ಸೈನಿಕನ ನಿಧನಕ್ಕೆ ಕಂಬನಿ

ಬೀದರ್ :ಏ.24:ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಗೋರ್ಟಾ ಗ್ರಾಮದಲ್ಲಿ ಜನಿಸಿದ ಸಂಗ್ರಾಮ ತಂದೆ ಗುಂಡಪ್ಪ ನಿಂಬಾಯಿ ಎಂಬುವವರು ಭಾರತ ದೇಶದ ಕಾಶ್ಮೀರ ದ ಗಡಿಯಲ್ಲಿ ಜುಬೇಧಾರ್ ಆಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದರು. ದೇಶದ ಸೇವೆ ಸಲ್ಲಿಸುತ್ತಿರುವ ಸಮಯದಲ್ಲಿ ಹೃದಯಘಾತದಿಂದ ಮರಣವನ್ನು ಹೊಂದಿರುತ್ತಾರೆ. ಇವರ ಅಂತ್ಯಕ್ರಿಯೆಯು ಇಂದು ಸಾಯಂಕಾಲ 3:00 ಗಂಟೆಗೆ ತಮ್ಮ ಸ್ವಂತ ಹೊಲ ಚಿಟಗುಪ್ಪ ತಾಲೂಕಿನ ಹೊಸಳ್ಳಿ ಗ್ರಾಮದಲ್ಲಿ ಜರಗಲಿದೆ. ಪತ್ನಿ ಹಾಗೂ ಮೂವರ ಮಕ್ಕಳನ್ನು ಬಿಟ್ಟು ಅಗಲಿದ್ದು, ಆ ದೇವರು ಅವರ ಕುಟುಂಬಕ್ಕೆ ಆತ್ಮಸ್ಥೈರ್ಯ ಸಿಗಲೆಂದು ಕೇಳಿಕೊಳ್ಳುತ್ತೇವೆ.
ಅದೇರೀತಿ ಸರಕಾರವು ಆ ಕುಟುಂಬದ ಸಹಾಯಕ್ಕೆ ಬರಬೇಕೆಂದು ಹೊಸಳ್ಳಿ ಗ್ರಾಮಸ್ಥರು ಒತ್ತಾಯಿಸಿದ್ದಾರೆ.