ಸೈದಾಪುರ:ಸಂಕ್ರಾಂತಿ ಹಬ್ಬಕ್ಕಿಲ್ಲಾ ಕೊವಿಡ ನಿಯಮ

ಸೈದಾಪುರ:ಜ.14:ಪಟ್ಟಣದಲ್ಲಿ ಮಕರ ಸಂಕ್ರಾಂತಿ ಹಬ್ಬದ ಅಂಗವಾಗಿ ವ್ಯಾಪಾರ ವಹಿವಾಟು ಜೋರಾಗಿತ್ತು. ವ್ಯಾಪಾರಿಗಳು, ಗ್ರಾಹಕರು ಮಾಸ್ಕ ಹಾಗೂ ಸಾಮಾಜಿಕ ಅಂತರ ಇಲ್ಲದೆ ತರಕಾರಿ ಸೇರಿದಂತೆ ಇತರೆ ವಸ್ತುಗಳ ಮಾರಾಟ ಖರೀದಿಯಲ್ಲಿ ತೊಡಗಿರುವುದು ಸಂಕ್ರಾಂತಿ ಹಬ್ಬಕ್ಕೆ ಕೊವಿಡ ನಿಯಮ ಇಲ್ಲಾ ಎಂಬುವಂತಿತ್ತು. ಇದನ್ನು ನಿರ್ವಹಣೆ ಮಾಡಬೇಕಾದ ಗ್ರಾಮ ಪಂಚಾಯತ ಅಧಿಕಾರಿಗಳು ಹಾಗೂ ಪೊಲೀಸ ಇಲಾಖೆ ಸಿಬ್ಬಂದಿಗಳು ಇಲ್ಲದಿರುವುದು ಸಾಂಕ್ರಿಮಿಕ ರೋಗದ ಬಗೆಗಿನ ನಿಷ್ಕಾಳಜಿ ತೋರಿಸುವಂತಿತ್ತು. ವಾರಂತ್ಯ ಕಫ್ರ್ಯೂ ಸಂದರ್ಭದಲ್ಲಿ ವ್ಯಾಪಾರಸ್ಥರು ಅಂಗಡಿಗಳನ್ನು ಬಂದ ಮಾಡಿದರೆ ಪೊಲೀಸ ಇಲಾಖೆ ಬ್ಯಾರಿಕೆಡಗಳನ್ನು ಹಾಕಿ ಕೊರೊನ ನಿಯಂತ್ರಣಕ್ಕೆ ಪ್ರಯತ್ನ ಮಾಡಲಾಗಿತ್ತು. ಇದು ಜನರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಸಂಕ್ರಾಂತಿ ಹಬ್ಬದ ಭರಾಟೆಯಲ್ಲಿ ಇದು ಯಾವುದು ಕಾಣದೆ ಇರುವುದು ವೈರಸ್ ಶನಿವಾರ ಹಾಗೂ ರವಿವಾರ ಮಾತ್ರ ಸಂಬಂದವೇ ಎಂದು ಪ್ರಜ್ಞಾವಂತ ನಾಗರಿಕರು ಪ್ರಶ್ನೆಸುವಂತಾಗಿದೆ.