ಸೈದಾಪೂರ ಗ್ರಾಮದ ಕಂದಾಯ ನಿರೀಕ್ಷಕರ ಕಛೇರಿ,ಗ್ರಾಮ ಪಂಚಾಯತ್ ಕಾರ್ಯಾಲಯಗಳಿಗೆ ಆಕಸ್ಮಿಕ ಭೇಟಿ

ಯಾದಗಿರಿ : ಮೇ 22: : ಯಾದಗಿರಿ ಕರ್ನಾಟಕ ಲೋಕಾಯುಕ್ತ ಅಧೀಕ್ಷಕರು ???ಂಟನಿ ಜಾನ್ ಜೆ.ಕೆ ಅವರ ಮಾರ್ಗದರ್ಶಿನದ ಅನ್ವಯ ಸರ್ಕಾರಿ ಕಛೇರಿಗಳಲ್ಲಿನ ಕುಂದು ಕೊರತೆಗಳ ಬಗ್ಗೆ ಮತ್ತು ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಗೆ ಸರ್ಕಾರಿ ಕಛೇರಿಗಳಲ್ಲಿ ಕೆಲಸಗಳಲ್ಲಿ ವಿಳಂಭ ಮಾಡುತ್ತಿದ್ದರೆ, ಕಾರಣ ಅಲ್ಲದೆ ಅರ್ಜಿ ತಿರಸ್ಕರಿಸುತ್ತಿದ್ದರೆ ಅಲ್ಲದೇ ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡಿಕೊಡಲು ಯಾರಾದರೂ ಲಂಚ ಕೇಳಿದರೆ ನಮ್ಮ ಗಮನಕ್ಕೆ ತರಬಹುದಾಗಿದೆ ಎಂದು ಯಾದಗಿರಿ ಕರ್ನಾಟಕ ಲೋಕಾಯುಕ್ತ ಆರಕ್ಷಕ ಉಪಾಧೀಕ್ಷಕರಾದ ಹಣಮಂತರಾಯ ಅವರು ತಿಳಿಸಿದರು.

 ಯಾದಗಿರಿ ಕರ್ನಾಟಕ ಲೋಕಾಯುಕ್ತ ಅವರೊಂದಿಗೆ 2024ರ ಮೇ 21ರ ಮಂಗಳವಾರ ರಂದು ಸೈದಾಪೂರ ಗ್ರಾಮದ ಕಂದಾಯ ನಿರೀಕ್ಷಕರ ಕಛೇರಿ ಮತ್ತು ಗ್ರಾಮ ಪಂಚಾಯತ್ ಕಾರ್ಯಾಲಯಗಳಿಗೆ ಆಕಸ್ಮಿಕ ಭೇಟಿ ನೀಡಿ ಅವರು ಮಾತನಾಡಿದರು.
 ಸದರಿ ಕಛೇರಿಯಲ್ಲಿ ನೆರೆದಿದ್ದ ಸಾರ್ವಜನಿಕರಿಗೆ ಲೋಕಾಯುಕ್ತ ಸಂಸ್ಥೆಯ ಕಾರ್ಯವೈಖರಿ ಬಗ್ಗೆ ಸೂಕ್ತ ಅರಿವು ಮೂಡಿಸಲಾಯಿತು. ಸರ್ಕಾರಿ ಕಛೇರಿಗಳಲ್ಲಿನ ಕುಂದು ಕೊರತೆಗಳ ಬಗ್ಗೆ ಮತ್ತು ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಿಗೆ ಸರ್ಕಾರಿ ಕಛೇರಿಗಳಲ್ಲಿ ಕೆಲಸಗಳಲ್ಲಿ ವಿಳಂಭ ಮಾಡುತ್ತಿದ್ದರೆ, ಕಾರಣ ಅಲ್ಲದೆ ಅರ್ಜಿ ತಿರಸ್ಕರಿಸುತ್ತಿದ್ದರೆ ಅಥವಾ ಕಛೇರಿಗೆ ಅಲೆದಾಡಿಸುತ್ತಿದ್ದರೆ, ಅಲ್ಲದೇ ಸರ್ಕಾರಿ ಕಛೇರಿಗಳಲ್ಲಿ ಕೆಲಸ ಮಾಡಿಕೊಡಲು ಯಾರಾದರೂ ಲಂಚ ಕೇಳಿದರೆ ನಮ್ಮ ಗಮನಕ್ಕೆ ತರಬಹುದಾಗಿದೆ ಅಂತಾ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
 ಈ ಸಂದರ್ಭದಲ್ಲಿ ಯಾದಗಿರಿ ಕರ್ನಾಟಕ ಲೋಕಾಯುಕ್ತ ಪೆÇಲೀಸ್ ಉಪಾಧೀಕ್ಷಕರು ಶ್ರೀ ಹಣಮಂತರಾಯ ನೇತೃತ್ವದಲ್ಲಿ ಪೆÇಲೀಸ್ ನಿರೀಕ್ಷಕರು-1 ಶ್ರೀ ಹನಮಂತ ಬಿ.ಸಣಮನಿ, ಪೆÇಲೀಸ್ ನಿರೀಕ್ಷಕರು-2 ಶ್ರೀ ಅರುಣ ಮುರುಗುಂಡಿ, ಹಾಗೂ ಯಾದಗಿರಿ ಕರ್ನಾಟಕ ಲೋಕಾಯುಕ್ತ ಸಿಬ್ಬಂದಿಯವರಾದ ಶ್ರೀ ಸುರೇಶ ರೆಡ್ಡಿ, ಶ್ರೀ ರಾಮಾನಾಯಕ್, ಶ್ರೀ ಅಮರನಾಥ, ಶ್ರೀ ನವೀನಕುಮಾರ, ಮಲ್ಲಿಕಾರ್ಜುನ, ಮಲ್ಲಪ್ಪ, ಕಾಸಿ ಉಪಸ್ಥಿತರಿದ್ದರು.