
ದಾವಣಗೆರೆ. ಮಾ.16; ಪ್ರಸ್ತುತ ರಾಜಕೀಯ ಪರಿಸ್ಥಿತಿ ಕೊರಕಲಾಗಿದೆ ಚನ್ನಗಿರಿ ಶಾಸಕರ ಭ್ರಷ್ಟಾಚಾರ ಸಾಕಷ್ಟು ಚರ್ಚೆಯಾಗುತ್ತಿದೆ.ಇದು ಕೇವಲ ಚನ್ನಗಿರಿ ಅಷ್ಟೇ ಅಲ್ಲ ಎಲ್ಲೆಡೆ ಹರಡಿರುವ ಸಮಸ್ಯೆಯಾಗಿದೆ ಇಂತಹ ಸಮಸ್ಯೆ ನಿವಾರಣೆಗಾಗಿ ಉತ್ತಮ ಹಿನ್ನೆಲೆಯುಳ್ಳವರು ಸೈದ್ದಾಂತಿಕ ನಿಲುವು ಹೊಂದಿರುವವರು ರಾಜಕೀಯ ಕ್ಷೇತ್ರಕ್ಕೆ ಬರಬೇಕಿದೆ ಈ ನಿಟ್ಟಿನಲ್ಲಿ ಸಂಯುಕ್ತ ಜನತಾದಳ ಪಕ್ಷದಿಂದ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ಎಲ್ಲಾ ವರ್ಗಗಳನ್ನೊಳಗೊಂಡ ಅಭ್ಯರ್ಥಿಗಳಿಗೆ ಟಿಕೇಟ್ ನೀಡಲಾಗುತ್ತಿದೆ ಎಂದು ಸಂಯುಕ್ತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷ ಮಹಿಮಾ ಜೆ.ಪಟೇಲ್ ಹೇಳಿದ್ದಾರೆ.ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಭ್ರಷ್ಟ ವ್ಯವಸ್ಥೆ ಬದಲಾಯಿಸಲು ಆಲೋಚನೆ,ಭಾವನೆ,ಚಿಂತನೆಗಳು ಬದಲಾಗಬೇಕು.ಚುನಾವಣಾ ಸುಧಾರಣೆ ಬಗ್ಗೆ ಹೆಚ್ಚಿನ ಒತ್ತು ನೀಡಲಾಗಿದ್ದು ನಮ್ಮನ್ನು ನಾವು ಗೌರವಯುತವಾಗಿ ನಡೆಸಿಕೊಳ್ಳಬೇಕಿದೆ.ಜನರು ಕೂಡ ಅಭ್ಯರ್ಥಿಗಳ ಹಣ ಆಮೀಷಗಳಿಗೆ ಒಳಗಾಗದೇ ಸೂಕ್ತ ಹಾಗೂ ಅರ್ಹರನ್ನು ಆಯ್ಕೆ ಮಾಡಬೇಕು ಎಂದರು. ನಮ್ಮ ಸಂವಿಧಾನದ ಮೂಲ ಸಮಾಜವಾದಿ ಸಿದ್ಧಾಂತದ ಜೊತೆಗೆ ಜಾತ್ಯಾತೀತತೆಯನ್ನು ಉಳಿಸಿಕೊಂಡು ಹೋಗುವುದಲ್ಲದೆ ಸರ್ವರಿಗೂ ಸಾಮಾಜಿಕ ಆರ್ಥಿಕ ಮತ್ತು ರಾಜಕೀಯ ಸಮಾನತೆಯನ್ನು ಕಲ್ಪಿಸುವುದರ ಮೂಲಕ ಭಾತೃತ್ವವನ್ನು ಬೆಳೆಸಿಕೊಂಡು ಹೋಗುವಂತಹ ಭಾವನೆಗಳನ್ನು ಸಾರ್ವಜನಿಕವಾಗಿ ಸೈದ್ಧಾಂತಿಕ ನೀಲುವನ್ನು ಹರಡುವಂತ ಸೃಜನಾತ್ಮಕ ಕಾರ್ಯಕ್ಕೆ ಸಂಯುಕ್ತ ಜನತಾದಳ ಪ್ರಯತ್ನಿಸುತ್ತಾಬಂದಿದೆ. ಚುನಾವಣೆಗಳು ನಡೆಯುವ ರೀತಿಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಲು ಚುನಾವಣಾ ಸುಧಾರಣೆ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸುವುದು ಬಹು ಮುಖ್ಯವಾದ ಸಂಗತಿಯಾಗಿದೆ. ಈ ವಿಷಯದಲ್ಲಿ ಸಂಯುಕ್ತ ಜನತಾದಳ ಪ್ರಾಮಾಣಿಕ ಪ್ರಯತ್ನವನ್ನು ಮುಂದುವರೆಸಿದೆ ಎಂದರು. ಸಂಯುಕ್ತ ಜನತಾದಳ ಮುಂಬರುವ ಕರ್ನಾಟಕ ರಾಜ್ಯದ ವಿದಾನಸಭಾ ಚುನಾವಣೆಯಲ್ಲಿ ಎಲ್ಲ ವರ್ಗಗಳನ್ನು ಒಳಗೊಂಡ ವೇದಿಕೆಯೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ನಿಶ್ಚಯಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಸಿದ್ದಯ್ಯ,ಮುದ್ದಾಪುರ ರೆಹಮಾನ್, ನುಲೇನೂರು ಶಂಕರೇಗೌಡ,ಸುನೀತಾ,ವಕೀಲರಾದ ಬಸವರಾಜ್ ತಿಳುವಳ್ಳಿ,ಚನ್ನಬಸಪ್ಪ ಮತ್ತಿತರರಿದ್ದರು.