
ಸೈದಾಪುರ:ಮೇ.1:ಪಟ್ಟಣದಲ್ಲಿ ರವಿವಾರದಂದು ಆರ್ಯ ವೈಶ್ಯ ಸಮಾಜದ ಕುಲದೇವತೆ ಕನ್ನಿಕಾ ಪರಮೇಶ್ವರಿ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಬೆಳಗ್ಗೆ 8 ಗಂಟೆಗೆ ಗ್ರಾಮದ ವಿಶ್ವನಾಥ ಮಂದಿರದಿಂದ ಸುಮಂಗಲೆಯರ ಕುಂಭ ಕಳಸದೊಂದಿಗೆ ಮುಖ್ಯ ರಸ್ತೆಯ ಮೂಲಕ ವಾಸವಿ ವಿದ್ಯಾ ಸಂಸ್ಥೆಯವರೆಗೆ ಕನ್ನಿಕಾ ಪರಮೇಶ್ವರಿಯ ಭಾವಚಿತ್ರದ ಮೆರವಣಿಗೆ ಮಾಡಲಾಯಿತು. ಈ ಸಂದರ್ಭದಲ್ಲಿ ಸಮಾಜ ಭಾಂದವರು ತಮ್ಮ ಅಂಗಡಿಗಳನ್ನು ಬಂದ್ ಮಾಡಿ, ಬಿಳಿ ಸಮವಸ್ತ್ರದೊಂದಿಗೆ ಭಾಗಿಯಾಗುವುದು ವಿಶೇಷವಾಗಿತ್ತು.
ಕರ್ನಾಟಕ ರಾಜ್ಯ ಆರ್ಯ ವೈಶೈ ಮಹಾಸಭಾ ನಾಮ ನಿರ್ದೇಶಕ ರಾಘವೇಂದ್ರ ಬದಾಮಿ, ಆರ್ಯ ವೈಶ್ಯ ಸೇವಾ ಸಂಘದ ಅಧ್ಯಕ್ಷ ಲಕ್ಷ್ಮೀ ನಾರಾಯಣಪ್ಪ ಪಾಲದಿ, ಕಾರ್ಯದರ್ಶಿ ವೆಂಕಟೇಶ ಜಿ ಪುರಿ, ಮಹಿಳಾ ಸಂಘದ ಅಧ್ಯಕ್ಷೆ ವಸಂತಮ್ಮ ಮಿರಿಯಾಲ, ಕಾರ್ಯದರ್ಶಿ ಕೆ.ಪಿ ಸವಿತಾ ವಸಂತ ಸೇರಿದಂತೆ ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.