ಸೈದಾಪುರ: ಶ್ರೀ ವಾಸವಿ ಜಯಂತಿ ಪ್ರಯುಕ್ತ ಅನ್ನ ಸಂತರ್ಪಣೆ

oppo_0

ಸೈದಾಪುರ:ಮೇ.19:ಪಟ್ಟಣದಲ್ಲಿ ಶ್ರಿ ವಾಸವಿ ಜಯಂತಿ ಪ್ರಯುಕ್ತ ಬಾದಮಿ ಪರಿವಾರದಿಂದ ಸಾರ್ವಜನಿಕ ಅನ್ನ ಸಂತರ್ಪಣಾ ಕಾರ್ಯಕ್ರಮ ಜರುಗಿತು. ಈ ಸಂದರ್ಭದಲ್ಲಿ ನ್ಯಾಯವಾದಿ ಸಂತೋಷ ಬಾದಾಮಿ ಮಾತನಾಡಿ, ಮಾನವನ ಮೋಕ್ಷ ಸಾಧನೆಗೆ ಆತ್ಮೋದ್ಧರಕ್ಕೆ ತ್ಯಾಗ ಬಲಿದಾನಗಳೇ ಮಾರ್ಗವೆಂದು ತೋರಿಸಿಕೊಟ್ಟ ಜಗನ್ಮಾತೆ ವಾಸವಿ ದೇವಿಯ ಜೀವನಾದರ್ಶಗಳು ಪ್ರತಿಯೊಬ್ಬರು ಪಾಲಿಸಬೇಕು ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಈಶ್ವರಯ್ಯ ಬಾದಮಿ, ವಿನೋದ, ವೆಂಕಟೇಶ, ಶ್ರೀನಿವಾಸ ಬೈರಂಕೊಂಡಿ, ಮಹೇಶ ಬಾಗ್ಲಿ, ಭರತ, ಸಾಬಣ್ಣ, ಹಮ್ಮಿನರೆಡ್ಡಿ, ಮಲ್ಲಣ್ಣ, ಸಮೀನಾಬೇಗಂ, ಬಸವಲಿಂಗಮ್ಮ, ಲಕ್ಚ್ಮೀ, ಪಾರ್ವತಿ, ಸಂಜನಾ, ಅನೀತಾ, ಆಕಾಶಮ್ಮ, ಕಾವೇರಿ, ಪಿಂಕಿ, ನಾಗರಾಜ ಸೇರಿದಂತೆ ಇತರರಿದ್ದರು.