ಸೈನಿಕ,ರೈತ ದೇಶದ ಆಸ್ತಿ: ದಯಾಸಾಗರ ಪಾಟೀಲ

ಇಂಡಿ: ಜು.28: ಸೈನಿಕರು ,ರೈತರು ಈ ದೇಶದ ಆಸ್ತಿ. ಸೈನಿಕ ದೇಶದ ಗಡಿ ಕಾಯದರೆ ರೈತ ಕಷ್ಟ ಪಟ್ಟು ದೇಶದ ಜನತೆಗೆ ಅನ್ನ ನೀಡುವ ಅನ್ನಧಾತ ಇಂತಹ ಪವಿತ್ರ ಕಾರ್ಯದಲ್ಲಿ ತೊಡಗಿರುವ ಇವರಿಗೆ ಕೋಟಿ ಕೋಟಿ ನಮನ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು.
ತಾಲೂಕಿನ ಗೋರನಾಳ ಗ್ರಾಮದಲ್ಲಿ ಕಾರ್ಗಿಲ ವಿಜಯೋತ್ಸವ ದಿನದ ನಿಮಿತ್ಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದು ದೇಶ ಜನತೆ ಶಾಂತಿಯುತ ಬದುಕಿಗೆ ನಮ್ಮ ವೀರ ಯೋಧರ ತ್ಯಾಗವೆ ಕಾರಣ ಗಡಿಯಲ್ಲಿ ಮಳೆ,ಚಳಿ ಅನೇಕ ಕಷ್ಟ ನಷ್ಟಗಳ ಮಧ್ಯ ಕಾಲಕಳೆಯುವ ಅವರು ಧನ್ಯರು ಇಂತಹ ವೀರಯೋಧರಿಗೆ ಎಷ್ಟು ಬಾರಿ ಸ್ಮರಿಸಿದರೂ ಸಾಲದು.
ಕಾರ್ಗಿಲ್ ವಿಜಯ ದಿವಸ ಒದು ದಿನಕ್ಕೆ ಸೀಮಿತವಾಗಬಾರದು ಹುತಾತ್ಮ ವೀರ ಯೋಧರನ್ನು ನಿತ್ಯೆ ನಿರಂತರ ಸ್ಮರಿಸಬೇಕು. ಹುತಾತ್ಮ ಯೋಧರ ಜೀವನಗಾಥೆ ಶಾಲಾ ಕಾಲೇಜುಗಳಲ್ಲಿ ತಿಳಿಸುವ ಕಾರ್ಯನಡೆಯಬೇಕು. ಪ್ರತಿ ವಿಧ್ಯಾರ್ಥಿಗಳಲ್ಲಿ ದೇಶಾಭೀಮಾನದ ಕಿಚ್ಚು ಯುವಕರಲ್ಲಿ ಬರುವಂತೆ ಖಡಕ್ ವಿಚಾರ ತಿಳಿಸಬೇಕೆಂದರು.
ದಯಾನಂದ ಹಿರೇಮಠ, ಅಶೋಕ ಜಿಡ್ಡಿಮನಿ, ಬಸವರಾಜ ಹಟ್ಟಿ, ಚಂದು ಸಾಹುಕಾರ, ಸುಭಾಷ ಕೌಲಗಿ,ಮಲ್ಲು ಸಾಗನೂರ, ಡಾ.ಸಿದ್ದು ಗಂಗನ್ನಳ್ಳಿ,ಶರಣು ಹಟ್ಟಿ,ಚಿದಾನಂದ ಗಂಗನ್ನಳ್ಳಿ, ಹೊನ್ನಪ್ಪ ಹಟ್ಟಿ, ಭಾಗಣ್ಣಾ ಮಾಶ್ಯಾಳ, ರಾಮಣ್ಣಾ ಮೇತ್ರಿ, ರವಿ ನಾಯ್ಕೋಡಿ, ಶಿವಪ್ಪ ಕನ್ನೂರ, ಶಿವುರುದ್ರ ಕುಂಬಾರ, ಸಂತೋಷ ಮಂಗಳೂರ, ಕೆಂಚಪ್ಪ ಹಿರೇಕುರಬರ ಸೇರಿದಂತೆ ಬಿಜೆಪಿ ಕಾರ್ಯರ್ತರು ಮುಖಂಡರು ಇದ್ದರು.