ಸೈದಾಪುರ:ಪಶು ಆಸ್ಪತ್ರೆಯಲ್ಲಿ ವೈದ್ಯರ ಕೊರತೆ

ಸೈದಾಪುರ:ಏ.14:ಪಟ್ಟಣದ ಪಶು ಆಶ್ಪತ್ರೆಯಲ್ಲಿ ವೈಧ್ಯರ ಕೊರತೆಯಿಂದ ಸುತ್ತಲಿನ ಗ್ರಾಮಸ್ಥರು ಚಿಕಿತ್ಸೆ ಸೇರಿದಂತೆ ಇತರೆ ಕಾರ್ಯಗಳಿಗಾಗಿ ಪರದಾಡಬೇಕಾದ ಪರಸ್ಥಿತಿ ನಿರ್ಮಾಣವಾಗಿದೆ. ಸಂಗ್ವಾರ ಗ್ರಾಮದ ರೈತ ಮಲ್ಲಯ್ಯನ 3 ಆಡುಗಳು ಹಾಗೂ ಸೈದಾಪುರ ಪಟ್ಟಣದ ಲಕ್ಷ್ಮಣ ಬಾಗ್ಲಿ ಇವರ 1 ಕುರಿ ಸಾವನ್ನಪ್ಪಿದ್ದು ಅವುಗಳ ಶವ ಪರೀಕ್ಷೆಗಾಗಿ ವೈಧ್ಯರು ಇಲ್ಲದೆ ಸಹಾಯಕ ವೈದ್ಯರು ಮಾಡಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿ ಪರಿಣಮಿಸಿದೆ. ಈ ಕುರಿತು ತಾಲೂಕಾ ಪಶು ಇಲಾಖಾ ಅಧಿಕಾರಿ ಶರಣ ಗೋಪಾಲ ದೂರವಾಣಿಯಲ್ಲಿ ಮಾತನಾಡಿ ಇನ್ನೂ 15 ದಿನದಲ್ಲಿ ವೈದ್ಯರ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ.