ಸೈದಾಪುರ:ಭರ್ಜರಿ ವ್ಯಾಪಾರ

ಸೈದಾಪುರ:ಜ.14:ಇಲ್ಲಿನ ತರಕಾರಿ ಮಾರುಕಟ್ಟೆ ಸೇರಿದಂತೆ ವಿವಿಧ ಅಂಗಡಿಗಳಲ್ಲಿ ಮಕರ ಸಂಕ್ರಮಣ ಹಾಗೂ ಮೈಲಾಪುರ ಜಾತ್ರಾ ನಿಮಿತ್ತಾ ಶುಕ್ರವಾರದಂದು ವ್ಯಾಪಾರ ಜೋರಾಗಿ ಕಂಡುಬಂದಿತು. ಪಟ್ಟಣದ ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯ ಮೇಲೆ ತರಕಾರಿಗಳ ವ್ಯಾಪಾರ ದಟ್ಟವಾಗಿತ್ತು. ಜನತೆ ಸಂಕ್ರಾಂತಿಯ ದಿನೆಸೆಗಳನ್ನು ಕೊಂಡರು. ವಿವಿಧ ನಮೂನೆಯ ತರಕಾರಿಗಳು ಲಭ್ಯವಿದ್ದೂ, ಎರಡು ವರ್ಷಗಳ ನಂತರ ಯಾವುದೇ ಆತಂಕ ಇಲ್ಲದೆ ವ್ಯಾಪಾರ ವಹಿವಾಟು ಕಂಡು ಬಂದಿರುವುದು ಎಲ್ಲರಿಗೂ ಹರ್ಷವನ್ನುಂಟು ಮಾಡುವಂತ್ತಿತ್ತು.