಾರ ಸಿದ್ದು ಹಾವಳಗಿ ಮಾತನಾಡಿ 1999 ರಲ್ಲಿ ಪಾತಕಿ ಪಾಕಿಸ್ತಾನದ ವಿರುದ್ಧದ 60 ದಿನಗಳ ಕಾಲ ನಡೆದ ಘನಘೋರ ಯುದ್ಧದಲ್ಲಿ 527 ಜನ ನಮ್ಮ ವೀರ ಸೈನಿಕರು ಪ್ರಾಣ ತ್ಯಾಗ ಮಾಡಿ ಪ್ರಚಂಡ ವಿಜಯ ಸಾಧಿಸಿದ ದಿನವಾಗಿದೆ. ಕ್ಯಾಪ್ಟನ್ ಉನ್ನಿಕೃಷ್ಣನ್, ವಿಕ್ರಮ ಭಾತ್ರ ಅವರ ಅನೇಕ ಘಟನಾವಳಿಗಳನ್ನು ಸ್ಮರಿಸಿದರು.

ಪ್ರಾಚಾರ್ಯ ಪಿ.ಎಸ್.ವಾಗ್ದಾಳ, ಎಬಿವಿಪಿ ನಗರ ಕಾರ್ಯದರ್ಶಿ ಶಿವಾಜಿ ಜಾಧವ, ಈರಣ್ಣ ಸಿಂದಗಿ, ಪ್ರಫುಲ ಕಟ್ಟಿಮನಿ, ಸಚಿನ ಧನಗೊಂಡ, ಅಭಿಷೇಕ ಕ್ಷತ್ರಿ, ಅಕ್ಷಯ ಕ್ಷತ್ರಿ, ಸಚೀನ ದಾನಗೊಂಡ, ಸಾವಿತ್ರಿ ಮತ್ತಿತರಿದ್ದರು.