ಸೈನಿಕರನ್ನು ಗೌರವಿಸುವ ಕಾರ್ಯ ಆಗಬೇಕು

ಕೋಲಾರ,ಜ.೬ : ದೇಶ ಸೇವೆಗಾಗಿ ದುಡಿಯುತ್ತಿರುವ ಸೈನಿಕರನ್ನು ಗೌರವಿಸುವಂತಹ ಕೆಲಸ ಆಗಬೇಕೆಂದು ಮಾಜಿ ಯೋಧರಾದ ಪಿ. ನಾರಾಯಣಪ್ಪ ಅವರು ಅಭಿಪ್ರಾಯ ಪಟ್ಟರು.
ಹಾಸನದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಹಾಸನ ಜಿಲ್ಲಾ ಸಾಹಿತ್ಯ ಸಂಘಟನೆ ಹಾಗೂ ಸಿರಿ ಸಮೃದ್ದಿ ಫೌಂಡೇಶನ್ ವತಿಯಿಂದ ಭಾನುವಾರ ಹಮ್ಮಿಕೊಂಡಿದ್ದ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ದೇಶದ ಕಲೆ ಸಾಹಿತ್ಯ ಸಂಸ್ಕೃತಿ ಬೇರೆ ಯಾವ ದೇಶದಲ್ಲೂ ಇಲ್ಲ. ಅಂತಹ ಅದ್ಭುತವಾದ ಪರಂಪರೆಯನ್ನು ಒಳಗೊಂಡಿರುವ ನಮ್ಮ ಕರ್ನಾಟಕ ರಾಜ್ಯ ಸಂಪತ್ಭರಿತವಾಗಿದೆ. ಇದನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ನಾವುಗಳು ಕಾರ್ಯ ಪ್ರವೃತ್ತರಾಗಬೇಕು. ನಾವುಗಳು ಪ್ರತಿಯೊಂದು ಮನೆಯಲ್ಲಿ ದೇಶವನ್ನು ಕಾಯುವ ಸೈನಿಕರನ್ನು ಹುಟ್ಟು ಹಾಕಬೇಕು ಎಂದರು.
ಅತಿಥಿಗಳಾಗಿ ಭಾಗವಹಿಸಿ ಮಾತಾನಾಡಿದ ಕವಿ ಡಾ. ಶರಣಪ್ಪ ಗಬ್ಬೂರ್ ಅವರು ಯುವಕರು ಇಡೀ ನಾಡಿನ ಭವಿಷ್ಯವನ್ನು ಕಾಪಾಡುವ ಯೋಧರಾಗಬೇಕು. ನಿಸ್ವಾರ್ಥ ಸೇವೆಗಾಗಿ ಪ್ರಯತ್ನಿಸಬೇಕು. ನ್ಯಾಯ ಧರ್ಮ ಸತ್ಯದ ಅಡಿಯಲ್ಲಿ ಸಾಗಬೇಕು. ಇಂತಹ ಕವಿಗೋಷ್ಠಿಗಳಿಂದ ವಿದ್ಯಾರ್ಥಿ ಪಡೆಯನ್ನು ಕಟ್ಟಲು ನಾವುಗಳು ಮುಂದಾಗಬೇಕು ಎಂದರು.
ವೈ ಬಿ ಕಾಂತರಾಜು ಅವರು ಮಾತಾನಾಡಿ ಪರಿಸರ ಉಳಿಸುವ ಕಾರ್ಯ ನಮ್ಮದಾಗಬೇಕು. ನಮ್ಮ ಜೀವನದ ಉಳಿವಿಗೆ ಪರಿಸರ ಅತ್ಯವಶ್ಯಕ. ಹಾಗಾಗಿ ಗಿಡಮರಗಳನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ನಮ್ಮ ಆಲೋಚನೆಗಳು ಸಾಗಬೇಕು. ಪ್ರಾಣಿ ಪಕ್ಷಿಗಳನ್ನು ಉಳಿಸಿಕೊಳ್ಳವ ಹಾದಿಯಲ್ಲಿ ಹೆಜ್ಜೆ ಹಾಕಬೇಕು ಎಂದರು. ಇದುವರೆಗೂ ಸಾಲುಮರದ ತಿಮ್ಮಕ್ಕನಂತೆ ನಾನು ಕೂಡ ಸಾವಿರಾರು ಗಿಡಮರಗಳನ್ನು ನೆಟ್ಟು ಉಳಿಸುವ ಪ್ರಯತ್ನದಲ್ಲಿದ್ದೇನೆ. ಪ್ರತಿಯೊಂದು ಕಾರ್ಯಕ್ರಮದಲ್ಲಿ ಕವಿಗಳಿಗೆ ಸಸಿಗಳನ್ನು ನೀಡಿ ಸಂರಕ್ಷಣೆ ಮಾಡಬೇಕೆಂದು ತಿಳಿಹೇಳುತ್ತೇನೆ ಎಂದರು.
ವೇದಿಕೆಯಲ್ಲಿ ಉಪನ್ಯಾಸಕ ಪರಮೇಶ ಮಡಬಲು, ಲೇಖಕಿ ರೇಖಾಪ್ರಕಾಶ್, ಸಾಹಿತ್ಯ ಸಂಘಟನೆಯ ಅಧ್ಯಕ್ಷೆ ಶಾಂತಹತ್ನಿ, ಸಂಶೋಧಕ ಕವಿ ಪುಟ್ಟಸ್ವಾಮಿ, ಸಮಾಜಸೇವಕ ಯೋಗೀಶಪ್ಪ, ಗಾಯಕಿ ದೇವಿರಮ್ಮ, ಇನ್ನೂ ಮುಂತಾದವರು ಉಪಸ್ಥಿತರಿದ್ದ ಕಾರ್ಯಕ್ರಮದಲ್ಲಿ ಅನೇಕರು ಕವಿತೆಗಳನ್ನು ವಾಚಿಸಿದರು. ವಾಚಿಸಿದ ಕವಿಗಳಿಗೆಲ್ಲಾ ಪೊ?ಲಿಸ್ ಇಲಾಖೆಯ ಕಾಂತರಾಜು ಪರಿಸರ ಕಿಟ್ ಗಳನ್ನು ವಿತರಿಸಿದರು.