ಸೈನಿಕರು ದೇಶದ ಆಸ್ತಿ

(ಸಂಜೆವಾಣಿ ವಾರ್ತೆ)
ನೇಸರಗಿ,ಆ7: ದೇಶಕ್ಕಾಗಿ ಹಗಲಿರುಳು ಸೇವೆ ಸಲ್ಲಿಸುವ ಸೈನಿಕರು ದೇಶದ ಆಸ್ತಿ ಎಂದು ದೇಶನೂರ ವಿರಕ್ತಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಹೇಳಿದರು.
ಸಮೀಪದ ದೇಶನೂರ ಗ್ರಾಮದ ಗ್ರಾಮದ ಭಾಂವಿ ಬಸವೇಶ್ವರ ದೇವಸ್ಥಾನದಲ್ಲಿ ನಡೆದ ಮಾಜಿ ಸೈನಿಕರ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿ, ಒಂದು ದೇಶ ಸುಭದ್ರವಾಗಿರಬೇಕಾಗದರೆ ಸೈನಿಕ ಸೇವೆಯು ಉತ್ತಮವಾಗಿರಬೇಕು. ಅಂದಾಗ ಮಾತ್ರ ದೇಶ ಸುಭದ್ರವಾಗಿರಲು ಸಾಧ್ಯ ಎಂದರು.
ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಂ.ಡಿ.ನಂದೆನ್ನವರ ಮಾತನಾಡಿ, ಸೈನಿಕರು, ರೈತರು ನಮ್ಮ ದೇಶದಲ್ಲಿ ಸೇವೆ ಸಲ್ಲಿಸದಿದ್ದರೆ ದೇಶವು ಅಭಿವೃದ್ದಿಯಲ್ಲಿ ಹಿಂದೆ ಬೀಳುತ್ತದೆ. ಹೀಗಾಗಿ ದೇಶಕ್ಕಾಗಿ ಹೋರಾಡಿ ದೇಶ ರಕ್ಷಣೆ ಮಾಡುವ ಸೈನಿಕರನ್ನು ಸದಾ ಸ್ಮರಿಸಬೇಕಿದೆ. ಮಾಜಿ ಸೈನಿಕರು ಸಂಘಟನೆ ಮಾಡಿಕೊಂಡಿರುವದು ಶ್ಲಾಘನೀಯ ಕಾರ್ಯ ಎಂದರು.
ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಸುರೇಖಾ ಕೇದಾರಿ ವಹಿಸಿದ್ದರು. ಸುಬೇದಾರ ಅಧಿಕಾರಿ ಶಿವಾನಂದ ಕೊತ್ತಲ, ಮಾಜಿ ಸೈನಿಕರ ಸಂಘದ ಅಧ್ಯಕ್ಷ ಮಲ್ಲಪ್ಪ ಕೇದಾರಿ, ಉಪಾಧ್ಯಕ್ಷ ಸೋಮನಿಂಗ ಕೋಟಗಿ, ದೇಶನೂರ ಪಿಕೆಪಿಎಸ್ ಅಧ್ಯಕ್ಷ ಬಸವರಾಜ ಕೇದಾರಿ, ಉಪಾಧ್ಯಕ್ಷ ಬಸವರಾಜ ಕಮತಗಿ, ಪಿಎಸ್‍ಐ ವಾಯ್.ಎಲ್.ಶಿಗಿಹಳ್ಳಿ, ಆನಂದ ಜ್ಯೋತಿ, ಮಾಜಿ ತಾ.ಪಂ ಸದಸ್ಯ ಶ್ರೀಶೈಲ ಕಮತಗಿ, ಸಿದ್ದಪ್ಪ ಮೊಗಲಾನಿ, ಮಲ್ಲಿಕಾರ್ಜುನ ಕೊತ್ತಲ, ಬಾಬು ಬಡಿಗೇರ, ಮಲ್ಲೇಶ ಕರೆನ್ನವರ, ನಾಗಪ್ಪ ಅರಳಿಕಟ್ಟಿ, ಡಾ.ಎಂ.ಆರ್.ಮುಲ್ಲಾ, ಡಾ.ನವಾಜ್ ಮುಲ್ಲಾ, ಕಾಶಿನಾಥ ಹಿರೇಮಠ, ಕಾಶಪ್ಪ ಓಬನ್ನವರ, ಸೋಮಪ್ಪ ಠಕ್ಕನವರ, ಕಾಶಿನಾಥ ಹಿರೇಮಠ, ನೀಲಕಂಠ ಹಟ್ಟಿ, ಶಿವಾನಂದ ಗೂರನವರ, ಮಾಜಿ ಸೈನಿಕರ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಾಘರಾಜ ಮುಚ್ಚಂಡಿ ಸ್ವಾಗತಿಸಿದರು. ಚಂದ್ರಶೇಖರ ಪೂಜಾರ ನಿರೂಪಿಸಿದರು.ಸಂತೋಷ ತಿಳಗಂಜಿ ವಂದಿಸಿದರು.