ಸೈದಾಪುರ:ಗ್ರಾ.ಪಂ.ಅಧ್ಯಕ್ಷರಿಂದ ಸಂಜೆವಾಣಿ ಕ್ಯಾಲೆಂಡರ್ ಬಿಡುಗಡೆ

ಸೈದಾಪುರ:ಜ.1:ಪಟ್ಟಣದ ಗ್ರಾಮ ಪಂಚಾಯಿತಿಯಲ್ಲಿ 2023ನೇ ವರ್ಷದ ಸಂಜೆವಾಣಿ ಪತ್ರಿಕೆಯ ಕ್ಯಾಲೆಂಡರನ್ನು ಅಧ್ಯಕ್ಷ ಮಾಳಪ್ಪ ಹರಿಕೇರಿ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಜೆವಾಣಿ ಪತ್ರಿಕೆ ಅದ್ಭುತವಾದ ಪತ್ರಿಕೆಯಾಗಿದೆ. ಇಂದಿನ ಸುದ್ದಿ ಹಿಂದೆ ಓದಲು ನಮಗೆ ನಮಗೆ ಅನುಕೂಲವಾಗುತ್ತದೆ ಹಾಗೂ ಕ್ಯಾಲೆಂಡರ್‍ಗಳು ಬಹಳ ಆಕರ್ಷಕವಾಗಿವೆ ಎಂದು ಹೇಳಿದರು. ಪತ್ರಿಕಾ ಬಳಗಕ್ಕೆ ಹಾಗೂ ಸಮಸ್ತ ಜನತೆಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಕೋರಿದರು.

ಗ್ರಾಮ ಪಂಚಾಯತಿ ಸದಸ್ಯರಾದ ಅರ್ಜುನ್ ಚೌಹಾಣ್, ರಾಕೇಶ್ ಕೋರೆ, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಕಾರ್ಯದರ್ಶಿ ದಿಲೀಪಕುಮಾರ, ಸಿಬ್ಬಂದಿ ಬಾಬು ಕಲಾಲ್ ಸೇರಿದಂತೆ ಇತರರಿದ್ದರು. ಪತ್ರಿಕಾ ವತಿಯಿಂದ ಅಲ್ಲಾ ಬಾಷಾ ಹಿಚಗೇರಿ ಓದುಗರಿಗೆ ಶುಭಕೋರಿ ವಂದಿಸಿದರು.