ಸೈದಾಪುರ:ವಿಶ್ವನಾಥ ಮಂದಿರದಲ್ಲಿ ಭಕ್ತಾಧಿಗಳಿಂದ ನಿತ್ಯಾ ದೀಪೋತ್ಸವ

??????

ಸೈದಾಪುರ:ಡಿ.1:ಇಲ್ಲಿನ ಸೈದಾಪುರ ಪಟ್ಟಣದ ಕೇಂದ್ರ ಭಾಗದಲ್ಲಿರುವ ವಿಶ್ವನಾಥ ಮಂದಿರದಲ್ಲಿ ಕಾರ್ತಿಕ ಮಾಸದ ಅಂಗವಾಗಿ ನಿತ್ಯಾ ಸಾಯಂಕಾಲ ಭಕ್ತಾಧಿಗಳು ದೀಪ ಬೆಳಗಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಕುಟಂಬ ಸಮೇತ ಮಕ್ಕಳು, ಮಹಿಳೆಯರು ದೇವಸ್ಥಾನಕ್ಕೆ ಭೇಟಿ ನೀಡಿ ಪುನಿತರಾಗುತ್ತಿದ್ದಾರೆ. ಕಾರ್ತಿಕ ಮಾಸವು ಶ್ರೇಷ್ಠವಾಗಿರುವುದರಿಂದ ಈ ಸಮಯದಲ್ಲಿ ಮಾಡಿದ ಪುಣ್ಯ ಕಾರ್ಯಗಳು ಹೆಚ್ಚಿನ ಫಲಗಳನ್ನು ನೀಡುತ್ತವೆ. ದೀಪೋತ್ಸವ ದೇವರನ್ನು ಆರಾಧಿಸುವ ಮಾರ್ಗವಾಗಿ ಕಂಡು ಬಂದರೂ ನಮ್ಮ ಮನಸ್ಸು ಲೌಕಿಕ ಚಿಂತನೆಗಳಿಂದ ದೂರವಿರಿಸಿ ಮನಸ್ಸಿಗೆ ಮದ ನೀಡಿ ಶಾಂತತೆಗೆ ಕಾರಣವಾಗುತ್ತದೆ ಎಂಬುವುದು ಉಪನ್ಯಾಸಕಿ ಶ್ವೇತಾ ರಾಘವೇಂದ್ರ ಪೂರಿ ಸೇರಿದಂತೆ ಭಕ್ತರ ಅಭಿಪ್ರಾಯವಾಗಿದೆ.