ಸೈದಾಪುರ:ರೈಲ್ವೆ ನಿಲ್ದಾಣದಲ್ಲಿ ಕೊವಿಡ ತಪಾಸಣೆ

ಸೈದಾಪುರ:ಎ.26:ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಮಹಾರಾಷ್ಟ್ರ ಹಾಗೂ ಬೆಂಗಳೂರದಿಂದ ಬರುವ ಪ್ರಯಾಣಿಕರಿಗೆ ಸಮೂದಾಯ ಆರೋಗ್ಯ ಕೇಂದ್ರದ ವತಿಯಿಂದ ಕೊವಿಡ ತಪಾಸಣೆ ಮಾಡಲಾಗುತ್ತಿದೆ. ಮುಂಬೈಯಿಂದ ಬೆಂಗಳೂರಿಗೆ ಹೋಗುವ ಬೆಂಗಳೂರಿನಿಂದ ವಿವಿಧ ಪ್ರದೇಶಗಳಿಗೆ ತೆರಳುವ ಉದ್ಯಾನ ರೈಲು, ಲಿಂಕ ಏಕ್ಸ್‍ಪ್ರೇಸ್ ಸೇರಿದಂತೆ ಕೆಲ ರೈಲುಗಳಿಂದ ಬರುವ ಪ್ರಯಾಣಿಕರಿಗೆ ಕೊವಿಡ ತಪಾಸಣೆಗೆ ಒಳಪಡಿಸಲಾಗುತ್ತದೆ. ಕೊವಿಡ ನಿಯಂತ್ರಣಕ್ಕೆ ತಪಾಸಣೆ ಅತಿ ಮುಖ್ಯವಾಗಿದ್ದೂ ಪ್ರಯಾಣಿಕರು ಸಹಕರಿಸಬೇಕು. ಕೆಲ ಸಂದರ್ಭದಲ್ಲಿ ಪ್ರಯಾಣಿಕರು ತಪಾಸಣೆಗೆ ತಕಾರರು ಮಾಡುತ್ತಿದ್ದೂ ನಮಗೆ ಸೂಕ್ತ ರಕ್ಷಣೆ ಅತಿ ಮುಖ್ಯವಾಗಿದೆ ಎಂಬುವುದು ಆರೋಗ್ಯ ಇಲಾಖೆಯ ಸಿಬ್ಬಂದಿಗಳದ್ದಾಗಿದೆ.