`ಸೈದಾಪುರ’ ಹಾಡುಗಳ ‌ಬಿಡುಗಡೆ

ಕಲ್ಯಾಣ ಕರ್ನಾಟಕದ ಯಾದಗಿರಿ ಜಿಲ್ಲೆ ಬಳಿಯ ಊರು “ಸೈದಾಪುರ”. ಈ ಊರಿನ ಹೆಸರೆ ಚಿತ್ರದ ಶೀರ್ಷಿಕೆಯಾಗಿದೆ. ಚಿತ್ರಕ್ಕೆ ಸತ್ಯ ಲವ್ ಸ್ಟೋರಿ ಎಂಬ ಅಡಿಬರಹವಿದೆ.

ಶ್ರೀರಾಮ್ ನಿರ್ದೇಶಿಸಿದ್ದಾರೆ.ಶಾಲೆಯಲ್ಲಿ ಓದುತ್ತಿರುವ ಮಕ್ಕಳು ಪ್ರೀತಿಯ ಬಲೆಗೆ ಬಿದ್ದಾಗ ಮುಂದೆ ಏನಾಗುತ್ತದೆ ಎನ್ನುವುದೇ ಚಿತ್ರದ ಕಥಾ ಸಾರಾಂಶವಾಗಿದೆ.

ಹಾಡುಗಳ ಬಿಡುಗಡೆ ಇತ್ತೀಚೆಗೆ ನೆರವೇರಿತು.ಹಲವು ಗಣ್ಯರು ಆಗಮಿಸಿ ಚಿತ್ರಕ್ಕೆ ಶುಭ ಹಾರೈಸಿದರು. ನಾಯಕ ಭಾನುಪ್ರಕಾಶ್, ನನ್ನ ಅಣ್ಣ ಕೂಡ ಸಿನಿಮಾ ಮಾಡಿದ್ದ. ಚಿತ್ರ ತೆರೆಗೆ ಬರುವ ಮುಂಚೆಯೇನಮ್ಮನ್ನು ಬಿಟ್ಟು ಹೋದ. ಸಂಕಟ ಕುಟುಂಬನ್ನು ಇಂದಿಗೂ ಕಾಡುತ್ತಿದೆ. ಅಣ್ಣನ ನಿಧನದ ನಂತರ ಊರಿನ ಕೆಲವರು ನಮ್ಮನ್ನು‌ ನೋಡುತ್ತಿದ್ದ ದೃಷ್ಟಿಯೇ ಬೇರೆ ಆಯಿತು. ನಮ್ಮನ್ನು ನೋಡಿ ನಗುವವರ ಮುಂದೆ ಎದ್ದು ನಿಲ್ಲಬೇಕು ಎಂದು ನಾನು ಈ ಸಿನಿಮಾದಲ್ಲಿ ನಟಿಸಿದ್ದೇನೆ ಎಂದು ಭಾವುಕರಾದರು.

ಅಣ್ಣನ ಹಲವು ಸ್ನೇಹಿತರಾದ ಅಶೋಕ್, ಅಬ್ದುಲ್ ರೋಫ್ ಸಿದ್ವಿಕ್, ನಿಂಗಪ್ಪ, ಇರ್ಫಾನ್, ಮಲ್ಲೇಶ್ ಮುಂತಾದವರು ಜೊತೆ ನಿಂತು ಚಿತ್ರ ಬಿಡುಗಡೆ ಹಂತದವರೆಗೂ ತಂದಿದ್ದಾರೆ ಎಂದರು.

ನಾಯಕಿ ಸಂಗೀತ , ಕನ್ನಡದಲ್ಲಿ ಚೊಚ್ಚಲ ಚಿತ್ರ. ‌ ಪಾತ್ರ ತುಂಬಾ ಚೆನ್ನಾಗಿದೆ. ಬೆಂಬಲ ನಮಗಿರಲಿ ಎಂದರು. ನಿರ್ಮಾಪಕರ ಪೈಕಿ ಮಾತನಾಡಿದ ಅಶೋಕ್, ಮಹದೇವ ನನ್ನ ಗೆಳೆಯ. ಅವನ ಸಾವು ನಮ್ಮಗೆಲ್ಲಾ ತಂದಿದೆ. ಈ ಚಿತ್ರದ ಬಗ್ಗೆ ಹೇಳಿದಾಗ ಮಹದೇವನ ಮೇಲಿನ ಪ್ರೀತಿಯಿಂದ ಕೆಲವು ಸ್ನೇಹಿತರು ಭಾನುಪ್ರಕಾಶ್ ಜೊತೆ ನಿಂತೆವು ಎಂದರು.

ಸಿರಿ ಮ್ಯೂಸಿಕ್ ನ ಸುರೇಶ್ ಚಿಕ್ಕಣ್ಣ ಹಾಗೂ ಚಿತ್ರತಂಡದ ಅನೇಕ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದು, ತಮ್ಮ ಅನುಭವ ಹಂಚಿಕೊಂಡರು.

ಸಂಗೀತ ನಿರ್ದೇಶಕ, ವಿನು ಮನಸು ನಾಲ್ಕು ಹಾಡುಗಳು ಸುಂದರವಾಗಿ ಮೂಡಿಬಂದಿದೆ. ಎಲ್ಲರೂ ನಮ್ಮ ಚಿತ್ರವನ್ನು ಪ್ರೋತ್ಸಾಹಿಸಿ ಎಂದರು

ಮಾಣಿಕ್ಯ ಪ್ರಭು, ತಮ್ಮುಡು ಸಾಯಿ ಛಾಯಾಗ್ರಹಣ, ಬಾಲು ನೃತ್ಯ ನಿರ್ದೇಶನ ಹಾಗೂ ಕವಿತ ಬಂಡಾರಿ ಸಂಕಲನವಿರುವ ಚಿತ್ರಕ್ಕೆ ರಾಜ್ ಭಾಸ್ಕರ್ ಹಿನ್ನೆಲೆ ಸಂಗೀತ ನೀಡಿದ್ದಾರೆ. ವಿಭಿನ್ನ ಕಥೆಯ ಚಿತ್ರ ಮುಂದಿನ ತಿಂಗಳು ತೆರೆಗೆ ಬರಲಿದೆ.