
ಸೈದಾಪುರ:ಮಾ.26:ಡಾ.ಮಲ್ಲಿಕಾರ್ಜನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾದ ನಂತರ ಪ್ರಪ್ರಥಮ ಬಾರಿ ಪಟ್ಟಣಕ್ಕೆ ಆಗಮಿಸಿದ ಹಿನ್ನಲೆಯಲ್ಲಿ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಬೈಕ್ ರ್ಯಾಲಿ ಮೂಲಕ ಅದ್ದೂರಿ ಸ್ವಾಗತ ಕೋರಿದರು. ಮೆರವಣಿಗೆ ಸಾಗುವ ರಸ್ತೆ ಮಾರ್ಗದ ಎರಡು ಬದಿಯಲ್ಲಿ ಬ್ಯಾನರ ಮತ್ತು ಕಟೌಟಗಳನ್ನು ನಿರ್ಮಾಣ ಮಾಡಲಾಗಿತ್ತು. ಕೂಡಲೂರು ಬಸವಲಿಂಗೇಶ್ವರ ದ್ವಾರ ಬಾಗಿಲ ಹತ್ತಿರ ನಿರ್ಮಿಸಿದ್ದ ಹೆಲಿಪ್ಯಾಡ್‍ನಿಂದ ಮುಖ್ಯ ವೇದಿಕೆಯವರೆಗೂ ಸುಮಾರು ಒಂದು ಕೀಲೋ ಮೀಟರ್ ಕಾರ್ಯಕರ್ತರು ಬೈಕ್ ರ್ಯಾಲಿ, ಹೂ ಮಳೆ ಸುರಿಯುವ ಮೂಲಕ ಮೆರವಣೆಗೆ ಮಾಡಿದರು.
ಅಡಿಗಲ್ಲು ಕಾರ್ಯಕ್ರಮ ಯಶಸ್ವಿಗೊಳಿಸಿದ ದೋಖಾ:ಕಾಂಗ್ರೆಸ್ ಪಕ್ಷದ ಕಾರ್ಯಲಯ ಅಡಿಗಲ್ಲನ್ನು ತನ್ನ ರಾಜಕೀಯ ಗುರು ಮಲ್ಲಿಕಾರ್ಜುನ ಖರ್ಗೆ ಅವರಿಂದಲೇ ಪೂರ್ಣಗೊಳ್ಳಬೇಕು ಎಂದು ಹಟಕ್ಕೆ ಬಿದ್ದ ದೋಖಾ ಅವರು ಇದಕ್ಕೆ ಬೇಕಾದ ಸಿದ್ಧತೆಯನ್ನು ಮಾಡಿಕೊಂಡು ಕಳೆದು ಎರಡು ಮೂರು ತಿಂಗಳಿಂದ ಕಾರ್ಯಕ್ರಮ ಮುಂದುಡಲಾಗಿತ್ತು. ಅಡಿಲ್ಲು ನಿರ್ಮಿಸಬೇಕೆಂಬ ಹಟಕ್ಕೆ ಬಿದ್ದ ದೋಕಾ, ಇದಕ್ಕೆ ಬೇಕಾದ ಸಿದ್ಧತೆ ಮಾಡಿಕೊಂಡಿದ್ದರು. ಖರ್ಗೆಯವರ ಆಗಮನದಿಂದ ಇಂದು ಅದು ನೆರವೇರಿದಂತಾಯಿತು. ಇದು ಅವರಿಗೆ ಸಂತಸವನ್ನುಂಟು ಮಾಡಿರುವುದು ಅಲ್ಲದೆ ಕ್ಷೇತ್ರದ ಕಾಂಗ್ರೆಸ್ ಸಂಘಟನೆಗೆ ಆನೆ ಬಲ ಬಂದಂತಾಗಿದೆ.
ಆಪ್ತ ಕಾರ್ಯಕರ್ತರನ್ನು ವೇದಿಕೆಯಲ್ಲಿ ನೆನೆದ ಖರ್ಗೆ:ಸೈದಾಪುರ ಪಟ್ಟಣ ಸೇರಿದಂತೆ ಸುತ್ತಲಿನ ಕಾರ್ಯಕರ್ತರನ್ನು ಮುಖಂಡರನ್ನು ನೆನಪಿಸಿಕೊಂಡು ತಮ್ಮ ಅಭಿವೃದ್ಧಿಯ ಕಾರ್ಯಗಳನ್ನು ತಿಳಿಸುತ್ತಾ ವೇದಿಕೆಯಲ್ಲಿ ಮಾತನಾಡಿದರು. ದಶಕಗಳ ಹಿಂದಿನ ನೆನಪುಗಳನ್ನು ಮೇಲುಕು ಹಾಕಿ ತನ್ನ ಸ್ವಕ್ಷೇತ್ರ ಮರೆತ್ತಿಲ್ಲವೆಂಬುವುದನ್ನು ಸಾಬಿತು ಮಾಡಿದರು.
ಬೈಕ್ ರ್ಯಾಲಿ ಸೇರಿದಂತೆ ಕಾರ್ಯಕ್ರಮದಲ್ಲಿ ಹಿರಿಯ ಮುಖಂಡರಾದ ಶರಣಿಕಕುಮಾರ ದೋಖಾ, ಚಿದಾನಂದಪ್ಪ ಕಾಳೆಬೆಳಗುಂದಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹಿಪಾಲರೆಡ್ಡಿ ದುಪ್ಪಲ್ಲಿ, ವಿಶ್ವನಾಥ ನೀಲಹಳ್ಳಿ, ಸೈದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಿರಂಜನರೆಡ್ಡಿ ಪಾಟೀಲ್ ಶೆಟ್ಟಿಹಳ್ಳಿ, ಮಹಿಳಾ ಘಟಕದ ಅಧ್ಯಕ್ಷೆ ಮಲ್ಲಮ್ಮ ಕೋಮಾರ್, ಯೂತ್ ಅಧ್ಯಕ್ಷ ವಿಜಯ ಕಂದಳ್ಳಿ, ಬನ್ನಪ್ಪ ಸಾಹುಕಾರ, ಕಿರಣ ಶಾ, ಹಂಪಣ್ಣಗೌಡ ಬೆಳಗುಂದಿ, ಪುಂಡಲಿಕ, ತಿಮ್ಮಾರೆಡ್ಡಿ, ಕೈಲಾಸ ಆಸ್ಪಲ್ಲಿ, ವೆಂಕಟೇಶ ಕೂಡ್ಲೂರು, ದೇವರಾಜ ಬಾಡಿಯಾಲ, ಮಂಜುನಾಥ ಮಲ್ಹಾರ, ಜುಬೇರ್ ಕಡೇಚೂರು, ಗಣೆಶ ಜೇಗರ್, ಬನ್ನಪ್ಪ ಹುಲಿಬೆಟ್ಟ ಸೇರಿದಂತೆ ಇತರರಿದ್ದರು.