ಸೈದಾಪುರ:ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆವಾಲ್ಮೀಕಿಯವರ ಆದರ್ಶಗಳು ಸರ್ವ ಕಾಲಕ್ಕೂ ಪ್ರಸ್ತುತ:ಬಾಗ್ಲಿ

ಸೈದಾಪುರ:ಅ;29ರಾಮಾಯಣ ಮೇರು ಕೃತಿಯ ಮೂಲಕ ಜೀವನ ಮೌಲ್ಯಗಳನ್ನು ಜಗತ್ತಿಗೆ ತಿಳಿಸಿದ ಮಹರ್ಷಿ ವಾಲ್ಮೀಕಿಯವರ ತತ್ವ ಆದರ್ಶಗಳು ಸರ್ವ ಕಾಲಕ್ಕೂ ಪ್ರಸ್ತುತವಾಗಿವೆ ಎಂದು ಶಿಕ್ಷಕ ದೇವೇಂದ್ರಕುಮಾರ ಬಾಗ್ಲಿ ಅಭಿಪ್ರಾಯಪಟ್ಟರು.
ಪಟ್ಟಣದ ವಾಸವಿ ವಿದ್ಯಾ ಸಂಸ್ಥೆಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ನಿಮಿತ್ತ ವಾಲ್ಮೀಕಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು. ಉತ್ತಮ ಮೌಲ್ಯಗಳನ್ನು ಅರಿತುಕೊಂಡು ಬಾಳಿದಾಗ ಮಾತ್ರ ಆಚರಣೆಯ ಮಹತ್ವ ಹೆಚ್ಚಾಗುತ್ತದೆ. ಸಮಾಜಕ್ಕೆ ಹಾಗೂ ಜಗತ್ತಿಗೆ ದಾರಿ ದೀಪವಾದ ಮಹರ್ಷಿಯವರ ತತ್ವಾದರ್ಶಗಳನ್ನು ಇಂದಿನ ಯುವಜನಾಂಗದವರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಶೈಕ್ಷಣಿಕವಾಗಿ ಬೆಳೆದು ಉತ್ತಮ ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕು ಎಂದು ಸಲಹೆ ನೀಡಿದರು. ಮುಖ್ಯಗುರು ಬಿ.ಬಿ.ವಡವಟ್, ಶಿಕ್ಷಕರಾದ ರಾಧ ಸಂಗೋಳಿ, ಶೃತಿ ಗುಮಡಾಲ್, ಸಂತೋಷ ದೇಸಾಯಿ, ಸುನೀತಾ ತಾರೇಶ, ಮಹೇಶ ಬಾಗ್ಲಿ, ಚಂದ್ರಕಲಾ ಸೇರಿದಂತೆ ಇತರರಿದ್ದರು..