ಸೈದ್ಧಾಂತಿಕ ಹೋರಾಟದ ಪ್ರತಿಫಲವೇ ಬಿಜೆಪಿ


ಹುಬ್ಬಳ್ಳಿ ಏ 8 : ಬಿಜೆಪಿ ಸ್ಥಾಪನಾ ದಿವಸ ಅಂಗವಾಗಿ ಹುಬ್ಬಳ್ಳಿಯ ವಾರ್ಡ್ ನಂ 34 ರಲ್ಲಿ ವಾರ್ಡ್ ಪ್ರಮುಖರ ಮತ್ತು ಬೂತ್ ಅಧ್ಯಕ್ಷರುಗಳ ಮನೆ ಮೇಲೆ ಬಿಜೆಪಿ ಪಕ್ಷದ ಧ್ವಜಾರೋಹಣ ಮಾಡಲಾಯಿತು. ಸಹಸ್ರಾರು ತ್ಯಾಗ ಬಲಿದಾನಗಳ ಪ್ರತೀಕವಾಗಿ, ಸೈದ್ಧಾಂತಿಕ ಹೋರಾಟದ ಪ್ರತಿಫಲವೇ ಬಿಜೆಪಿ. ಈ ದಿನವನ್ನು ಸಂಭ್ರಮದಿಂದ ಆಚರಿಸಿ, ವಿಜಯದ ಸಂಕಲ್ಪ ಮಾಡೋಣ ಎಂದು ಸಂಘಟನಾ ಪ್ರಧಾನ ಕಾರ್ಯದರ್ಶಿ ಜಯತೀರ್ಥ ಕಟ್ಟಿ ಧ್ವಜಾರೋಹಣ ಮಾಡುವ ಮೂಲಕ ಮಾತನಾಡಿದರು.
ಈ ಸಂದರ್ಭದಲ್ಲಿ ಮಾಜಿ ಉಪಮಹಾಪೌರರಾದ ಲಕ್ಷ್ಮೀ ಉಪ್ಪಾರ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಕಿರಣ ಉಪ್ಪಾರ, ಬಿಜೆಪಿ ಪ್ರಮುಖರಾದ ಗಂಗಾ ಅಂಗಡಿ, ನವೀನ್ ಹತ್ತಿಬೆಳಗಲ್,ಶಿವಪ್ರಸಾದ್ ಅನ್ವೇರಿ, ಸಾಗರ ಬಳ್ಳಾರಿ, ಗಜಾನನ್ ರಾಜೊಳ್ಳ,’ ಮಂಜುಸಿಂಗ್ ಹಜೇರಿ,ಮಂಜುನಾಥ್ ನರಗುಂದಮಠ, ಪರಶುರಾಮ್ ಗೌಡರ್,ಅನಿಲ್ ಒಸ್ವಾಲ್, ವೈಷ್ಣವಿ ಹಿರೇಮಠ್ ಮಂಗಲ ಸೈನಿಕಗ, ದೈವಿಕ ವಾಲಿಕಾರ್, ಸುನಿತಾ ಸರೋಜಾ,ಮತ್ತು ವಾರ್ಡಿನ ಅನೇಕ ಕಾರ್ಯಕರ್ತರು ಉಪಸ್ಥಿತರಿದ್ದರು.