ಸೈನಿಕರಂತೆ ರೈತರೂ ದೇಶಕ್ಕೆ ಮುಖ್ಯ; ಜಿ.ಎಂ ಸಿದ್ದೇಶ್ವರ್

ದಾವಣಗೆರೆ.ಸೆ.೧೩; ದೇಶಕ್ಕೆ ಸೈನಿಕರು ಎಷ್ಟು ಮುಖ್ಯವೋ ಅದೇ ರೀತಿ ರೈತರೂ ಮುಖ್ಯ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದರು.
ದಾವಣಗೆರೆ ತಾಲ್ಲೂಕಿನ ಆನಗೋಡು ಸಮೀಪದ ಉಳುಪಿನಕಟ್ಟೆ ಕ್ರಾಸ್ ಬಳಿಯ ರೈತ ಹುತಾತ್ಮರ ಸಮಾಧಿ ಸ್ಥಳದಲ್ಲಿ ರೈತ ಹುತಾತ್ಮರ ಸ್ಮರಣಾರ್ಥ ಸಮಿತಿ ವತಿಯಿಂದ ಹಮ್ಮಿಕೊಂಡಿದ್ದ ರೈತ ಹುತಾತ್ಮರಾದ ಓಬೇನಹಳ್ಳಿ ಕಲ್ಲಿಂಗಪ್ಪ ಮತ್ತು ಸಿದ್ದನೂರು ನಾಗರಾಜಚಾರ್ ಅವರ ೩೦ ನೇ ವರ್ಷದ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡಿದ ಅವರು ಆನಗೋಡಿನಲ್ಲಿ 1992 ರ ಸೆ.೧೩ ರಂದು ನಡೆದ ಗೋಲಿಬಾರ್ ನಲ್ಲಿ ರೈತರು ಮರಣ ಹೊಂದಿದ ದಿನ ಅವರ ಸ್ಮರಣಾರ್ಥ ಅದೇ ಸ್ಥಳದಲ್ಲಿ ಭವನ ಕಟ್ಟಿಸಲಾಯಿತು ಆದರೆ ರಾಷ್ಟ್ರೀಯ ಹೆದ್ದಾರಿ ಸಲುವಾಗಿ ಸಮಾಧಿ ಸ್ಥಳವನ್ನು ಸ್ಥಳಾಂತರ ಮಾಡಲಾಯಿತು.ಈ ಸ್ಥಳದಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನ ಬರುವುದಿಲ್ಲ.ಆದರೆ ಸಂಸದರ ಅನುದಾನದಲ್ಲಿ ೧೦ ಲಕ್ಷ ನೀಡಲಾಗುವುದು ಅದರಲ್ಲಿ ಅಭಿವೃದ್ಧಿ ಕೆಲಸ ಮಾಡಬಹುದು ಎಂದರು.ರೈತ ದೇಶದ ಬೆನ್ನೆಲುಬು ಎನ್ನುತ್ತೇವೆ ಆದರೆ ಅತಿವೃಷ್ಠಿ ಹಾಗೂ ಅನಾವೃಷ್ಠಿಗೆ ರೈತ ಬಸವಳಿದಿದ್ದಾರೆ.ಕೊರೊನಾದಿಂದ ಕಷ್ಟ ಪಟ್ಟಿದ್ದಾರೆ. ರೈತರ ನೆರವಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಳೆಗಳಿಗೆ ಬೆಂಬಲ ಬೆಲೆ ನೀಡಿದೆ.ಕೇಂದ್ರ ಸರ್ಕಾರ ಸಾಹಿಲ್ ಹೆಲ್ತ್ ಕಾರ್ಡ್ ನೀಡಲಾಗಿದೆ,ಪ್ರಧಾನ ಮಂತ್ರಿ ಕೃಷಿ ಸಮ್ಮಾನ್ ಯೋಜನೆ ಹೀಗೆ ಹತ್ತು ಹಲವು ಯೋಜನೆಗಳನ್ನು ಪ್ರಧಾನಿ ನೀಡಿದ್ದಾರೆ. ಗೊಬ್ಬರದ ಅಭಾವವಿಲ್ಲದಂತೆ ನೋಡಿಕೊಂಡಿದ್ದೇವೆ.ರೈತರಿಗೆ ಅನುಕೂಲವಾಗುವ ರೀತಿಯಲ್ಲಿ ಅನುದಾನ ನೀಡಲಾಗಿದೆ. ರೈತರ ಅಭಿವೃದ್ಧಿಗೆ ಸಾಕಷ್ಟು ಸುಧಾರಣೆ ಮಾಡಲಾಗುವುದು ೫೦ ವರ್ಷದಲ್ಲಿ ಸಾಧ್ಯವಾಗದ್ದನ್ನು ನಮ್ಮ ಸರ್ಕಾರ ಹಂತಹಂತವಾಗಿ ರೈತರ ಅಭಿವೃದ್ಧಿಯಾಗುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದರು.ಅಡಕೆ ಬಿಟ್ಟು ಇತರೆ ಬೆಳೆ ಬೆಳೆಯುವ ರೈತರ ನೆರವಿಗಾಗಿ ನಮ್ಮ ಸರ್ಕಾರ ಪ್ರಾಮಾಣಿಕ ಕೆಲಸ ಮಾಡುತ್ತಿದೆ.ರೈತರ ಪರವಾದ ಸರ್ಕಾರ ನಮ್ಮದು ಎಂದರು.
ವೇದಿಕೆಯಲ್ಲಿ ಸಾಣೇಹಳ್ಳಿ ಶ್ರೀ ತರಳಬಾಳು ಶಾಖಾಮಠದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.ಆವರಗೆರೆ ರುದ್ರಮುನಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.  ಸಮಿತಿಯ ಅಧ್ಯಕ್ಷ ಎನ್.ಜಿ ಪುಟ್ಟಸ್ವಾಮಿ ಅಧ್ಯಕ್ಷತೆ ವಹಿಸಿದ್ದರು.ಈ ವೇಳೆ ಮಾಜಿ ಶಾಸಕ ಬಸವರಾಜ್ ನಾಯ್ಕ್,ಅಣಬೇರು ಜೀವನಮೂರ್ತಿ,ತೇಜಸ್ವಿ ಪಟೇಲ್ ,ಹೆಚ್.ನಂಜುಂಡಪ್ಪ,ಎಸ್ ಬಸವಂತಪ್ಪ,ಗಂಗಾಧರಪ್ಪ,ಶಾಮನೂರು ಲಿಂಗರಾಜ್, ಕೆ.ಪಿ ಕಲ್ಲಿಂಗಪ್ಪ,ಹೊನ್ನೂರು ಮುನಿಯಪ್ಪ,ಎಂಎಸ್ ಕೆ ಶಾಸ್ತ್ರಿ,ಹೆಚ್.ಎನ್ ಶಿವಕುಮಾರ್, ನಾಗೇಶ್ವರರಾವ್ ಮತ್ತಿತರರಿದ್ದರು.

Attachments area