ಸೈದಾಪುರ:ನಾಡ ಪ್ರಭು ಕೆಂಪೆಗೌಡ ಜಯಂತಿ ಆಚರಣೆ

ಸೈದಾಪುರ:ಜೂ.28:ಪಟ್ಟಣದ ವಿದ್ಯಾ ವರ್ಧಕ ಸಂಘದ ವಿವಿಧ ವಿಭಾಗಗಳಿಂದ ನಾಡ ಪ್ರಭು ಕೆಂಪೆಗೌಡ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಮಾಜ ವಿಜ್ಞಾನ ಶಿಕ್ಷಕ ಗೂಳಪ್ಪ.ಎಸ್.ಮಲ್ಹಾರ ಮಾತನಾಡಿ, ಬೆಂಗಳೂರು ನಗರದ ಅಭಿವೃದ್ಧಿಗೆ ಕೆಂಪೆಗೌಡರ ಕಾರ್ಯ ಅತಿ ಮಹತ್ವದ್ದಾಗಿದ್ದೂ ಅವರ ದೂರದೃಷ್ಟಿಯ ವಿಚಾರಧಾರೆಗಳು ಇತರರಿಗೆ ಮಾದರಿಯಾಗಬೇಕು. ಇವರ ಸೇವಾ ಮನೋಭಾವನೆಯ ಕಾರ್ಯ ಶ್ಲಾಘನೀಯವಾಗಿದೆ ಎಂದು ಹೇಳಿದರು.
ಮುಖ್ಯಗುರು ಲಿಂಗಾರೆಡ್ಡಿ ನಾಯಕ, ಪ್ರಾಂಶುಪಾಲ ಕರಬಸಯ್ಯ ದಂಡಿಗಿಮಠ, ಶಿಕ್ಷಕರಾದ ರಾಚಯ್ಯ ಸ್ವಾಮಿ ಬಾಡಿಯಾಲ, ಕಾಶಿನಾಥ ಶೇಖಸಿಂದಿ, ಸಂಗಾರೆಡ್ಡಿ, ಹೊನ್ನಪ್ಪ ಸಗರ, ರಾಚಪ್ಪ, ಸತೀಶಕುಮಾರ ಸೇರಿದಂತೆ ಇತರರಿದ್ದರು.