ಸೈನಿಕರಿಗೆ ಸನ್ಮಾನ

ಸಂಜೆ ವಾಣಿ ವಾರ್ತೆ
ಕೊಟ್ಟೂರು 13: ಪಟ್ಟಣದ ಕೋಟೆ  ವೀರಭದ್ರೇಶ್ವರ ವಿನಾಯಕ ಮಿತ್ರ ಮಂಡಳಿ ವತಿಯಿಂದ ಸೈನಿಕರಿಗೆ ಸನ್ಮಾನ ಮಾಡುವ ಮೂಲಕ ಗಣೇಶ ಚತುರ್ಥಿ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಮ್ಮ ದೇಶದ ಯೋಧರಾದ ಶ್ರೀ ಅಜಯ್ ಕುಮಾರ್ ಕೂಡ್ಲಿಗಿ ಹಾಗೂ ನಾಗರಾಜ್ ಸಿದ್ದಯ್ಯನಕೋಟೆ  ಇವರನ್ನು ಸನ್ಮಾನಿಸಲಾಯಿತು . ಸಾನಿಧ್ಯವನ್ನು ಶಿವಪ್ರಕಾಶ ಕೊಟ್ಟೂರು ದೇವರು ವಹಿಸಿದ್ದರು .
ಈ ಕಾರ್ಯಕ್ರಮದಲ್ಲಿ ಯೋಧರಾದ ನಾಗರಾಜ್ ಅವರು ಯುವಕರನ್ನು ಉದ್ದೇಶಿಸಿ ದೇಶದ ರಕ್ಷಣೆಗೆ ಎಲ್ಲ ಯುವಕರು ಕಂಕಣಬದ್ಧರಾಗಬೇಕು ಎಂದು ತಿಳಿಸಿದರು. ಹಾಗೂ ಶ್ರೀಗಳು ನಮ್ಮ ನಾಡಿನ ಎರಡು ಕಣ್ಣು ಗಳಾದ ಯೋಧರು ಮತ್ತು ರೈತರ ಮಹತ್ವವನ್ನು ತಿಳಿಸಿದರು.
ಈ ಕಾರ್ಯಕ್ರಮದ ನಿರೂಪಣೆಯನ್ನು ಪಿ.ಎಂ ಬಸವಲಿಂಗಯ್ಯ ಅವರು ನಿರ್ವಹಿಸಿದರು. ಸ್ವಾಗತ ಭಾಷಣವನ್ನು ಉಮಾಪತಿ ಸ್ವಾಮಿ ಎಂ.ಎಂ. ಇವರು ನೆರವೇರಿಸಿಕೊಟ್ಟರು. ಹಾಗೂ ಈ ಕಾರ್ಯಕ್ರಮದಲ್ಲಿ ಆರ್.ಎಂ.ಅಜ್ಜಯ್ , ಪಂಚಮಶಾಲಿ  ಅಧ್ಯಕ್ಷರಾದ ಕೆ. ಶಿವಕುಮಾರ್ ಗೌಡ್ರು ಹಾಗೂ ಕನ್ನಿಹಳ್ಳಿ ರಾಜನ ಗೌಡ್ರು,  ಸಂಗಮೇಶ್ ಶಿಕ್ಷಕರು ಹಾಗೂ ಯುವಕರ ಬಳಗದವರು ಉಪಸ್ಥಿತರಿದ್ದರು .